ಸರ್ಕಾರದ ಪಂಚ ಗ್ಯಾರಂಟಿಗಳಿಂದ ಜನರ ಜೀವನ ಸುಧಾರಣೆ: ಎಚ್.ಎಂ.ಮಧು

KannadaprabhaNewsNetwork |  
Published : Nov 02, 2025, 03:00 AM IST
ಪೊಟೋ: 31ಎಸ್‌ಎಂಜಿಕೆಪಿ06ಶಿವಮೊಗ್ಗ ನಗರದ ತಾಲೂಕು ಪಂಚಾಯಿತಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಭೆಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ಮಧು ಮಾತನಾಡಿದರು.  | Kannada Prabha

ಸಾರಾಂಶ

ಸರ್ಕಾರದ ಪಂಚ ಗ್ಯಾರಂಟಿಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಇದರಿಂದ ಅರ್ಥಿಕವಾಗಿ ಜನರ ಜೀವನ ಮಟ್ಟ ಸುಧಾರಣೆಯಾಗುತ್ತಿದೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ಮಧು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸರ್ಕಾರದ ಪಂಚ ಗ್ಯಾರಂಟಿಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಇದರಿಂದ ಅರ್ಥಿಕವಾಗಿ ಜನರ ಜೀವನ ಮಟ್ಟ ಸುಧಾರಣೆಯಾಗುತ್ತಿದೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ಮಧು ತಿಳಿಸಿದರು.

ನಗರದ ತಾಲೂಕು ಪಂಚಾಯಿತಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿ, ಮಹಿಳಾ ಸಬಲೀಕರಣ ಮಾಡುವ ಉದ್ದೇಶದಿಂದ ಸರ್ಕಾರವೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು, ತಾಲೂಕು ಮಟ್ಟದ ಪ್ರಾಧಿಕಾರದ ಜೊತೆಗೆ ಗ್ಯಾರಂಟಿಯ ಐದು ಇಲಾಖೆಗಳು ಕೈ ಜೋಡಿಸಿ ಸರ್ಕಾರದ ಯೋಜನೆಯನ್ನು ಜಿಲ್ಲಾದ್ಯಂತ ತಲುಪಿಸಲು ಸಹಕಾರಿಯಾಗುತ್ತಿದೆ ಎಂದರು.

2025ರ ಜುಲೈನಲ್ಲಿ ಜಿಲ್ಲೆಯ 1,5,272 ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಮಾಡಲಾಗಿದೆ. ಇನ್ನೂ 2044 ಖಾತೆಗಳು ಐಟಿ/ಜಿಎಸ್‌ಟಿ ಫಲಾನುಭವಿಗಳಾಗಿದ್ದು, ಇದರಲ್ಲಿ 304 ಅರ್ಜಿಗಳನ್ನು ಕಚೇರಿ ಸ್ವೀಕರಿಸಲಾಗಿದೆ. ಎನ್‌ಪಿಸಿಐಯಲ್ಲಿ 300 ಫಲಾನುಭವಿಗಳ ಅರ್ಜಿ ಬಾಕಿ ಇದೆ ಎಂದು ತಿಳಿಸಿದರು.

ಅನ್ಯಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಸಚಿವ ಸಂಪುಟದಲ್ಲಿ ಮಹತ್ವ ನಿರ್ಧಾರವನ್ನು ತೆಗೆದುಕೊಂಡಿದ್ದು, ಇನ್ನೂ ಮುಂದೆ 5 ಕೆಜಿ ಅಕ್ಕಿ ಬದಲಾಗಿ ಆಹಾರ ಧಾನ್ಯಗಳ ಕಿಟ್ ನೀಡಲಿದೆ. ಈ ಯೋಜನೆ 2026ರ ಜನವರಿಯಿಂದ ಜಾರಿಯಾಗಲಿದೆ. ಹಾಗೂ ಇದರ ನಿರ್ವಹಣೆಗಾಗಿ ಗ್ರಾಮಾಂತರ ಹಾಗೂ ನಗರದಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರನ್ನು ಆಯಾ ವಾರ್ಡ್ ಮಟ್ಟದಲ್ಲಿ ನೇಮಕ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸರ್ಕಾರವು ಐಟಿ ಹಾಗೂ ಜಿಎಸ್‌ಟಿ ಹೊಂದಿರುವ ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡಿ ಅವರನ್ನು ಎಪಿಎಲ್ ಪಡಿತರ ಪಟ್ಟಿಗೆ ಸೇರಿಸಲು ತೀರ್ಮಾನ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ತಾಲೂಕು ಮಟ್ಟದಲ್ಲಿ 7.44 ಕೋಟಿ ವಿದ್ಯುತ್ ಬಳಕೆ ಮಾಡಲಾಗಿದ್ದು, ಸರ್ಕಾರದಿಂದ 6.40 ಕೋಟಿ ರು. ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಯುವನಿಧಿ ಯೋಜನೆ ಅಡಿಯಲ್ಲಿ 2025ರ ಜುಲೈವರೆಗೆ 295 ಕೋಟಿ ರು.ಹಣವನ್ನು ವಿದ್ಯಾರ್ಹತೆ ಅನುಸಾರವಾಗಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದರು.

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 5 ಕೋಟಿ ಮಹಿಳಾ ಫಲಾನುಭವಿಗಳು ಪ್ರಯಾಣ ಮಾಡಿದ್ದು, ಇದರಿಂದ 219 ಕೋಟಿ ಆದಾಯ ಸರ್ಕಾರ ಖಜಾನೆಗೆ ಬಂದಿದೆ. ಶಿವಮೊಗ್ಗ ಜಿಲ್ಲೆಗೆ ಎಲೆಕ್ಟ್ರಿಕಲ್ ಬಸ್ ನೀಡಲು ಕರ್ನಾಟಕ ಸರ್ಕಾರವು ಮುಂದಾಗಿದ್ದು, ಅದರಂತೆ ಈಗಾಗಲೇ ಬಸ್ ನಿಲ್ದಾಣದಲ್ಲಿ ಎಲೆಕ್ಟ್ರಿಕಲ್ ಚಾರ್ಚಿಂಗ್ ಪಾಯಿಂಟ್ ಕೂಡ ಅವಳಡಿಸಲಾಗಿದೆ. ಜಿಲ್ಲೆಗೆ ಆದಷ್ಟು ಬೇಗ ಎಲೆಕ್ಟ್ರಿಕಲ್ ಬಸ್ ಬರಲಿದ್ದು, ಇನ್ನೂ ಮುಂದೆ ಜಿಲ್ಲೆಯ ಜನರ ಪ್ರಯಾಣ ಸುಗಮವಾಗುತ್ತದೆ ಎಂದರು.

ತಾಲೂಕು ಸಿಒ ತಾರಾ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ