ಹಂಪಿ ಉತ್ಸವದಲ್ಲಿ ರಾತ್ರಿಯ ಕೊರೆಯುವ ಚಳಿಯಲ್ಲೂ ಜನರ ಸುತ್ತಾಟ

KannadaprabhaNewsNetwork |  
Published : Feb 16, 2026, 02:30 AM IST
ಫೋಟೋವಿವರ- (215ಎಚ್‌ಪಿಟಿ4) ಹಂಪಿ ಉತ್ಸವದಲ್ಲಿ ಜನಸಾಮಾನ್ಯರು ಉತ್ಸುಕರಾಗಿ ಸುತ್ತಾಡಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು | Kannada Prabha

ಸಾರಾಂಶ

ಹಂಪಿ ಉತ್ಸವದಲ್ಲಿ ಒಂದು ಸುತ್ತು ಹಾಕಿದರೆ ಸಾಕು ಹಿಂದಿನ ವಿಜಯನಗರ ಸಾಮ್ರಾಜ್ಯದ ಗತವೈಭವವೇ ಕಣ್ಣೆದುರಿಗೆ ಕಾಣುತ್ತದೆ.

ಹಂಪಿ: ಮುತ್ತು​, ರತ್ನ, ವಜ್ರ,​ ವೈಢೂರ್ಯಗಳನ್ನು ಬಳ್ಳದಲ್ಲಿ (ಸೇರು) ಅಳೆದು ಬೀದಿಯಲ್ಲಿ ಮಾರಾಟ ಮಾಡುತ್ತಿದ್ದ 16ನೇ ಶತಮಾನದ ವಿಜಯನಗರ ಸಾಮ್ರಾಜ್ಯವಾದ ಹಂಪಿಯಲ್ಲಿ ಕಳೆದ ಮೂರು ದಿನಗಳಿಂದ ಅತ್ಯಂತ ವೈಭವದಿಂದ ಮತ್ತು ಅದ್ಧೂರಿಯಿಂದ ನಡೆಯುತ್ತಿರುವ ಹಂಪಿ ಉತ್ಸವದಲ್ಲಿ ಒಂದು ಸುತ್ತು ಹಾಕಿದರೆ ಸಾಕು ಹಿಂದಿನ ವಿಜಯನಗರ ಸಾಮ್ರಾಜ್ಯದ ಗತವೈಭವವೇ ಕಣ್ಣೆದುರಿಗೆ ಕಾಣುತ್ತದೆ.

ವಿಜಯನಗರ ಸಾಮ್ರಾಜ್ಯದ ಕಾಲದ ಕಲೆ, ಸಾಹಿತ್ಯ, ಸಂಗೀತ, ಶಿಲ್ಪಕಲೆ, ಪರಂಪರೆ, ಸಂಸ್ಕೃತಿಯ ಬೀಡು ಎಂಬುದನ್ನು ಹಂಪಿ ಉತ್ಸವ ಸಾದರಪಡಿಸುತ್ತಿದೆ. ಗ್ರಾಪಂ ಸ್ಥಾನಮಾನ ಪಡೆದಿರುವ ಹಂಪಿ ಇಂದು ವಿಶ್ವ ಭೂಪಟದಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ.

ಹಂಪಿ ಪ್ರದೇಶದಲ್ಲಿ ಹಂಪಿ ಉತ್ಸವದ ಸಂದರ್ಭದಲ್ಲಿ ಹಂಪಿಯ ಬೀದಿಗಳಲ್ಲಿ ಮತ್ತು ವಸ್ತು ಪ್ರದರ್ಶನದಲ್ಲಿ ಕಂಡು ಬರುವ ವಾಣಿಜ್ಯ ಚಟುವಟಿಕೆಗಳ ಎಂತಹವರನ್ನೂ ಕ್ಷಣ ಕಾಲ ದಂಗು ಬಡಿಸುತ್ತವೆ. ಧಾರ್ಮಿಕ ಕ್ಷೇತ್ರದೊಂದಿಗೆ ಪ್ರವಾಸಿ ತಾಣವಾಗಿಯೂ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಈಗ ಹಂಪಿ ಉತ್ಸವದ ಮೂರು ದಿನಗಳಲ್ಲಿಯೂ ನಿತ್ಯವೂ ನಡೆಯುವ ವ್ಯಾಪಾರ​ ವಹಿವಾಟುಗಳಿಗೆ ಜನರು ಸ್ಪಂದಿಸುತ್ತಿರುವ ಬಗ್ಗೆ ವ್ಯಾಪಾರಸ್ಥರು ಸಂತಸಗೊಂಡಿದ್ದಾರೆ.

ಅನೇಕ ಶತಮಾನಗಳ ಕಾಲ ವಿಜಯನಗರ ಸಾಮ್ರಾಜ್ಯಕ್ಕೂ ಮತ್ತು ಇತರೆ ದೇಶಗಳೊಡನೆ ವಾಣಿಜ್ಯ ಚಟುವಟಿಕೆಗೂ ಅವಿನಾಭಾವ ಸಂಬಂಧಗಳು ಇರುವ ಬಗ್ಗೆ ಇತಿಹಾಸದಿಂದ ತಿಳಿದು ಬರುತ್ತದೆ. ಹಂಪಿಯ ಸ್ಮಾರಕಗಳು ಯುನೆಸ್ಕೊ ಕಣ್ಣಿಗೆ ಬಿದ್ದು ವಿಶ್ವಪರಂಪರೆ ಪಟ್ಟಿಗೆ ಸೇರಿದಾಗಿನಿಂದ ಹಂಪಿಗೆ ವಿಶೇಷ ಸ್ಥಾನಮಾನ ಲಭಿಸಿದ್ದರಿಂದ ಹಂಪಿಗೆ ದೇಶ-​ವಿದೇಶದ ಪ್ರವಾಸಿಗರ ಸಂಖ್ಯೆ ದಿನದಿನಕ್ಕೂ ಅಧಿಕವಾಗುತ್ತಿದೆ.

ಈ ಬಾರಿಯ ಹಂಪಿ ಉತ್ಸುವದ ವಸ್ತು ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ರುಚಿಕರ ತಿನಿಸುಗಳು ಮತ್ತು ಆಹಾರ ಪದಾರ್ಥಗಳು, ವಿವಿಧ ವಸ್ತುಗಳನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಇಟ್ಟುರುವುದು ವಿಶೇಷವಾಗಿತ್ತು. ವಸ್ತು ಪ್ರದರ್ಶನಕ್ಕೆ ಪ್ರವೇಶವಾಗುತ್ತಿದ್ದಂತೆ ಯಾರಿಗೆ ಯಾವುದು ಇಷ್ಟವೋ ಆ ವಸ್ತುಗಳನ್ನು ಹಂಪಿ ಉತ್ಸವಕ್ಕೆ ಬಂದವರು ಯಾವುದಾದರೊಂದು ವಸ್ತುವನ್ನು ಖರೀದಿಸಿ, ಹೊಟ್ಟೆಗೆ ಒಂದಿಷ್ಟು ತಿಂದು ಜನರು ಹಂಪಿ ಉತ್ಸವಕ್ಕಾಗಿ ಹಂಪಿಯನ್ನು ಶೃಂಗಾರ ಮಾಡಿದ ಸ್ಮಾರಕಗಳನ್ನು ಹಾಗೂ ಮುಖ್ಯವೇದಿಕೆ ಸೇರಿದಂತೆ 6 ವೇದಿಕೆಗಳಿಗೊಮ್ಮೆ ಭೇಟಿ ನೀಡಿ, ಕಲರ್ ಫುಲ್ ವೇದಿಕೆಗಳಲ್ಲಿ ನಡೆಯತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿಕೊಂಡು ತಡ ರಾತ್ರಿಯಲ್ಲಿ ಕೊರೆಯುವಂಹ ಚಳಿಯಲ್ಲಿಯೂ ಹಂಪಿಯಲ್ಲಿ ಜನರು ಸುತ್ತಾಡುತ್ತಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಕಲಿಕೆ ಪ್ರದರ್ಶನಕ್ಕೆ ಕಲಿಕಾ ಹಬ್ಬ ವೇದಿಕೆ: ಬಿಇಒ ನಾಣಿಕಿ ನಾಯ್ಕ
ಹಂಪಿ ಉತ್ಸವದಲ್ಲಿ ರಕ್ತರಾತ್ರಿ ನಾಟಕ ಪ್ರದರ್ಶನ