ಸೇವಾಲಾಲ್‌ರಿಂದ ಲಂಬಾಣಿಗರಿಗೆ ಶಾಶ್ವತ ನೆಲೆ: ಡಾ.ನಾಗರಾಜ್

KannadaprabhaNewsNetwork |  
Published : Sep 02, 2025, 01:00 AM IST
ಪೋಟೋ: 1ಎಸ್‌ಎಂಜಿಕೆಪಿ02ಶಿವಮೊಗ್ಗ ನಗರದ ಜಿಲ್ಲಾ ಬಂಜಾರ ಸಂಘ ಜಿಲ್ಲೆಯ ಎಲ್ಲಾ ತಾಲೂಕಿನ ಬಂಜಾರ ಸಂಘದ ಸಹಭಾಗಿತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಗರದ ಬಂಜಾರ ಭವನದಲ್ಲಿ ನೂತನ ಶ್ರೀ ಸೇವಾಲಾಲ್ ಶ್ರೀ ಮರಿಯಮ್ಮ, ಶ್ರೀ ಗಣಪತಿ ದೇವಸ್ಥಾನದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ,ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ  ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಲಂಬಾಣಿ ಸಮಾಜವನ್ನು ಶಾಶ್ವತ ನೆಲೆಯತ್ತ ಕೊಂಡೊಯ್ದು ನಾಗರಿಕ ಸಮಾಜದ ಹತ್ತಿರಕ್ಕೆ ತಂದು ಅಲೆಮಾರಿ ಜೀವನಕ್ಕೆ ಮುಕ್ತಿ ಹಾಡುವಲ್ಲಿ ದಾರಿ ತೋರಿಸಿದವರು ಸಂತ ಸೇವಾಲಾಲ್ ಗುರುಗಳು. ಅವರ ಸಂದೇಶವನ್ನು ಮತ್ತು ಆದರ್ಶವನ್ನು ಪಾಲಿಸಬೇಕು ಎಂದು ಪೆಸೆಟ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ.ನಾಗರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲಂಬಾಣಿ ಸಮಾಜವನ್ನು ಶಾಶ್ವತ ನೆಲೆಯತ್ತ ಕೊಂಡೊಯ್ದು ನಾಗರಿಕ ಸಮಾಜದ ಹತ್ತಿರಕ್ಕೆ ತಂದು ಅಲೆಮಾರಿ ಜೀವನಕ್ಕೆ ಮುಕ್ತಿ ಹಾಡುವಲ್ಲಿ ದಾರಿ ತೋರಿಸಿದವರು ಸಂತ ಸೇವಾಲಾಲ್ ಗುರುಗಳು. ಅವರ ಸಂದೇಶವನ್ನು ಮತ್ತು ಆದರ್ಶವನ್ನು ಪಾಲಿಸಬೇಕು ಎಂದು ಪೆಸೆಟ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ.ನಾಗರಾಜ್ ಹೇಳಿದರು.

ನಗರದ ಜಿಲ್ಲಾ ಬಂಜಾರ ಸಂಘ ಜಿಲ್ಲೆಯ ಎಲ್ಲಾ ತಾಲೂಕಿನ ಬಂಜಾರ ಸಂಘದ ಸಹಭಾಗಿತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಗರದ ಬಂಜಾರ ಭವನದಲ್ಲಿ ನೂತನ ಶ್ರೀ ಸೇವಾಲಾಲ್ ಶ್ರೀ ಮರಿಯಮ್ಮ, ಶ್ರೀ ಗಣಪತಿ ದೇವಸ್ಥಾನದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ-2025ರಲ್ಲಿ ಭಾಗವಹಿಸಿ ಮಾತನಾಡಿ, ಲಂಬಾಣಿ ಸಮಾಜ ವರ್ಣರಂಜಿತ ಬುಡಕಟ್ಟಿನವರಾಗಿದ್ದು, ಜಿಲ್ಲೆಯಲ್ಲಿ ಲಕ್ಷಕ್ಕೂ ಹೆಚ್ಚು ಜನ ಇದ್ದು, 27 ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಇವರಿಗೆ ಶಾಶ್ವತವಾದ ನೆಲೆ, ತಾಂಡಾ ಆಡಳಿತ ವ್ಯವಸ್ಥೆ, ದುಶ್ಚಟಗಳ ನಿಗ್ರಹ, ಸತ್ಯ, ಅಹಿಂಸೆ, ಮಾನವೀಯ ತತ್ವಗಳನ್ನು ಬೋಧಿಸಿ ಕರ್ತವ್ಯವೇ ದೇವರು ಎಂದು ಮಾರ್ಗದರ್ಶನ ಮಾಡಿದವರು ಸಂತ ಸೇವಾಲಾಲ್ ಆಗಿದ್ದಾರೆ ಎಂದರು.

ಹೈದರಾಬಾದಿನ ನಿಜಾಮ ಕೂಡ ಅವರ ಭಕ್ತರಾಗಿ ಇಂದು ಬಂಜಾರ ಹಿಲ್ಸ್ ಎಂದು ಕರೆಯಲ್ಪಡುವ ಪ್ರದೇಶವನ್ನು ಅವರಿಗೆ ದಾನವಾಗಿ ನೀಡಿದ್ದರು. ಲಂಬಾಣಿ ಸಮಾಜ ಮದ್ಯಪಾನ ಮುಕ್ತ ಸಮಾಜವಾಗಿಸುವಲ್ಲಿ ಸೇವಾಲಾಲ್ ಗುರುಗಳ ಪಾತ್ರ ದೊಡ್ಡದು. ಬದುಕಿನ ಸತ್ಯವನ್ನು ಸರಳವಾಗಿ ಎಲ್ಲರಿಗೂ ಮುಟ್ಟಿಸಿದವರು ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದರೆ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗುತ್ತದೆ ಎಂಬುದು ಪೋಷಕರ ಆಶಯವಾಗಿದೆ. ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದರೆ ಸಾಲದು, ನೀಟ್ ಪರೀಕ್ಷೆಯಲ್ಲೂ ಹೆಚ್ಚಿನ ಅಂಕ ಪಡೆದಾಗ ಮಾತ್ರ ಉಪಯೋಗ ವಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಐದು ವಿಷಯಗಳಲ್ಲಿ ಗಮನವಿಡಬೇಕು. ಶಾರೀರಿಕ ಬಲ, ಮನಸ್ಸಿನ ಬಲ, ಬುದ್ಧಿಶಕ್ತಿಯ ಬಲ, ಆತ್ಮಸಾಕ್ಷಿ ಮತ್ತು ಶಿಸ್ತು. ಈ ಐದು ಅಂಶಗಳನ್ನು ಕೇಂದ್ರೀಕರಿಸಿ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಯಶಸ್ಸು ಕಾಣಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಚಿತ್ರದುರ್ಗ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಸಾಲೂರು ಮಠ ಶಿಕಾರಿಪುರದ ಶ್ರೀ ಸೈನಾಭಗತ್ ಸೇವಾಲಾಲ್ ಸ್ವಾಮೀಜಿ, ಮಾಜಿ ಶಾಸಕ ಹಾಗೂ ಬಂಜಾರ ಸಂಘದ ಜಿಲ್ಲಾಧ್ಯಕ್ಷ ಅಶೋಕ್‌ ನಾಯ್ಕ, ಪ್ರಮುಖರಾದ ಹೀರಾನಾಯ್ಕ, ಆನಂದ ಕೆ. ದುಮ್ಮಳ್ಳಿ, ಹಾಲೇಶ್‌ನಾಯ್ಕ, ಆರ್.ಸಿ.ನಾಯ್ಕ, ಜಯಾನಾಯ್ಕ, ನಾನ್ಯಾನಾಯ್ಕ, ಆಯನೂರು ಶಿವಾನಾಯ್ಕ, ಶೋಬ್ಲಾನಾಯ್ಕ, ನಾಗೇಶ್ ನಾಯ್ಕ, ಸಾಕಪ್ಪಬಾಯ್, ಗಿರೀಶ್ ನಾಯ್ಕ, ಜಗದೀಶ್ ನಾಯ್ಕ, ಉಮಾ ಮಹೇಶ್ವರ ನಾಯ್ಕ, ಮೋತಿ ನಾಯ್ಕ ಮತ್ತಿತರರು ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ