ದ್ರೋಹಿ ಕೇಜ್ರಿವಾಲ್‌ಗೆ ದೆಹಲಿ ಜನ ಬುದ್ದಿ ಕಲಿಸಿದರು

KannadaprabhaNewsNetwork | Published : Feb 9, 2025 1:32 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಅರವಿಂದ ಕೇಜ್ರಿವಾಲ್ ಎಂಬ ವ್ಯಕ್ತಿ ಆಮ್ ಆದ್ಮಿ ಪಾರ್ಟಿ ಮೂಲಕ ಚುನಾವಣೆ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದರು. ಪುಕ್ಕಟೆ ಯೋಜನೆ ಕೊಟ್ಟು, ಸುಳ್ಳು ಹೇಳಿ ಜನರ ಮನಸ್ಸು ಕದ್ದಿದ್ದ ಮಹಾನ್ ದ್ರೋಹಿ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅರವಿಂದ ಕೇಜ್ರಿವಾಲ್ ಎಂಬ ವ್ಯಕ್ತಿ ಆಮ್ ಆದ್ಮಿ ಪಾರ್ಟಿ ಮೂಲಕ ಚುನಾವಣೆ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದರು. ಪುಕ್ಕಟೆ ಯೋಜನೆ ಕೊಟ್ಟು, ಸುಳ್ಳು ಹೇಳಿ ಜನರ ಮನಸ್ಸು ಕದ್ದಿದ್ದ ಮಹಾನ್ ದ್ರೋಹಿ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ದೆಹಲಿ ವಿಧಾನಸಭಾ ಚುನವಣಾ ಫಲಿತಾಂಶದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿಗೆ ಟು ಥರ್ಡ್ ಮೆಜಾರಿಟಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿಜೀ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ 11ವರ್ಷಗಳ ಆಡಳಿತ ಅತ್ಯುತ್ತಮವಾಗಿದೆ‌. ಇದಕ್ಕೆ ಇಂದು ಬಂದಿರುವ ದೆಹಲಿ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ ಎಂದರು.

ಸ್ವಾತಂತ್ರ್ಯಾ ನಂತರ ಇಡೀ ದೇಶದಲ್ಲೇ ಯಾರೂ ಮಾಡದಷ್ಟು ಭ್ರಷ್ಟಾಚಾರವನ್ನು ಅರವಿಂದ ಕೇಜ್ರಿವಾಲ್‌ ಮಾಡಿದ್ದಾನೆ. ಇಲ್ಲಿಯ ವರೆಗೆ ವ್ಯವಸ್ಥಿತವಾಗಿ, ಪಾರದರ್ಶಕವಾಗಿ ಬಂದಿದ್ದ ಚುನಾವಣಾ ವ್ಯವಸ್ಥೆಯನ್ನು ಅವರು ಹಾಳು ಮಾಡಿ, ದುರಾಡಳಿತ ಮಾಡಿದ್ದಾರೆ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದರೂ ರಾಜೀನಾಮೆ ಕೊಡಲಿಲ್ಲ. ಈ ಬಾರಿ ಚುನಾವಣೆಯಲ್ಲಿ ದೆಹಲಿ ಜನರು ಅವನಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಟೀಕಿಸಿದರು.

ಎಂದರು.

ಕಾಂಗ್ರೆಸ್ ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಎಲ್ಲಿಯವರೆಗೂ ಸರ್ವಾಧಿಕಾರಿ ಧೋರಣೆ ಮುನ್ನಡೆಸುತ್ತಾರೋ ಅಲ್ಲಿಯವರೆಗೂ ಪರಿಸ್ಥಿತಿ ಹೀಗೆ ಇರತ್ತೆ. ಇದಕ್ಕೂ ಕೆಟ್ಟ ಪರಿಸ್ಥಿತಿ ಬರಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಬಣಗಳ ವಿಚಾರ

ನಾವು ಒಂದು ಪಕ್ಷದ ವ್ಯವಸ್ಥೆಯಲ್ಲಿದ್ದೇವೆ. ಪಕ್ಷ ನಮಗೆಲ್ಲರಿಗೂ ತಾಯಿ ಸಮಾನ. ಪಕ್ಷದ ನಿರ್ಣಯವೇ ಅಂತಿಮ. ಎಲ್ಲ‌ ಪಕ್ಷದಲ್ಲೂ ಇರುವಂತೆ ಸಮಸ್ಯೆಗಳು ನಮ್ಮಲ್ಲೂ ಇವೆ. ಅವುಗಳನ್ನು ಕೇಂದ್ರದ ನಾಯಕರು ಸರಿಪಡಿಸುವ ಕೆಲಸ ಶೀಘ್ರ ಮಾಡುತ್ತಾರೆ. ಮಂಡಲ ಪಂಚಾಯಿತಿಂದ ಹಿಡಿದು, ರಾಷ್ಟ್ರಾಧ್ಯಕ್ಷರ ನೇಮಕದವರೆಗೂ ಪಕ್ಷದ ಸಂವಿಧಾನದ ಪ್ರಕಾರವೇ ನಡೆಯುತ್ತದೆ. ಶೀಘ್ರದಲ್ಲೇ ಸಮಸ್ಯೆಗಳನ್ನು ಸರಿ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಪಾಲರೂ ಫೈಲ್ ಯಾಕೆ ವಾಪಸ್ಸು ಕಳಿಸಿದ್ದಾರೆ ಗೊತ್ತಿಲ್ಲ. ಅದರಲ್ಲಿ ಏನು ಕಂಡಿಷನ್ ಇವೆಯೋ ನಾನು ನೋಡಿಲ್ಲ. ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಬಗ್ಗೆ ಹಾಗೂ ಅದರಲ್ಲಿನ ಅಬ್ಸರ್ವೇಷನ್‌ಗಳನ್ನು ಸರಿಪಡಿಸಿ ಕಳಿಸುವ ಕೆಲಸ ಮಾಡಬೇಕು. ಮೈಕ್ರೋ ಫೈನಾನ್ಸ್‌ಗೆ ಬಿಗಿಯಾದ ಕಾನೂನು ಅವಶ್ಯಕತೆ ಇದೆ. ಮೈಕ್ರೋ ಫೈನಾನ್ಸ್‌ಗಳಿಂದ ಬಡವರು ಬಹಳ‌ ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ಬಿಗಿಯಾಗದಿದ್ದರೆ ಇಂತಹ ಸಮಸ್ಯೆಗಳು ಆಗುತ್ತವೆ. ಆಡಳಿತ, ಕಾನೂನಿನ ಬಗ್ಗೆ ಜನರಿಗೆ ಭಯ ಇಲ್ಲದಿದ್ದರೆ ಈ ಸಮಸ್ಯೆಗಳು ಆಗುತ್ತವೆ. ಇಂತಹ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳಿದರು.

ಕೇಂದ್ರ ಸಂಪುಟ ಪುನರ್ ರಚನೆ:

ಅದರ ಬಗ್ಗೆ ಸಧ್ಯಕ್ಕೆ ಯಾವುದೇ ವಿಚಾರ ಇಲ್ಲ. ಕೇಂದ್ರ ಸರ್ಕಾರ ಹಾಗೂ ಕೇಂದ್ರದ ನಾಯಕರು ಬೇರೆ ಬೇರೆ ರಾಜ್ಯಗಳ ಚುನಾವಣೆಯಲ್ಲಿ ಬ್ಯೂಸಿ ಆಗಿದ್ದರು. ಕೇಂದ್ರದಲ್ಲಿ ಈಗಷ್ಟೆ ಸರ್ಕಾರ ಬಂದಿರುವುದರಿಂದ ಸಧ್ಯಕ್ಕೆ ಅದರ ಬಗ್ಗೆ ಯಾವುದೇ ವಿಚಾರ ಪ್ರಸ್ತಾಪ ಇಲ್ಲ.‌ ಎಲ್ಲರೂ ಕಾಯಬೇಕಾಗುತ್ತದೆ ಎಂದರು.ಕೋಟ್್‌ದೆಹಲಿ ಕೇಂದ್ರಾಡಳಿತ ಪ್ರದೇಶ. ಇಲ್ಲಿ ಸರ್ಕಾರಕ್ಕೆ ಖರ್ಚಿಗಿಂತ ಆದಾಯವೇ ಹೆಚ್ಚು. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ಟ್ಯಾಕ್ಸ್ ಬರುವ ದೆಹಲಿಯಲ್ಲಿ ಹೆಚ್ಚು ಅಭಿವೃದ್ಧಿ ಮಾಡಬೇಕಿತ್ತು. ಆದರೆ, ಅಲ್ಲಿ ಸರಿಯಾಗಿ ಓಡಾಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಪುಕ್ಕಟೆ ಯೋಜನೆಗಳನ್ನು ಕೊಟ್ಟು ಓಟು ಹಾಕಿಸಿಕೊಂಡು ದೇಶಕ್ಕೆ ಕೆಟ್ಟ ಪರಿಸ್ಥಿತಿ ತಂದಿದ್ದಾರೆ. ಕೇಜ್ರಿವಾಲ್‌ ದೆಹಲಿಯಲ್ಲಿ ಹಾಗೂ ಕಾಂಗ್ರೆಸ್ ನವರು ಕರ್ನಾಟಕದಲ್ಲಿ ಪುಕ್ಕಟೆ ಯೋಜನೆ ಕೊಟ್ಟು ಗೆಲ್ಲುವುದು ಕೆಟ್ಟ ಸಂಪ್ರದಾಯ. ಈ ಪುಕ್ಕಟೆ ಯೋಜನೆಗಳ ಕೆಟ್ಟ ಸಂಪ್ರದಾಯಕ್ಕೆ ಇತಿಶ್ರೀ ಹಾಕಬೇಕಿದೆ.

Share this article