ಶೇ. 60 ರಷ್ಟು ನಾಮ ಫಲಕ ಕನ್ನಡದಲ್ಲೇ ಇರಬೇಕು: ಕರವೇ ಅಧ್ಯಕ್ಷ ಹರ್ಷ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲೂ ಶೇ.6ಂ ರಷ್ಟು ಕನ್ನಡದಲ್ಲಿ ನಾಮಫಲಕ ಹಾಗೂ ಶೇ.40 ರಷ್ಟು ಮಾತ್ರ ಇಂಗ್ಲೀಷ್ ಭಾಷೆ ನಾಮ ಫಲಕ ಬಳಸಬಹುದಾಗಿದೆ ಎಂದು ತಾಲೂಕು ಕರವೇ ಅಧ್ಯಕ್ಷ ಹರ್ಷ ತಿಳಿಸಿದರು.

ಅಂಬೇಡ್ಕರ್ ವೃತ್ತದಲ್ಲಿ ಕ.ರ.ವೇ ಯಿಂದ ಕನ್ನಡ ನಾಮ ಫಲಕದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲೂ ಶೇ.6ಂ ರಷ್ಟು ಕನ್ನಡದಲ್ಲಿ ನಾಮಫಲಕ ಹಾಗೂ ಶೇ.40 ರಷ್ಟು ಮಾತ್ರ ಇಂಗ್ಲೀಷ್ ಭಾಷೆ ನಾಮ ಫಲಕ ಬಳಸಬಹುದಾಗಿದೆ ಎಂದು ತಾಲೂಕು ಕರವೇ ಅಧ್ಯಕ್ಷ ಹರ್ಷ ತಿಳಿಸಿದರು.

ಶನಿವಾರ ಅಂಬೇಡ್ಕರ್‌ ವೃತ್ತದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಕನ್ನಡ ಭಾಷೆ ನಾಮ ಫಲಕದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ನಾಮ ಫಲಕ ಕಡ್ಡಾಯ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರನ್ನು ಬಂಧಿಸಿರುವುದನ್ನು ಖಂಡಿಸು ತ್ತೇವೆ. ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ತಾಲೂಕು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್ ಮಾತನಾಡಿ, ಮುಂದಿನ 3 ರಿಂದ 4 ದಿನ ಗಡುವು ನೀಡುತ್ತೇವೆ. ಅಷ್ಟರೊಳಗೆ ಬೇರೆ ಬಾಷೆ ನಾಮ ಫಲಕ ತೆರವು ಗೊಳಿಸಿ ಕನ್ನಡದ ನಾಮ ಫಲಕ ಹಾಕಬೇಕು. ಯಾವುದೇ ಅಂಗಡಿಗಳ ನಾಮ ಫಲಕ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕು. ಕರ್ನಾಟಕದಲ್ಲಿ ಇರುವವರೆಲ್ಲರೂ ಕನ್ನಡಿಗರೇ. ಬೇರೆ ಭಾಷೆಯ ನಾಮ ಫಲಕ ತೆರವು ಗೊಲಿಸದೆ ಇದ್ದರೆ ನಾಮ ಫಲಕಗಳಿಗೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರಿಗೆ ಊಟ, ಔಷಧಿನೀಡದೆ ರೌಡಿಗಳನ್ನು ಬಂಧಿಸುವಂತೆ ಪೊಲೀಸರು ಬಂಧಿಸಿದ್ದಾರೆ. ತಕ್ಷಣ ನಾರಾಯಣಗೌಡರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಕರವೇ ಮುಖಂಡ ರಜಿ ಮಾತನಾಡಿ, ಪೂರ್ವಭಾವಿಯಾಗಿ ಎಲ್ಲಾ ಅಂಗಡಿಗಳಿಗೆ ಕನ್ನಡ ಭಾಷೆ ನಾಮ ಫಲಕ ಹಾಕುವಂತೆ ತಿಳಿಸಿದ್ದೇವೆ. ಸರ್ಕಾರ ನಾರಾಯಣ ಗೌಡರನ್ನು ಬಿಡುಗಡೆಗೊಳಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕರವೇ ಉಗ್ರ ಪ್ರತಿಭಟನೆ ಮಾಡ ಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಬಿ.ಎಚ್.ಕೈಮರದಿಂದ ಪ್ರವಾಸಿ ಮಂದಿರ, ವಾಟರ್ ಟ್ಯಾಂಕ್ ವೃತ್ತದವರೆಗೆ ಮೆರವಣಿಗೆ ಮೂಲಕ ಕಾರ್ಯಕರ್ತರು ಸಾಗಿ, ಅಂಗಡಿ ಹಾಗೂ ಇತರೆ ವಾಣಿಜ್ಯ ಮಳಿಗೆಗಳಿಗೆ ತೆರಳಿ ಆಂಗ್ಲ ಭಾಷೆ ನಾಮ ಫಲಕ ವನ್ನು ಮೂರು ದಿನದ ಒಳಗಾಗಿ ತೆರವುಗೊಳಿಸಲು ಸೂಚಿಸಿದರು. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸುಚಿತ್ರಾ, ಸುಜಾತ, ಭಾನು, ಸಹೇಲ್ ಖಾನ್, ದೀಪ್, ಮಂಜು, ವಿವೇಕ್, ಬಿನು, ವರ್ಗೀಸ್,ರಾಬರ್ಟ್, ಆಕಾಶ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.

Share this article