ಕನ್ನಡಪ್ರಭ ವಾರ್ತೆ ತುಮಕೂರು
ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ , ಕೇಂದ್ರ ಮತ್ತು ರಾಜ್ಯದಲ್ಲಿರುವ ಸರ್ಕಾರಗಳು ಬಡವರ ಆಶ್ವತ್ಥರಗಳನ್ನ ಈಡೇರಿಸದೇ ಹಣ ಮಾಡುವ ದಾರಿಯನ್ನು ಮಾತ್ರ ಯೋಚನೆ ಮಾಡುತ್ತಿದೆ . ಬಂಡವಾಳ ಶಾಹಿ ಆಡಳಿತ ಬಡವರ ಮೇಲೆ ದಬ್ಬಾಳಿಕೆಯ ನಡೆಸುತ್ತಾ ಬ್ರಿಟಿಷರಿಗಿಂತ ಕ್ರೂರವಾದ ಆಡಳಿತವನ್ನು ನೀಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಶೇಕಡ ೬೦ರಷ್ಟು ಜನರು ಆಸ್ತಿ ಹೊಂದಿರುವವರು ಶಿಕ್ಷಣ ಅಧಿಕಾರದ ಮದದಿಂದ ಅವರನನು ದಬ್ಬಾಳಿಕೆ ಮಾಡುತ್ತಿದ್ದಾರೆ. ಕೆಲವರು ಭಾವನಾತ್ಮಕ ವಿಷಯಗಳಿಂದ ದೇಶದ ಜನರನ್ನ ಹಾಳು ಮಾಡುತ್ತಿದ್ದು ನಮ್ಮ ದೇಶದಲ್ಲಿ ಇಂದಿಗೂ ಬಡತನ ಮತ್ತು ಹಸುವಿನ ಸೂಚ್ಯಂಕ ಕಡಿಮೆಯಾಗಿಲ್ಲ ನಮ್ಮ ದೇಶದಲ್ಲಿ ಇನ್ನೂ ಬಡತನ ಇದು ರಾಜ್ಯದಲ್ಲಿ 27 ಲಕ್ಷ ಕುಟುಂಬಗಳು ಸ್ವಂತ ಮನೆ ಇಲ್ಲದೆ ಪರದಾಡುತ್ತಿದ್ದಾರೆ ಎಂದರು.ಹಿರಿಯ ಪರಿಸರವಾದಿ ಸಿ ಯತಿರಾಜ್ ಮಾತನಾಡಿ, ಇನ್ನು ಮುಂದಾದರೂ ಸಿಪಿಐ ಪಕ್ಷದ ಜನಪರ ಹೋರಾಟಗಳನ್ನು ಒಪ್ಪಿಕೊಂಡು ಜನರು ಅದಕ್ಕೆ ಬೆಂಬಲ ನೀಡಿ ಬಡವರು ಮತ್ತು ದುಡಿಯುವ ವರ್ಗವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.ಶತಮಾನ ಸಂಭ್ರಮದ ಅಧ್ಯಕ್ಷತೆ ವಹಿಸಿದ್ದ ಸಿಪಿನ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ಗಿರೀಶ್ ಅವರು ಮಾತನಾಡಿ ದುಡಿಯುವರ ಕಾರ್ಮಿಕರ ಬಡವರ ರೈತರ ಪರವಾಗಿ ಸಿಬಿಐ ಪಕ್ಷ ಪ್ರತಿನಿತ್ಯ ಹೋರಾಟಗಳನ್ನು ನಡೆಸುತ್ತದೆ ಬಂದಿದೆ. ಪಕ್ಷ ಅಸ್ತಿತ್ವಕ್ಕೆ ಬಂದು ನೂರು ವರ್ಷಗಳು ತಂದಿದ್ದು ಈ ಸಂದರ್ಭವನ್ನ ನಾವು ಆಚರಣೆ ಮಾಡುತ್ತಿದ್ದೇವೆ ಈ ಸಂಭ್ರಮವನ್ನು ಯಶಸ್ವಿಗೊಳಿಸಲು ಅನೇಕರು ಶ್ರಮಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರರಾದ ಟಿ ಆರ್ ರೇವಣ್ಣ, ಸಿಪಿಐಎಂ ಪಕ್ಷದ ಎನ್ ಕೆ ಸುಬ್ರಹ್ಮಣ್ಯ, ಎಸ್ ಯು ಸಿ ಐ ಸಿ ಯ ಎಸ್ ಎನ್ ಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಏ ಗೋವಿಂದರಾಜು, ಎಐಟಿಯುಸಿ ಯ ನ ಕಂಬೇಗೌಡ, ಸಿಪಿಐ ಪಕ್ಷದ ಜಿಲ್ಲಾ ಖಜಾಂಚಿ ಅಶ್ವತ್ ನಾರಾಯಣ, ಚಂದ್ರಶೇಖರ್, ರವಿಪ್ರಸಾದ್, ಆರ್ ಗೋವಿಂದರಾಜು, ರಮೇಶ್, ಜಾಫರ್, ಬಸವರಾಜು ಸೇರಿದಂತೆ ಇತರರು ಶತಮಾನದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.