- ಸರ್ಕಾರಿ ಕಾಲೇಜಿಗೆ ಶೇ.50 ಫಲಿತಾಂಶ: ಪ್ರಾಚಾರ್ಯ ರಾಮಚಂದ್ರಪ್ಪ ಹೊಸಮನೆ ಮಾಹಿತಿ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೊನ್ನಾಳಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶೇ.50ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ರಾಮಚಂದ್ರಪ್ಪ ಹೊಸಮನೆ ಹೇಳಿದರು.ಒಟ್ಟು 200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 99 ವಿದ್ಯಾರ್ಥಿಗಳು ತೆರ್ಗಡೆಗೊಂಡಿದ್ದಾರೆ. 5 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ಪ್ರಥಮ ದರ್ಜೆ 48, ದ್ವಿತೀಯ 36, ಪಾಸಾದವರು 10 ವಿದ್ಯಾರ್ಥಿಗಳು.
ಅರಬಗಟ್ಟೆ ಕಾಲೇಜು:
ಸವಳಂಗ ಕಾಲೇಜು:
ನ್ಯಾಮತಿ ತಾಲೂಕಿನ ಸವಳಂಗ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗಕ್ಕೆ ಶೇ.42ರಷ್ಟು ಫಲಿತಾಂಶ ಬಂದಿದೆ. ಒಟ್ಟು 29ರಲ್ಲಿ 12 ಮಂದಿ ತೇರ್ಗಡೆಯಾಗಿದ್ದಾರೆ. ಪ್ರಥಮ ದರ್ಜೆ 4 ದ್ವಿತೀಯ ದರ್ಜೆ 3 ತೃತೀಯ ದರ್ಜೆ 5 ವಿದ್ಯಾಥಿಗಳು. ವಾಣಿಜ್ಯ ವಿಭಾಗಕ್ಕೆ ಶೇ.93ರಷ್ಟು ಫಲಿತಾಂಶ ಬಂದಿದ್ದು, ಒಟ್ಟು 14 ವಿದ್ಯಾರ್ಥಿಗಳಲ್ಲಿ 3 ಅತ್ಯುನ್ನತ 7 ಪ್ರಥಮ ದರ್ಜೆ, ದ್ವಿತೀಯ ದರ್ಜೆ 3, ತೃತೀಯ ದರ್ಜೆ 3 ಮಂದಿ ತೇರ್ಗಡೆಯಾಗಿದ್ದಾರೆ ಎಂದು ಪ್ರಾಚಾರ್ಯ ಕೋದಂಡ ತಿಳಿಸಿದ್ದಾರೆ.- - -
ನ್ಯಾಮತಿ ತಾಲೂಕಿನ ಬೆಳಗುತ್ತಿ ಶ್ರೀ ತೀರ್ಥಲಿಂಗೇಶ್ವರ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಶೇ.54.84 ಫಲಿತಾಂಶ ಬಂದಿದೆ. ಒಟ್ಟು 35 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 3, ಪ್ರಥಮ 9, ದ್ವಿತೀಯ ದರ್ಜೆಯಲ್ಲಿ 4 ಮಂದಿ ಸಾಧನೆ ಮೆರೆದಿದ್ದಾರೆ. ಮಾಲತೇಶ್ 600ಕ್ಕೆ 553 ಅಂಕಗಳು, ಎಂ.ಶೀಲಾ 600ಕ್ಕೆ 528 ಅಂಕ ಗಳಿಸಿದ್ದಾರೆ ಎಂದು ಪ್ರಾಚಾರ್ಯ ನಾಗರತ್ನ ತಿಳಿಸಿದ್ದಾರೆ.
- - -