ಬಿಜೆಪಿ ಸುಳ್ಳನ್ನು ಜನ ನಂಬಲ್ಲ: ವೆಂಕಟೇಶ ನಾಯ್ಕ

KannadaprabhaNewsNetwork |  
Published : Oct 07, 2026, 02:30 AM IST
ಪೊಟೋ ಪೈಲ್ : 6ಬಿಕೆಲ್1 | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಕಸ್ತೂರಿರಂಗನ್ ವರದಿ ಮರೆಮಾಚಲು ಇವರು ಪ್ರತಿ ಗ್ರಾಪಂಗೆ ತೆರಳಿ ಆಂದೋಲನ ನಡೆಸಿ ಜನರಿಗೆ ಸುಳ್ಳು ಮಾಹಿತಿ ಕೊಡುತ್ತಿದ್ದಾರೆ.

ಭಟ್ಕಳ: ಬಿಜೆಪಿಯವರು ಗ್ರಾಮ ಪಂಚಾಯಿತಿಗಳಿಗೆ ತೆರಳಿ ನಮ್ಮ ಮನೆ- ನಮ್ಮ ಹಕ್ಕು ಜನಾಗ್ರಹ ಅಂದೋಲನ ನಡೆಸಿ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದು, ಇದೊಂದು ಬಿಜೆಪಿಯ ಚುನಾವಣೆ ತಂತ್ರವಾಗಿದೆ. ಬಿಜೆಪಿ ಸುಳ್ಳನ್ನು ಜನತೆ ನಂಬುವುದಿಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುವಾಗ ಬಿಜೆಪಿಗೆ ಜನರ ನೆನಪಾಗಿದೆ. ಹೀಗಾಗಿಯೇ ಇವರು ಅರಣ್ಯಭೂಮಿಯಲ್ಲಿರುವ ಜಾಗಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ತೆರಿಗೆ ತೆಗೆದುಕೊಳ್ಳಬಾರದು ಎಂಬ ಆದೇಶ ಬಂದಿದೆ ಎಂದು ಸುಳ್ಳು ಹೇಳಿ ಗ್ರಾಪಂ ಮಟ್ಟದಲ್ಲಿ ಜನರನ್ನು ಸೇರಿಸಿ ಆಂದೋಲನ ನಡೆಸುತ್ತಿದ್ದಾರೆ. ಶಾಸಕರಿರುವಾಗ ಅತಿಕ್ರಮಣದಾರರ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತದ ಮಾಜಿ ಶಾಸಕ ಸುನೀಲ ನಾಯ್ಕ ಚುನಾವಣೆ ಹತ್ತಿರ ಇರುವಾಗ ಸುಳ್ಳು ಹೇಳುತ್ತಿದ್ದಾರೆ ಮತ್ತು ಬಿಜೆಪಿ ಮುಖಂಡರೂ ಸುಳ್ಳು ಹೇಳಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರದ ಕಸ್ತೂರಿರಂಗನ್ ವರದಿ ಮರೆಮಾಚಲು ಇವರು ಪ್ರತಿ ಗ್ರಾಪಂಗೆ ತೆರಳಿ ಆಂದೋಲನ ನಡೆಸಿ ಜನರಿಗೆ ಸುಳ್ಳು ಮಾಹಿತಿ ಕೊಡುತ್ತಿದ್ದಾರೆ. ಕಸ್ತೂರಿರಂಗನ್ ವರದಿ ಜಾರಿ ಆಗದಂತೆ ತಮ್ಮದೇ ಕೇಂದ್ರ ಸರ್ಕಾರದ ಬಳಿ ಒತ್ತಡ ಹೇರುವುದನ್ನು ಬಿಟ್ಟು ಸಂಸದ ಕಾಗೇರಿ ಅವರು ಪ್ರತಿ ಗ್ರಾಪಂಗೆ ತೆರಳಿ ಸುಳ್ಳು ಮಾಹಿತಿ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದ ಅವರು, ಬಿಜೆಪಿಗೆ ಚುನಾವಣೆಗೆ ಬಂದಾಗ ಮಾತ್ರ ಜನರ ನೆನಪಾಗುತ್ತದೆ. ಅದಕ್ಕಾಗಿಯೇ ಆ ಪಕ್ಷದ ಮುಖಂಡರು ಈಗ ಕ್ರಿಯಾಶೀಲವಾಗಿದ್ದು, ಎಲ್ಲೆಡೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ರಾಜು ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಪ್ರಮುಖರಾದ ವಿಷ್ಣು ದೇವಡಿಗ, ನಾರಾಯಣ ನಾಯ್ಕ, ರಾಜೇಶ ನಾಯ್ಕ, ಸುಧಾಕರ್ ನಾಯ್ಕ, ಇರ್ಶಾದ್, ಗಣಪತಿ ನಾಯ್ಕ, ರಮೇಶ ನಾಯ್ಕ, ಜಟ್ಟಪ್ಪ ನಾಯ್ಕ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್‌ ತಾರತಮ್ಯ ಆರೋಪ, ರೈತರ ಪ್ರತಿಭಟನೆ
ಪಕ್ಷದ ಸಂಘಟನೆ ತಳಮಟ್ಟದಿಂದ ಬಲಪಡಿಸಿ: ಜಿ.ಟಿ. ನಾಯ್ಕ