ಜನಪರ ಯೋಜನೆಗಳು ಸಾಮಾನ್ಯ ಜನರಿಗೆ ವರದಾನ-ಶಾಸಕ ಜಿಎಸ್ಪಿ

KannadaprabhaNewsNetwork |  
Published : Feb 27, 2024, 01:31 AM IST
ಪೋಟೊ ಕ್ಯಾಪ್ಸನ: ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದಲ್ಲಿ  ರೂ 30.ಲಕ್ಷ ಅನುದಾನ ನಮ್ಮ ಹೊಲ ನಮ್ಮ ದಾರಿ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಭೂಮಿ ಪೂಜೆ ಮಾಡಿದರು. | Kannada Prabha

ಸಾರಾಂಶ

ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ತಲುಪುತ್ತಿವೆ. ಬಡವರು ಮಧ್ಯಮ ವರ್ಗದ ಜನ ನಿರ್ಗತಿಕರು ಸಾಮಾನ್ಯ ಜನರಿಗೆ ನಮ್ಮ ಜನಪರ ಯೋಜನೆಗಳು ವರದಾನವಾಗಿವೆ ಎಂದು ಶಾಸಕ ಜಿ.ಎಸ್‌. ಪಾಟೀಲ ಹೇಳಿದರು.

ಡಂಬಳ: ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ತಲುಪುತ್ತಿವೆ. ಬಡವರು ಮಧ್ಯಮ ವರ್ಗದ ಜನ ನಿರ್ಗತಿಕರು ಸಾಮಾನ್ಯ ಜನರಿಗೆ ನಮ್ಮ ಜನಪರ ಯೋಜನೆಗಳು ವರದಾನವಾಗಿವೆ ಎಂದು ಶಾಸಕ ಜಿ.ಎಸ್‌. ಪಾಟೀಲ ಹೇಳಿದರು.

ಡಂಬಳ ಹೋಬಳಿ ಹಿರೇವಡ್ಡಟ್ಟಿ ಗ್ರಾಮದಲ್ಲಿ ಶನಿವಾರ ಜಿಪಂ, ಪಂಚಾಯತ ರಾಜ್ ಎಂಜಿನಿಯರಿಂಗ್ ವಿಭಾಗ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಹಿರೇವಡ್ಡಟ್ಟಿ ಗ್ರಾಮದಲ್ಲಿ ಖಬರಸ್ಥಾನದಿಂದ ಹಳೆ ಮಠದವರಿಗೆ ರು. 30.ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಮ್ಮ ಯೋಜನಗಳಿಂದ ಜನರು ನೆಮ್ಮದಿಯಿಂದ ಕುಟುಂಬ ನಿರ್ವಾಹಣೆ ಮಾಡುತ್ತಿರುವುದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಬಡವರು, ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಪ್ರತಿಯೊಂದು ಸಮುದಾಯ ನಮ್ಮ ಸರ್ಕಾರದ ಜನಪರ ಯೋಜನಗಳ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕೇಂದ್ರ ಸರ್ಕಾರದ ಜನವಿರೋಧಿ ಆಡಳಿತದಿಂದ ಜನ ಬೇಸರಗೊಂಡಿದೆ. ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆಯಾಗದಂತೆ ಹಾಗೂ ರಾಜ್ಯದ ಅಭಿವೃದ್ಧಿಗೆ ಹಿನ್ನೆಡೆಯಾಗದಂತೆ ನಮ್ಮ ಸರ್ಕಾರ ಅಗತ್ಯ ಕ್ರಮ ತಗೆದುಕೊಂಡಿದ್ದು ಹಂತ ಹಂತವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ, ಈಸುಫ ಇಟಗಿ, ಹನಮರಡ್ಡಿ ಮೇಟಿ, ಅಬ್ದುಲಸಾಬ ಕಲಕೇರಿ, ಎಚ್.ಎಂ. ಶಿರುಂದ, ಲೋಕಪ್ಪ ನಂದಿಕೋಲ, ಬಸವಣ್ಣ ದ್ಯಾವಣ್ಣವರ, ಮಲ್ಲಣ್ಣ ಕೊಂಚಗೇರಿ, ವೆಂಕಪ್ಪ ಬಳ್ಳಾರಿ, ಗುಳಪ್ಪ ಸಂಗನಾಳ, ಬಸವರಾಜ ಮೇಟಿ, ಪುಲಕೇಶಗೌಡ ಪಾಟೀಲ, ನಿದ್ದೇಪ್ಪ ಮೆಲಗೇರಿ, ಲೋಕಯ್ಯ ಹಿರೇಮಠ, ಜಿಪಂ ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಅಶೋಕ ಕಣವಿ. ಸಹಾಯಕ ಅಭಿಯಂತರ ಮಂಜುನಾಥ ಕಲಬುರ್ಗಿ,ಸಹಾಯಕ ಅಭಿಯಂತರ ಮಂಜುನಾಥ ಕಲಬುರ್ಗಿ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ