ಜನರು ಶ್ರೀರಾಮ, ಲಕ್ಷ್ಮಣರಂತೆ ಸಹೋದರತ್ವದಿಂದ ಜೀವನ ನಡೆಸಬೇಕು

KannadaprabhaNewsNetwork |  
Published : Nov 24, 2026, 12:45 AM IST
22ಕೆಎಂಎನ್ ಡಿ24 | Kannada Prabha

ಸಾರಾಂಶ

ಗುರು ಹಿರಿಯರಿಗೆ, ತಂದೆ-ತಾಯಂದಿರಿಗೆ ಗೌರವ ನೀಡಬೇಕು. ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಆಚರಣೆ ಮಾಡಿಕೊಂಡು ಒಂದು ಸುಂದರವಾದ ಬದುಕು ರೂಪಿಸಿಕೊಳ್ಳಬೇಕು. ಗ್ರಾಮದಲ್ಲಿ ದುಶ್ಚಟಗಳಿಗೆ ಅವಕಾಶ ನೀಡದಂತೆ ಹಿರಿಯರೆಲ್ಲಾ ಒಟ್ಟಾಗಿ ಬದುಕು ಸಾಗಿಸಿದ ರೀತಿಯಲ್ಲಿ ಎಲ್ಲರೂ ಮುನ್ನಡೆಯಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ಪ್ರದೇಶದ ಜನರು ಮಾನವೀಯ ಮೌಲ್ಯಗಳನ್ನು ಅರಿತು ಶ್ರೀರಾಮ, ಲಕ್ಷ್ಮಣರಂತೆ ಸಹೋದರತ್ವದಿಂದ ಜೀವನ ನಡೆಸುವ ಮೂಲಕ ಹಳ್ಳಿಗಳಲ್ಲಿ ಉತ್ತಮ ವಾತಾವರಣ ಸೃಷ್ಟಿಸಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿಕ್ಕವೀರನಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮ ಸಮುದಾಯ ಭವನ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಗ್ರಾಮಸ್ಥರೆಲ್ಲಾ ಸೇರಿ ಶ್ರೀರಾಮ ಸಮುದಾಯ ಭವನ ನಿರ್ಮಾಣ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಗುರು ಹಿರಿಯರಿಗೆ, ತಂದೆ-ತಾಯಂದಿರಿಗೆ ಗೌರವ ನೀಡಬೇಕು. ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಆಚರಣೆ ಮಾಡಿಕೊಂಡು ಒಂದು ಸುಂದರವಾದ ಬದುಕು ರೂಪಿಸಿಕೊಳ್ಳಬೇಕು. ಗ್ರಾಮದಲ್ಲಿ ದುಶ್ಚಟಗಳಿಗೆ ಅವಕಾಶ ನೀಡದಂತೆ ಹಿರಿಯರೆಲ್ಲಾ ಒಟ್ಟಾಗಿ ಬದುಕು ಸಾಗಿಸಿದ ರೀತಿಯಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದರು.

ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಗ್ರಾಮದ ಮಹಿಳೆಯರು ಪೂರ್ಣ ಕುಂಭ ಸ್ವಾಗತ ನೀಡಿದರು. ಬೆಳ್ಳಿ ಮಾದರಿ ಸಾರೋಟಿನಲ್ಲಿ ಶ್ರೀಗಳನ್ನು ಕೂರಿಸಿ ವೀರಗಾಸೆ ಹಾಗೂ ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಗ್ರಾಮದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರೆವೇರಿಸಿದ ನಂತರ ಶ್ರೀಗಳು ಹಾಗೂ ಗಣ್ಯರು ಗ್ರಾಮದ ಶ್ರೀ ರಾಮ ಸಮುದಾಯ ಭವನದ ಉದ್ಘಾಟನೆ ನೆರೆವೇರಿಸಿದರು.

ಗ್ರಾಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಗಿರಿಜೇಶ್ ಅವರನ್ನು ಶ್ರೀಗಳು ಹಾಗೂ ಗ್ರಾಮಸ್ಥರು ಅಭಿನಂದಿಸಿದರು. ಗ್ರಾಮದ ಪರವಾಗಿ ಶ್ರೀಗಳಿಗೆ ಪಾದ ಪೂಜೆ ನೆರೆವೇರಿಸಲಾಯಿತು. ಜಾನಪದ ರಸಮಂಜರಿ ಹಾಗೂ ಶ್ರೀರಾಮದೇವರ ಉತ್ಸವ ಜರುಗಿತು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ಸಚಿವರ ಭೇಟಿ:

ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಗ್ರಾಮಕ್ಕೆ ಭೇಟಿಕೊಟ್ಟು ಗ್ರಾಮದ ನೂತನ ಸಮುದಾಯ ಭವನದಲ್ಲಿ ಶ್ರೀಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಸಮುದಾಯ ಭನವದ ಶೀಲಾನ್ಯಾಸ ನೆರೆವೇರಿಸಿದರು.

ಗ್ರಾಮದ ಮುಖಂಡರಾದ ಜೆ.ರಾಮೇಗೌಡ, ರಮೇಶ್, ಕ್ರಷರ್ ಕರೀಗೌಡ, ಕುಮಾರ್, ಚಿಕ್ಕೇಗೌಡ, ನಾಗರಾಜು, ಎಸ್.ನಿಂಗಯ್ಯ, ಜಿ.ದೇವೇಗೌಡ, ಹೊನ್ನಲಗೇಗೌಡ, ಎಸ್.ದೊರೆಸ್ವಾಮಿ, ಭದ್ರೇಗೌಡ, ಬೋರೇಗೌಡ, ಸಿ.ಎನ್.ಮಂಜುನಾಥ್, ವಕೀಲ ರಮೇಶ್, ಗ್ರಾಮ ಆಡಳಿತಾಧಿಕಾರಿ ರಮೇಶ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿತೆಗಳು ಜೀವಪರ ಸಂದೇಶ ಸಾರುವಂತಿರಲಿ
ಶುಂಠಿ ಕಣ ಬಂದ್ ಮಾಡಿದರೆ ಶಾಸಕರು ಖರೀದಿಸ್ತಾರಾ?