ಕಂತೆ ಕತೆ ನೋಟು ತಂದು ಗುಟ್ಕಾ ಖರೀದಿಸಿದ ಜನರು

KannadaprabhaNewsNetwork |  
Published : Aug 14, 2026, 01:45 AM IST
ಫೋಟೋ ಕಂತೆ ಕಂತೆ ಹಣವನ್ನು ತೆಗೆದುಕೊಂಡು ಹೋಗುತ್ತಿರುವುದು ಬೈಕ್ ನಲ್ಲಿ ಹೇರಿಕೊಂಡು ಹೋಗುತ್ತಿರುವುದು. | Kannada Prabha

ಸಾರಾಂಶ

ಬೆಳಗ್ಗೆ ಗುಟ್ಕಾ ಖರೀದಿಗೆ ಬಂದವರಿಗೆ ಪಾಕೇಟ್, ಚೀಲಗಟ್ಟಲೇ ಮಾರಾಟ ಮಾಡಿದವರು ಮಧ್ಯಾಹ್ನದ ವೇಳೆಗೆ ಗೋಡಾನ್ ನಲ್ಲಿ ಇದ್ದರೂ ಸಹ ಮಾರಾಟ ಮಾಡದೆ ಸ್ಟಾಕ್ ಖಾಲಿಯಾಗಿದೆ ಎಂದು ಹೇಳಲು ಶುರು ಮಾಡಿದರು.

ಕೊಪ್ಪಳ: ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧ ಮಾಡುವ ಕುರಿತು ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಕೊಪ್ಪಳ ಜಿಲ್ಲೆಯಲ್ಲಿ ಗುಟ್ಕಾ ಖರೀದಿಗೆ ಜನರು ಮುಗಿಬಿದ್ದಿರುವುದು ಕಂಡು ಬಂದಿತು. ಇನ್ನೂ ಅಚ್ಚರಿ ಎಂದರೆ ಸಾಲ ಮಾಡಿ ಕಂತೆ ಕಂತೆ ಹಣ ಕೈಯಲ್ಲಿ ಹಿಡಿದುಕೊಂಡು ಬಂದು ಗುಟ್ಕಾ ಖರೀದಿಸಿಕೊಂಡು ಹೋಗುತ್ತಿರುವುದು ಕಂಡು ಬಂದಿತು.

ಗುಟ್ಕಾ ನಿಷೇಧದ ಕುರಿತು ಮಾಧ್ಯಮದಲ್ಲಿ ವರದಿಯಾಗಿದ್ದರಿಂದ ದುಪ್ಪಟ್ಟು ದರಕ್ಕೆ ಖರೀದಿ ಮಾಡಿಕೊಂಡು ಹೋಗುತ್ತಿರುವುದು ಕಂಡು ಬಂದಿತು. ಎಷ್ಟಾದರೂ ಇರಲಿ, ಕೊಡಿ ಎಂದು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿರುವುದು ಕಂಡು ಬಂದಿತು. ಸೈಕಲ್, ಬೈಕ್ ನಲ್ಲಿ ಹೊಲಕ್ಕೆ ರಸಗೊಬ್ಬರ ಖರೀದಿ ಮಾಡುವಂತೆ ಮಾಡಿ ಹೇರಿಕೊಂಡು ಹೋಗುತ್ತಿದ್ದರು.

ಎಚ್ಚರವಾದ ವ್ಯಾಪಾರಸ್ಥರು: ಬೆಳಗ್ಗೆ ಗುಟ್ಕಾ ಖರೀದಿಗೆ ಬಂದವರಿಗೆ ಪಾಕೇಟ್, ಚೀಲಗಟ್ಟಲೇ ಮಾರಾಟ ಮಾಡಿದವರು ಮಧ್ಯಾಹ್ನದ ವೇಳೆಗೆ ಗೋಡಾನ್ ನಲ್ಲಿ ಇದ್ದರೂ ಸಹ ಮಾರಾಟ ಮಾಡದೆ ಸ್ಟಾಕ್ ಖಾಲಿಯಾಗಿದೆ ಎಂದು ಹೇಳಲು ಶುರು ಮಾಡಿದರು. ಗೋಡಾನ್ ನಲ್ಲಿ ಇಟ್ಟರೆ ಸಮಸ್ಯೆಯಾಗುತ್ತದೆ ಎಂದು ಬೇರೆಡೆ ಸಾಗಿಸಿದರು.

ಮಾರುಕಟ್ಟೆ ದುಪ್ಪಟ್ಟು ಬೆಲೆ: ಅಂಗಡಿಯಲ್ಲಿ ಎಲ್ಲಿ ಕೇಳಿದರೂ ಗುಟ್ಕಾ ಇಲ್ಲ ಎಂದೇ ಹೇಳುತ್ತಿದ್ದಾರೆ. ಆದರೆ ಕದ್ದು ಮುಚ್ಚಿ ನಾಲ್ಕಾರು ಪಟ್ಟು ದುಬಾರಿಯಾಗಿ ಮಾರಾಟ ಮಾಡುತ್ತಿದ್ದಾರೆ. ₹25 ಇದ್ದ ಗುಟ್ಕಾದ ಪ್ಯಾಕೇಟೊಂದು ನೂರು ರು. ತನಕ ಕಳ್ಳತನದಿಂದ ಮಾರಾಟ ಮಾಡುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚುಟುಕುಗಳಿದೆ ಅದ್ಭುತ ಸಂದೇಶ ಶಕ್ತಿ: ಡಾ. ಅನ್ನದಾನೀಶ್ವರ ಶ್ರೀ
ಎಸ್.ಎಸ್. ಪಾಟೀಲ ಶರಣ ಪಥದ ಹಿರಿಯ ಜೀವಿ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ