ವಾಮಮಾರ್ಗದಲ್ಲಿ ಗದ್ದುಗೆ ಏರಲು ಹುನ್ನಾರ ನಡೆಸುವವರಿಗೆ ಜನರೇ ಬುದ್ಧಿ ಕಲಿಸ್ತಾರೆ

KannadaprabhaNewsNetwork |  
Published : Oct 18, 2025, 02:02 AM IST
ಬೆಳಗಾವಿ | Kannada Prabha

ಸಾರಾಂಶ

ವಾಮಮಾರ್ಗದಲ್ಲಿ ಅಧಿಕಾರದ ಗದ್ದುಗೆ ಏರಲು ಹುನ್ನಾರ ನಡೆಸುವವರಿಗೆ ಸಹಕಾರಿ ಕ್ಷೇತ್ರದ ಸ್ವಾಭಿಮಾನಿ ಜನಗಳೇ ಬುದ್ಧಿ ಕಲಿಸುತ್ತಾರೆ ಎಂದು ರಮೇಶ ಕತ್ತಿ ಹೇಳಿದರು.

  ಬೆಳಗಾವಿ :  ದುರಾಡಳಿತದ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಗೋಕಾಕ ಮತ್ತು ಮೂಡಲಗಿ ಜನತೆ ತಿರಸ್ಕರಿಸಿದರೆ, ಮುಂದಿನ ಐದಾರು ವರ್ಷಗಳಲ್ಲಿ ಸಹಜ ಉಸಿರಾಟದ ಮೂಲಕ ಬದುಕು ಸಾಗಿಸುವ ವಾತಾವರಣ ಇಲ್ಲಿ ನಿರ್ಮಾಣವಾಗಲಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಗೋಕಾಕ ನಗರ ಹೊರವಲಯದ ಫಾಲ್ಸ್‌ ರಸ್ತೆಯಲ್ಲಿ ಡಾ.ಮಹಾಂತೇಶ ಕಡಾಡಿ ಅವರ ನಿಯೋಜಿತ ಕಾಲೇಜು ಕಟ್ಟಡದಲ್ಲಿ ಶುಕ್ರವಾರ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘಕ್ಕೆ ಆಯ್ಕೆಗೊಂಡ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ನಿರ್ದೇಶಕರ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘ, ಸಂಗಮ ಸಕ್ಕರೆ ಕಾರ್ಖಾನೆ, ಬಿಡಿಸಿಸಿ ಬ್ಯಾಂಕ್‌ ಮೊದಲಾದ ಸಂಸ್ಥೆಗಳಿಗೆ ಚುನಾವಣೆ ನಡೆಸುವ ವಾತಾವರಣ ಸೃಷ್ಟಿಸಿ, ವಾಮಮಾರ್ಗದಲ್ಲಿ ಅಧಿಕಾರದ ಗದ್ದುಗೆ ಏರಲು ಹುನ್ನಾರ ನಡೆಸುವವರಿಗೆ ಸಹಕಾರಿ ಕ್ಷೇತ್ರದ ಸ್ವಾಭಿಮಾನಿ ಜನಗಳೇ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಿದರೆ ಅವರೇ ನಿಮ್ಮನ್ನು ಆಯ್ಕೆಗೊಳಿಸುವರು. ಹಣದಿಂದ ಎಲ್ಲವನ್ನೂ ಸಂಪಾದಿಸಬಹುದು ಎಂಬ ನಿಮ್ಮ ಲೆಕ್ಕ ಬುಡಮೇಲಾಗುವುದಂತೂ ಶತಸಿದ್ಧ. ನಿಮ್ಮ ಯಾವ ತಂತ್ರ ಮತ್ತು ಕುತಂತ್ರಗಳಿಗೂ ಜನತೆ ಮತ್ತು ಸಂಸ್ಥೆಗಳು ಬಲಿಯಾಗಲಾರವು ಎಂದ ಅವರು, ಗೋಕಾಕ ಸಮೀಪದ ಸಕ್ಕರೆ ಕಾರ್ಖಾನೆಗೆ ನಾಲ್ಕು ದಶಕಗಳ ಹಿಂದೆ ಪಡೆದ ₹85 ಕೋಟಿ ಸಾಲಕ್ಕೆ ಇದುವರೆಗೆ ಬಡ್ಡಿ ಮತ್ತು ಅಸಲನ್ನು ಏಕೆ ಪಾವತಿಸಿಲ್ಲ ಪ್ರಶ್ನಿಸಿದರು.

ಭವಿಷ್ಯದಲ್ಲಿ ಗುಣಮಟ್ಟದ ಆಹಾರ ಹೊಂದಲು ಧವಸ-ಧಾನ್ಯಗಳನ್ನು ಬೆಳೆದುಕೊಡು ಎಂದು ಜನರೇ ಕೃಷಿಕನ ಮನೆ ಬಾಗಿಲಿಗೆ ಬಂದು, ಮುಂಗಡ ಹಣ ಪಾವತಿಸುವ ದಿನಗಳು ದೂರವಿಲ್ಲ. ರಾಜಕೀಯಕ್ಕಾಗಿ ರೈತ ಹಿತಾಸಕ್ತಿಯನ್ನು ಬಲಿ ಪಡೆಯಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಡಾ.ಮಹಾಂತೇಶ ಕಡಾಡಿ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಆಯ್ಕೆಗೊಂಡ ಅಧ್ಯಕ್ಷ ಮಹಾವೀರ ನಿಲಜಗಿ ಮತ್ತು ನಿರ್ದೇಶಕ ಶಿವನಗೌಡ ಮದವಾಲ ಅವರನ್ನು ಸತ್ಕರಿಸಿದರು. ವೇದಿಕೆಯಲ್ಲಿ ಸಂಜೀವ ಪೂಜಾರಿ, ವಕೀಲ ಚಂದನ ಗಿಡ್ಡನವರ ಮೊದಲಾದವರು ಇದ್ದರು.

PREV
Read more Articles on

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ