ಗಣನಾಯಕನ ಸ್ವಾಗತಕ್ಕೆ ಸಜ್ಜಾದ ಜನತೆ

KannadaprabhaNewsNetwork |  
Published : Aug 27, 2025, 01:02 AM IST
ಹರಪನಹಳ್ಳಿ ಪಟ್ಟಣದ ಹೊರವಲಯದ ಕಾಯಕದಹಳ್ಳಿ ರಸ್ತೆಯಲ್ಲಿರುವ ನಾಯಕನಕೆರೆ ಬಳಿ ಸಾರ್ವಜನಿಕ ಗಣೇಶಗಳ ವಿಸರ್ಜೆಗಾಗಿ ಪುರಸಭೆಯವರು ಹೊಂಡ ನಿರ್ಮಿಸಿ ಕಟ್ಟಿಗೆಗಳಿಂದ ಬಂದೊಬಸ್ತ್‌ ಮಾಡಿ ಸಿಸಿ ಕ್ಯಾಮರ ಅಳವಡಿಸಲಾಗಿದೆ. | Kannada Prabha

ಸಾರಾಂಶ

ಗಣೇಶೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲು ಹರಪನಹಳ್ಳಿ ತಾಲೂಕಿನಲ್ಲಿ ಸಕಲ ಸಿದ್ದತೆ ಕೈಗೊಂಡಿದ್ದು, ಆ.27ರಂದು ಗಣೇಶ ಮೂರ್ತಿಗಳ ಪ್ರತಿಷ್ಠಾನೆಯಾಗಲಿವೆ. ತಾಲೂಕಿನಲ್ಲಿ ಒಟ್ಟು 567 ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ.

ಹರಪನಹಳ್ಳಿ ತಾಲೂಕಿನಲ್ಲಿ 567 ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ

ಗಣೇಶೋತ್ಸವಕ್ಕೆ ತಾಲೂಕು ಸಜ್ಜು । 2 ಅತಿ ಸೂಕ್ಷ್ಮ, 27 ಸೂಕ್ಷ್ಮ ಪ್ರದೇಶಗಳ ಗುರುತುಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಗಣೇಶೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲು ಹರಪನಹಳ್ಳಿ ತಾಲೂಕಿನಲ್ಲಿ ಸಕಲ ಸಿದ್ದತೆ ಕೈಗೊಂಡಿದ್ದು, ಆ.27ರಂದು ಗಣೇಶ ಮೂರ್ತಿಗಳ ಪ್ರತಿಷ್ಠಾನೆಯಾಗಲಿವೆ. ತಾಲೂಕಿನಲ್ಲಿ ಒಟ್ಟು 567 ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ.

ಅವುಗಳಲ್ಲಿ ಒಂದನೇ ದಿನಕ್ಕೆ ಅರಸೀಕೆರೆಯಲ್ಲಿ ಒಂದು ಗಣಪ ವಿಸರ್ಜನೆಗೊಳ್ಳಲಿದೆ. ಮೂರನೇ ದಿನಕ್ಕೆ ಹರಪನಹಳ್ಳಿ ಪಟ್ಟಣದಲ್ಲಿ 86, ಹಲುವಾಗಲಿನಲ್ಲಿ -133, ಅರಸೀಕೆರೆಯಲ್ಲಿ 144, ಚಿಗಟೇರಿಯಲ್ಲಿ 60 ಗಣಪಗಳು ವಿಸರ್ಜನೆಯಾಗಲಿವೆ.

5ನೇ ದಿನಕ್ಕೆ ಹರಪನಹಳ್ಳಿ ಪಟ್ಟಣದಲ್ಲಿ 48, ಹಲುವಾಗಲಿನಲ್ಲಿ ಭಾಗದಲ್ಲಿ 36, ಅರಸೀಕೆರೆಯಲ್ಲಿ 30, ಚಿಗಟೇರಿ ಭಾಗದಲ್ಲಿ 13 ವಿಸರ್ಜೆನೆಯಾಗಲಿವೆ. 7ನೇ ದಿನಕ್ಕೆ ಹರಪನಹಳ್ಳಿಯಲ್ಲಿ 2, ಹಲುವಾಗಲು -1, ಅರಸೀಕೆರೆ -1 ವಿಸರ್ಜೆಗೊಳ್ಳಲಿವೆ.

9ನೇ ದಿನದಲ್ಲಿ ಹರಪನಹಳ್ಳಿ-1,ಹಲುವಾಗಲು -7, ಚಿಗಟೇರಿಯಲ್ಲಿ 3 ವಿಸರ್ಜನೆಯಾದರೆ 11ನೇ ದಿನಕ್ಕೆ ಹರಪನಹಳ್ಳಿಯಲ್ಲಿ ವಿಎಚ್‌ಪಿ ಹಾಗೂ ಬಜರಂಗದಳದವರು ಸ್ಥಾಪಿಸಿರುವ ಗಣೇಶ ಮೂರ್ತಿ ಮಾತ್ರ ವಿಸರ್ಜೆನೆಯಾಗಲಿದೆ.

ಸೂಕ್ಷ್ಮ 27, ಅತಿ ಸೂಕ್ಷ್ಮ 2:

ಒಟ್ಟು 567 ಗಣೇಶ ಮೂರ್ತಿಗಳಲ್ಲಿ ಹರಪನಹಳ್ಳಿ ಹಾಗೂ ಹಲುವಾಗಲು ಗ್ರಾಮಗಳಲ್ಲಿ ಮಾತ್ರ ತಲಾ ಒಂದೊಂದು ಅತಿ ಸೂಕ್ಷ್ಮ ಪ್ರದೇಶದಲ್ಲಿರುವ ಗಣೇಶಮೂರ್ತಿಗಳು ಹಾಗೂ ಹರಪನಹಳ್ಳಿಯಲ್ಲಿ-6, ಹಲುವಾಗಲು -4, ಅರಸೀಕೆರೆ-9, ಚಿಗಟೇರಿ -8, ಹೀಗೆ ಒಟ್ಟು 2 ಅತಿ ಸೂಕ್ಷ್ಮ ಹಾಗೂ 27 ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ.

ಎರಡು ಹೊಂಡಗಳು:

ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಹರಪನಹಳ್ಳಿ ಪಟ್ಟಣದಲ್ಲಿ ಕಾಯಕದಹಳ್ಳಿ ರಸ್ತೆಯಲ್ಲಿರುವ ನಾಯಕನಕೆರೆ ಬಳಿ ಒಂದು ಹೊಂಡ ಹಾಗೂ ಹರಿಹರ ರಸ್ತೆಯ ಆಶ್ರಯ ಕಾಲನಿ ಬಳಿ ಒಂದು ಹೊಂಡ ಹೀಗೆ ಎರಡು ಹೊಂಡಗಳನ್ನು ಪುರಸಭೆಯವರು ನಿರ್ಮಿಸಿದ್ದು, ಅವುಗಳ ಬಳಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಪೊಲೀಸರು ಪೂರ್ವಭಾವಿ ಸಭೆ ನಡೆಸಿ ಕಾನೂನು ಕಾಯ್ದೆಗಳ ಕುರಿತು ಗಣೇಶ ಸಮಿತಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಸೆ.6ರಂದು ಶೋಭಾಯಾತ್ರೆ:

ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳದವರು ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ವಿಸರ್ಜನೆಯ ಶೋಭಾಯಾತ್ರೆ ಸೆ.6ರಂದು ನಡೆಯಲಿದೆ.

ಒಟ್ಟಿನಲ್ಲಿ ವಿಜೃಂಭಣೆಯ ಗಣೇಶೋತ್ಸವಕ್ಕೆ ಹರಪನಹಳ್ಳಿ ತಾಲೂಕು ಸಿದ್ಧಗೊಂಡಿದೆ.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?