ಪೋಲೀಸರ ಜೊತೆ ಜನರು ಸಹಕಾರ ನೀಡಬೇಕು: ಪಿಎಸೈ ನಾಗರಾಜ್

KannadaprabhaNewsNetwork |  
Published : Feb 20, 2025, 12:49 AM IST
ೇ್‌ಿ್ಿ | Kannada Prabha

ಸಾರಾಂಶ

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು,ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಲೀಸರೊಂದಿಗೆ ಸಾರ್ವಜನಿಕರು ಕೈಡೋಡಿಸಬೇಕು. ಪೋಲೀಸ್ ಸಾರ್ವಜನಿಕರು ಜನಸ್ನೇಹಿಗಳಾಗಿ ಕೆಲಸ ಮಾಡಬೇಕು ಎಂದು ಶೃಂಗೇರಿ ಪೋಲೀಸ್ ಠಾಣೆ ಪಿಎಸೈ ನಾಗರಾಜ್ ಹೇಳಿದರು.

ರಸ್ತೆ ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶೃಂಗೇರಿ

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು,ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಲೀಸರೊಂದಿಗೆ ಸಾರ್ವಜನಿಕರು ಕೈಡೋಡಿಸಬೇಕು. ಪೋಲೀಸ್ ಸಾರ್ವಜನಿಕರು ಜನಸ್ನೇಹಿಗಳಾಗಿ ಕೆಲಸ ಮಾಡಬೇಕು ಎಂದು ಶೃಂಗೇರಿ ಪೋಲೀಸ್ ಠಾಣೆ ಪಿಎಸೈ ನಾಗರಾಜ್ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಪೋಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.ಜನರು ಕಾನೂನುಗಳ ಪಾಲನೆ ಮಾಡಬೇಕು.ಕಾನೂನು ಕಾಯ್ದೆಗಳಿರುವುದು ಜನರಿಗಾಗಿ.

ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಬೇಕು.ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು.ಅತಿ ವೇಗವಾದ ಹಾಗೂ ಅಜಾಗರೂಕತೆಯ ವಾಹನ ಚಾಲನೆ ಮಾಡುವುದು ಜೀವಕ್ಕೆ ಅಪಾಯ.ನಿರ್ಲಕ್ಷದಿಂದ ವಾಹನ ಚಲಾಯಿಸಬಾರದು.ಜೀವ ಅತ್ಯಮೂಲ್ಯ.ಕಾನೂನು ತಿಳಿದುಕೊಳ್ಳಬೇಕು ಎಂದರು.

ಸಹಾಯಕ ಪೋಲೀಸ್ ಉಪನಿರೀಕ್ಷಕ ಮೋಹನ್ ಕುಮಾರ್ ಮಾತನಾಡಿ ವಾಹನ ಸವಾರರು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.ನಿಮ್ಮ ಜೀವಕ್ಕೆ ನೀವೆ ರಕ್ಷಣೆ ಮಾಡಿಕೊಳ್ಳಬೇಕು. ಎಚ್ಚರ ತಪ್ಪಿದರೆ ಬದುಕಿನ ಪಯಣ ಕೊನೆಯಾಗುತ್ತದೆ. ಅವಸರ, ಅಜಾಗರೂಕತೆಯೇ ಅಪಘಾತಕ್ಕೆ ಕಾರಣ. ಶಿಸ್ತುಬದ್ದವಾಗಿ ಹೆಲ್ಮೆಟ್ ಧರಿಸಿ, ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಬೇಕು ಎಂದರು.

ಪೋಲೀಸ್ ಸಿಬ್ಬಂದಿ ರಾಜು, ಪ್ರವೀಣ್, ಗೃಹರಕ್ಷಕ ದಳದ ಸುಂದರೇಶ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ