ಕುಂತಿಬೆಟ್ಟದ ಪರಿಸರದಲ್ಲಿ ರಾಕ್ಷಸನ ಸಂಹರಿಸುವ ಬಕ ನಾಟಕ ಪ್ರದರ್ಶನ

KannadaprabhaNewsNetwork |  
Published : Aug 10, 2026, 02:00 AM IST
9ಕೆಎಂಎನ್ ಡಿ20 | Kannada Prabha

ಸಾರಾಂಶ

ಕಳೆದ 18 ವರ್ಷಗಳ ಹಿಂದೆ ‘ಪರಿತ್ಯಕ್ತ’ ಎಂಬ ನಾಟಕವನ್ನು ಯಾವುದೇ ವೇದಿಕೆ, ನಾಟಕದ ಸೆಟ್ ಇಲ್ಲದೆ ಪ್ರದರ್ಶನ ಮಾಡಲಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಯಾವುದೇ ಸೆಟ್, ವೇದಿಕೆ ನಿರ್ಮಾಣ ಮಾಡದೆಯೇ ಕುಂತಿಬೆಟ್ಟದ ಬೆಟ್ಟಗುಡ್ಡಗಳ ಪರಿಸರದ ಮೇಲೆ ವಿದ್ಯುತ್ ದೀಪಗಳ ಬೆಳಕಿನಲ್ಲಿ ‘ಬಕ’ ನಾಟಕ ಪ್ರದರ್ಶನ ಮಾಡಿ ಗಮನ ಸೆಳೆದರು.

ಪಾಂಡವಪುರ:

ತಾಲೂಕಿನ ಕುಂತಿಬೆಟ್ಟದ ಬೆಟ್ಟಗುಡ್ಡಗಳ ಪರಿಸರದಲ್ಲಿ ಶನಿವಾರ ರಾತ್ರಿ ಬಕಾಸುರ ಎಂಬ ರಾಕ್ಷಸನನ್ನು ಸಂಹರಿಸುವ ಕಥಾಧಾರಿತ ‘ಬಕ’ ನಾಟಕ ಪ್ರದರ್ಶನ ನಡೆಯಿತು.

ಪಟ್ಟಣದ ಕುವೆಂಪು ಕಲಾ ಸಂಘದ ವತಿಯಿಂದ ಡಾ.ಕೆ.ವೈ.ಶ್ರೀನಿವಾಸ್ ಅವರ ಸ್ಮರಣಾರ್ಥವಾಗಿ ಎರಡು ದಿನಗಳ ಕಾಲ ನಡೆಯುತ್ತಿರುವ ‘ಬಕ’ ನಾಟಕ ಪ್ರದರ್ಶನದಲ್ಲಿ ತಾಲೂಕಿನ 32ಕ್ಕೂ ಅಧಿಕ ಕಲಾವಿದರು, ಶಿಕ್ಷಕರು ಭಾಗವಹಿಸಿ ಅದ್ಭುತ ಕಲಾ ಪ್ರದರ್ಶನ ನೀಡಿದರು.

ಕಳೆದ 18 ವರ್ಷಗಳ ಹಿಂದೆ ‘ಪರಿತ್ಯಕ್ತ’ ಎಂಬ ನಾಟಕವನ್ನು ಯಾವುದೇ ವೇದಿಕೆ, ನಾಟಕದ ಸೆಟ್ ಇಲ್ಲದೆ ಪ್ರದರ್ಶನ ಮಾಡಲಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಯಾವುದೇ ಸೆಟ್, ವೇದಿಕೆ ನಿರ್ಮಾಣ ಮಾಡದೆಯೇ ಕುಂತಿಬೆಟ್ಟದ ಬೆಟ್ಟಗುಡ್ಡಗಳ ಪರಿಸರದ ಮೇಲೆ ವಿದ್ಯುತ್ ದೀಪಗಳ ಬೆಳಕಿನಲ್ಲಿ ‘ಬಕ’ ನಾಟಕ ಪ್ರದರ್ಶನ ಮಾಡಿ ಗಮನ ಸೆಳೆದರು.

ಪುರಾಣಗಳ ಪ್ರಕಾರ ಬಕಾಸುರ ಎಂಬ ರಾಕ್ಷಸ ಕುಂತಿಬೆಟ್ಟದಲ್ಲಿ ವಾಸವಾಗಿದ್ದು, ನಿತ್ಯ ಬಕಾಸುರನಿಗೆ ಭಕ್ಷ್ಯ ಭೋಜನದ ಜತೆಗೆ ಮನುಷ್ಯನನ್ನು ನೀಡಲಾಗುತ್ತಿತ್ತು. ಒಂದು ದಿನದ ಪಾಂಡವ ಪುತ್ರ ಭೀಮ ಬಕಾಸುರನನ್ನು ಕೊಂದ ಕಥೆ ಆಧಾರದ ನಾಟಕವಾಗಿದೆ. ಬಕಾಸುರ ಎಂಬ ರಾಕ್ಷಸನ ಸಂಹರಿಸುವ ಕಥೆಯೇ ‘ಬಕ’ವಾಗಿದೆ. ಎಲ್ಲಾ ಪಾತ್ರಧಾರಿಗಳು ಅದ್ಭುತವಾಗಿ ಅಭಿನಯಿಸಿದರು. ಅದರಲ್ಲೂ ‘ಬಕ’ ಪಾತ್ರಧಾರಿ ಮೇನಾಗರ ಪ್ರಕಾಶ್, ನಗರಪಾಲಕನ ಪಾತ್ರಧಾರಿ ನಾಗಲಿಂಗೇಗೌಡ, ಭಟನ ಪಾತ್ರಧಾರಿಗಳ ಪಾತ್ರವು ಎಲ್ಲರನ್ನು ಆಕರ್ಷಿಸುತ್ತು. ರಾತ್ರಿ 7.30ಕ್ಕೆ ಆರಂಭಗೊಂಡ ನಾಟಕವು ರಾತ್ರಿ 9 ಗಂಟೆಯವರೆಗೂ ನಡೆಯಿತು.

‘ಬಕ’ ನಾಟಕಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜುಚಾಲನೆ ನೀಡಿ, ಬಳಿಕ ಆರಂಭದಿಂದಲೂ ಕೊನೆವರೆಗೂ ನಾಟಕ ವೀಕ್ಷಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಸೂಚನೆ ರದ್ದುಪಡಿಸದಿದ್ದರೆ ಬೃಹತ್‌ ಹೋರಾಟ ಅನಿವಾರ್ಯ: ಬಿ.ಬಿ. ನಿಂಗಯ್ಯ
ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲೇ ನಡೆಯಲಿ