ಕಾರ್ಯಕರ್ತರಿಗೆ ನೀಡಿದ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸಿ

KannadaprabhaNewsNetwork |  
Published : Mar 21, 2024, 01:01 AM IST
ಹುಬ್ಬಳ್ಳಿಯ ಅರವಿಂದ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಧಾರವಾಡ ಲೋಕಸಭಾ ಚುನಾವಣೆಯ ನಿರ್ವಹಣಾ ಸಮಿತಿಯ ಸಭೆ ನಡೆಯಿತು. | Kannada Prabha

ಸಾರಾಂಶ

ಪ್ರತಿಯೊಂದು ವಿಭಾಗ ತನ್ನದೇ ಆದ ಮಹತ್ವ ಹೊಂದಿರುತ್ತದೆ. ನೀವೆಲ್ಲರೂ ಚುನಾವಣೆಯ ಮುಖ್ಯ ವಾಹಿನಿಯಲ್ಲಿರುತ್ತೀರಿ.

ಹುಬ್ಬಳ್ಳಿ:

ಕಾರ್ಯಕರ್ತರಿಗೆ ಪಕ್ಷವು ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಲೋಕಸಭೆ ಸಂಚಾಲಕ ಎಂ. ನಾಗರಾಜ ಹೇಳಿದರು.ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಧಾರವಾಡ ಲೋಕಸಭಾ ಚುನಾವಣೆಯ ನಿರ್ವಹಣಾ ಸಮಿತಿ ಸಭೆಯಲ್ಲಿ ಸಮಿತಿಯ 37 ವಿಭಾಗಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರತಿ ವಿಭಾಗದಲ್ಲಿ ಪಕ್ಷದ ಪ್ರಮುಖ ಪದಾಧಿಕಾರಿಗಳನ್ನು ಜೋಡಿಸಲಾಗಿದೆ. ನೀವು ಎಲ್ಲರೂ ಈ ಚುನಾವಣೆಯ ಜವಾಬ್ದಾರಿ ಹೊತ್ತವರು. ನಿಮಗೆ ನೀಡಿದ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.

ರಾಜ್ಯಸಭಾ ಸದಸ್ಯ, ಕ್ಲಸ್ಟರ್ ಪ್ರಮುಖ ಈರಣ್ಣ ಕಡಾಡಿ, ಜವಾಬ್ದಾರಿ ಕುರಿತು ಯಾವ ರೀತಿ ನಿರ್ವಹಿಸಿಕೊಂಡು ಹೋಗಬೇಕೆಂದು ಪ್ರತ್ಯೇಕವಾಗಿ ವಿವರಿಸಿದರು.ಪ್ರತಿಯೊಂದು ವಿಭಾಗ ತನ್ನದೇ ಆದ ಮಹತ್ವ ಹೊಂದಿರುತ್ತದೆ. ನೀವೆಲ್ಲರೂ ಚುನಾವಣೆಯ ಮುಖ್ಯ ವಾಹಿನಿಯಲ್ಲಿರುತ್ತೀರಿ ಎಂದ ಈರಣ್ಣ, ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳನ್ನು ಮನೆ-ಮನೆಗೆ ಹೋಗಿ ಕರಪತ್ರ ನೀಡುವ ಮೂಲಕ ಜನರಿಗೆ ತಿಳಿಸಬೇಕೆಂದು ಕರೆ ನೀಡಿದರು.ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಹಾನಗರ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ಶಿವು ಮೆಣಸಿನಕಾಯಿ, ಮಹೇಂದ್ರ ಕೌತಾಳ, ಮಾಲತೇಶ ಶ್ಯಾಗೋಟಿ, ಶಿವಾನಂದ ಗುಂಡಗೋವಿ, ಬಸವರಾಜ ಕುಂದಗೋಳಮಠ, ಸಂಜಯ್ ಕಪಟಕರ, ಜಯತೀರ್ಥ ಕಟ್ಟಿ, ರಂಗಾ ಬದ್ದಿ, ಸಿದ್ದು ಮೊಗಲಿಶೆಟ್ಟರ್, ರವಿ ನಾಯಕ, ಸೀಮಾ ಲದ್ವಾ, ಚೈತ್ರ ಶಿರೂರು, ರಾಜೇಶ್ವರಿ ಸಾಲಗಟ್ಟಿ, ಮೇನಕಾ ಹುರಳಿ, ಅನುರಾಧ ಚಿಲ್ಲಾಳ, ಶಾಂತಕ್ಕ ನಿಡವಣಿ ಬಸಮ್ಮ ಹುಬ್ಬಳ್ಳಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ