ಯಲಬುರ್ಗಾ: ವೃತ್ತಿಯಲ್ಲಿ ಕ್ಷತ್ರಿಯ ಸಮಾಜದ ಜನರು ಶ್ರಮಜೀವಿಗಳು, ಕಾಯಕವನ್ನು ಪ್ರಾಮಾಣಿಕವಾಗಿ ಮಾಡಿ ತಮ್ಮ ಜೀವನ ನಡೆಸಿಕೊಂಡು ಬಂದವರು, ಈ ಸಮಾಜಕ್ಕೆ ಸರ್ಕಾರದ ಸೌಲಭ್ಯ ಹೆಚ್ಚಿನ ಮಟ್ಟದಲ್ಲಿ ಸಿಗಬೇಕು ಎಂದು ಹಿರಿಯ ಮುಖಂಡ ವೀರಣ್ಣ ಹುಬ್ಬಳ್ಳಿ ಹೇಳಿದರು.
ಕ್ಷತ್ರೀಯ ಸಮಾಜ ಆರ್ಥಿಕವಾಗಿ ಹಿಂದುಳಿದಿದ್ದರೂ ಲೌಕಿಕ, ಆಧ್ಯಾತ್ಮಿಕವಾಗಿ ಬಹಳ ಮುಂದುವರೆದಿದ್ದಾರೆ, ದುಡಿಮೆ ನಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಸೋಮವಂಶ ಕ್ಷತ್ರೀಯ ಸಮಾಜ ಮಕ್ಕಳಿಗೆ ಉನ್ನತ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸಬೇಕು, ಇಂದಿನ ದಿನಗಳಲ್ಲಿ ಶಿಕ್ಷಣ ಅತ್ಯವಶ್ಯಕವಾಗಿದ್ದು, ಸಮಾಜದ ಅಭಿವೃದ್ಧಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದ ಅವರು, ಸಹಸ್ರಾರ್ಜುನರ ಜಯಂತಿ ಮಾಡುವ ಮೂಲಕ ತತ್ವಾದರ್ಶ ಅಳವಡಿಸಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಸಾಮಾಜಿಕ ರಾಜಕೀಯವಾಗಿ ಬೆಳೆಯಬೇಕು ಎಂದರು.
ಪಪಂ ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ್ರ ಮಾತನಾಡಿ, ಕ್ಷತ್ರೀಯ ಸಮಾಜ ಭಕ್ತಿ, ಶ್ರದ್ಧೆ, ಶಿಸ್ತಿಗೆ ಹೆಸರಾಗಿದೆ, ಸೋಮವಂಶ ಸಹಸ್ರಾರ್ಜುನರ ತತ್ವಾದರ್ಶ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು, ಜನಸಂಖ್ಯೆಯಲ್ಲಿ ಚಿಕ್ಕ ಸಮಾಜವಾದರೂ ಎಲ್ಲ ಸಮಾಜದೊಂದಿಗೆ ಸಹೋದರತ್ವದಿಂದ ಬದುಕು ನಡೆಸುವ ಕಾರ್ಯ ಶ್ಲಾಘನೀಯ,ಸಮಾಜದಲ್ಲಿ ಬಹಳಷ್ಟು ಕಷ್ಟಪಟ್ಟು ಆರ್ಥಿಕವಾಗಿ ಮುಂದೆ ಬರುತ್ತಿದೆ, ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಶಿಕ್ಷಣವಂತರನ್ನಾಗಿ ಮಾಡಬೇಕು ಎಂದರು.ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ,ಜೀವನದಲ್ಲಿ ಪೂಜೆ, ಪುನಸ್ಕಾರ, ಪುಣ್ಯದ ಕಾರ್ಯ ಮಾಡಿದಾಗ ಶಾಂತಿ, ನೆಮ್ಮದಿ ದೊರಯುತ್ತದೆ, ಜಗದಂಬಾದೇವಿ ಬಹಳ ಶಕ್ತಿ ದೇವತೆಯಾಗಿದ್ದಾಳೆ. ದೇವಿ ಪೂಜೆ ಮಾಡಿದರೇ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತದೆ, ಎಸ್ಎಸ್ ಕೆ ಸಮಾಜದಿಂದ ಉತ್ತಮ ಕಾರ್ಯ ಕೈಗೊಳ್ಳುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ, ಧಾರ್ಮಿಕ ಮನೋಭಾವ ಬೆಳೆಸಿಕೊಂಡು ಮುನ್ನಡೆಯಿರಿ, ತಮ್ಮ ಕಾಯಕದ ಜತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿಕೊಡಿ ಎಂದರು.
ಸಮಾಜದ ಮುಖಂಡ ಮನೋಹರಸಾ ರಂಗ್ರೇಜ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಆರ್ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ಅಮರೇಶ ಹುಬ್ಬಳ್ಳಿ,ವಸಂತಕುಮಾತ ಭಾವಿಮನಿ, ಅಕ್ಷರ ದಾಸೋಹ ಅಧಿಕಾರಿ ಟಿ.ಜೆ. ದಾನಿ, ಮುಖ್ಯಶಿಕ್ಷಕ ದೇವಪ್ಪ ವಾಲ್ಮೀಕಿ, ಯಮನೂರಪ್ಪ ನಡುಲಮನಿ, ಹುಲ್ಲಣಸಾ ತುಳಸಿಕಟ್ಟಿ, ಕಳಕಪ್ಪ ತಳವಾರ, ಪಿ.ಟಿ. ಉಪ್ಪಾರ, ನರಸಿಂಗಸಾ ಕಾಟವಾಡ, ಪ್ರಕಾಶ ದಲಬಂಜನ, ಚಿನ್ನುಸಾ ರಾಯಭಾಗಿ, ಹೊನ್ನುಸಾ ದಲಬಂಜನ, ರಾಜು ಮೇರವಾಡ, ಮುತ್ತು ಹನುಮಸಾಗರ, ಅರ್ಚಕ ಜಾನಕಸಾ ರಾಜೋಳ್ಳಿ, ಮಹಿಳಾ ಘಟಕದ ಕವಿತಾ ರಾಯಭಾಗಿ, ಯಮುನಾ, ಕೃತಿಕಾ, ಅಶೋಕ ರಾಯಭಾಗಿ, ಮೋತಿಲಾಲ, ದೀಪು ರಾಯಭಾಗಿ, ಸುರೇಶ ಮೇರವಾಡ ಇತರರು ಇದ್ದರು.ಧಾರ್ಮಿಕ ಕಾರ್ಯಕ್ರಮ: ಬೆಳಗ್ಗೆ ದೇವಿ ಮೂರ್ತಿಗೆ ಅಭಿಷೇಕ, ಮೂರ್ತಿ ಪಲ್ಲಕ್ಕಿ ಉತ್ಸವ, ಪಟ್ಟಣದ ವಿವಿಧ ವೃತ್ತಗಳ ಮೂಲಕ ಭಾವಚಿತ್ರ ಮರೆವಣಿಗೆ ನಡೆಯಿತು.