ಮುದ್ರಣ ಮಾಧ್ಯಮದ ಮೇಲೆ ಜನರ ನಂಬಿಕೆ ಹೆಚ್ಚು

KannadaprabhaNewsNetwork |  
Published : Jul 23, 2026, 03:00 AM IST
22ಬದ್ಮವಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕಲಾದಗಿಸಂವಿಧಾನದಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಇದ್ದ ಹಾಗೆ ಪತ್ರಿಕಾ ಅಂಗವೂ ಕಾರ್ಯನಿರ್ವಹಿಸುತ್ತಿದ್ದು ಪತ್ರಿಕಾಂಗ ತನ್ನದೇ ಆದ ಮಹತ್ವ ಹೊಂದಿದೆ ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಸಂವಿಧಾನದಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಇದ್ದ ಹಾಗೆ ಪತ್ರಿಕಾ ಅಂಗವೂ ಕಾರ್ಯನಿರ್ವಹಿಸುತ್ತಿದ್ದು ಪತ್ರಿಕಾಂಗ ತನ್ನದೇ ಆದ ಮಹತ್ವ ಹೊಂದಿದೆ ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ, ಕಲಾದಗಿ ಕಾರ್ಯನಿರತ ಪತ್ರಿಕಾ ಬಳಗದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಂಗ್ಲರ ಆಳ್ವಿಕೆಯಿಂದ ಮುಕ್ತಿ ಹೊಂದಲು ಪತ್ರಿಕೆಗಳು ತನ್ನದೇ ಆದ ಮಹತ್ತರ ಪಾತ್ರ ವಹಿಸಿದರೆ, ಸ್ವಾತಂತ್ರ್ಯ ನಂತರ ಪತ್ರಿಕೆಗಳು ಜನರನ್ನು ಜಾಗೃತ ಮಾಡುವಲ್ಲಿ ಮಹತ್ವರವಾದ ಜವಾಬ್ದಾರಿಯಿಂದ ಕಾರ್ಯ ಮಾಡಿಕೊಂಡು ಬಂದಿದೆ. ದೃಶ್ಯ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮದ ಮೇಲೆ ಜನರಿಗೆ ಸಾರ್ವಜನಿಕರಿಗೆ ನಂಬಿಕೆ ಹೆಚ್ಚು, ಪತ್ರಿಕೆಗಳು ಜ್ಞಾನದ ಭಂಡಾರ, ಕೆಲವೊಬ್ಬರಿಗೆ ಪತ್ರಿಕೆ ಓದದಿದ್ದರೆ ಅಂದಿನ ಆರಂಭವಾಗುವುದೇ ಇಲ್ಲ. ವಿದ್ಯಾರ್ಥಿಗಳು ಸಹ ಪತ್ರಿಕೆ ಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು. ಕಲಾದಗಿ ಪತ್ರಿಕಾ ಭವನಕ್ಕೆ ಶಾಸಕರ ನಿಧಿಯಲ್ಲಿ ₹ 10 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಜಯಕುಮಾರ್ ಸರನಾಯಕ್ ಮಾತನಾಡಿ, ಪತ್ರಿಕೆಗಳು ಸ್ವಾಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರ ಇವತ್ತಿನ ವರೆಗೂ ಸಮಾಜದ ಬೆಳವಣಿಗೆ ತಮ್ಮ ಕೊಡುಗೆ ನೀಡಿವೆ ಎಂದರು. ಬಾಗಲಕೋಟೆ ಕಾ.ನಿ.ಪ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಅಂಗಡಿ ಮಾತನಾಡಿ, ಪತ್ರಿಕಾ ದಿನಾಚರಣೆಯನ್ನು ಸಾರ್ವಜನಿಕವಾಗಿ ಆಚರಣೆ ಮಾಡಬೇಕುನ್ನುವುದು ಪತ್ರಕರ್ತರ ಸಂಘದವರ ಆಶಯವಾಗಿದೆ, ಬೇರೆ ಬೇರೆ ಮಹಾಪುರಷರ ಜಯಂತಿಯನ್ನು ಸರ್ಕಾರ ಆಚರಿಸುವಂತೆ ಪತ್ರಿಕಾ ದಿನಾಚರನ್ನು ಸಹ ಆಚರಿಸಲಿ, ಬೀಳಗಿ ಶಾಸಕಜೆ.ಟಿ.ಪಾಟೀಲರು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಿ ಸರ್ಕಾರದ ಗಮನ ಸೆಳೆಯಬೇಕು. ಜಿಲ್ಲೆಯಲ್ಲಿ 350 ಸದಸ್ಯರ, ರಾಜ್ಯದಲ್ಲಿ 10 ಸಾವಿರ ಸದಸ್ಯರನ್ನು ಹೊಂದಿದೆ. ಪತ್ರಕರ್ತರಿಗೆ ಗಂಭೀರ ಆರೋಗ್ಯ ಸಮಸ್ಯೆ ಇದ್ದಲ್ಲಿ ₹ 10,000 ಸಹಾಯಧನ, ಆಪತ್ಭಾಂದವ ಹೆಸರಿನಲ್ಲಿ ಪತ್ರಕರ್ತರಿಗೆ ₹ 50,000 ನೀಡಲಾಗುತ್ತಿದೆ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗಾರ್, ಕಾ.ನಿ.ಪ.ಸಂ ಕಾರ್ಯಕಾರಣಿ ಸದಸ್ಯ ಈಶ್ವರ ಶೆಟ್ಟರ್, ತಾಪಂ ಮಾಜಿ ಉಪಾಧ್ಯಕ್ಷ ಸಂಗಣ್ಣ ಮುಧೋಳ, ಬಿಜೆಪಿ ಯುವ ಮುಖಂಡ ಬಶೆಟ್ಯಪ್ಪಣ್ಣ ಎಂ.ಅಂಗಡಿ, ಗ್ರಾಪಂ ಮಾಜಿ ಸದಸ್ಯ ಹಸನಮ್ಮದ್ ರೋಣ ಮಾತನಾಡಿದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾರದಾಳ ಗ್ರಾಮದ ಯಂಕವ್ವ ಪಾಟೀಲ, ಉದಗಟ್ಟಿ ಗ್ರಾಮದ ಮಂಜುನಾಥ ಯರಡ್ಡಿ, ಖಜ್ಜಿಡೋಣಿಯ ಜ್ಯೋತಿ ವಾಸನದ, ಚಿಕ್ಕಸಂಶಿಯ ಅಪ್ಪಣಗೌಡ ಪಾಟೀಲ, ಶಿಕ್ಷಕಿ ರೆಣುಕಾ ಮುದಿಗೌಡರ ಇವರನ್ನು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಗಾಣಿಗೇರ, ಜಿಪಂ ಮಾಜಿ ಸದಸ್ಯ ಪಾಂಡಪ್ಪ ಪೊಲೀಸ್‌, ರೆಡ್ಡಿ ಯುವ ಸೇನಾ ರಾಜ್ಯಾಧ್ಯಕ್ಷ ನಾರಾಯಣ ಹಾದಿಮನಿ, ಬಂದೇನವಾಜ್ ಸೌದಾಗರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಫಕೀರಪ್ಪ ಮಾದರ, ಪ್ರವೀಣ ಅರಕೇರಿ, ಫಕೀರಪ್ಪ ಮಾದರ, ನಿಂಗಪ್ಪ ಅರಕೇರಿ, ಬೀಮಶಿ ಕರಡಿಗುಡ್ಡ, ಫಕೀರಪ್ಪ ಮಾದರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೌಡಿಶೀಟರ್ ಪ್ರಕರಣ ದಾಖಲು : ಮುಖಂಡರ ವಿರೋಧ
ಕೆಎಲ್‌ಎಸ್‌ ಜಿಐಟಿ ಚೆಸ್ ಟೂರ್ನಮೆಂಟ್-2026 ಯಶಸ್ವಿ