- ಬಿಇಒ ಕಚೇರಿಯಲ್ಲಿ ವಿಕಲಚೇತನ ಮಕ್ಕಳಿಗೆ ಅಲಿಂಕೋ ಸಂಸ್ಥೆಯಿಂದ ಸಾಧನ ಸಲಕರಣೆ ವಿತರಣೆ
ಕನ್ನಡಪ್ರಭ ವಾರ್ತೆ, ಬೀರೂರುವಿಕಲಚೇತನ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಕಾರ್ಯ ಪಾಲಕರಿಂದ ಸಾಧ್ಯವಾಗಬೇಕು ಎಂದು ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ.ಬಸಪ್ಪ ಹೇಳಿದರು.ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ವೈದ್ಯಕೀಯ ಮೌಲ್ಯಾಂಕನ ಶಿಬಿರದ ಅಂಗವಾಗಿ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ಅಲಿಂಕೋ ಸಂಸ್ಥೆ ವಿಕಲಚೇತನ ಮಕ್ಕಳಿಗೆ ಉಚಿತ ಸಾಧನ ಸಲಕರಣೆ ವಿತರಿಸಿ ಮಾತನಾಡಿದರು. ಅಂಗವಿಕಲತೆಯನ್ನು ಪೋಷಕರು ಶಾಪವೆಂದು ತಪ್ಪುಗ್ರಹಿಸದೇ ಮಕ್ಕಳನ್ನು ಪ್ರೀತಿಯಿಂದ ಕಾಣು ವಂತಾಗಬೇಕು. ಮಾತನಾಡಲು ಬಾರದ ಮಗುವಿಗೂ ಸಹ ಪ್ರೀತಿಯ ಭಾವನೆಗಳಿದ್ದು ನಾವು ಅದನ್ನು ಗ್ರಹಿಸಿ ಪರಿಹರಿಸುವಂತಹ ಶಕ್ತಿ ಪಡೆಯಬೇಕು ಎಂದು ಸಲಹೆ ಮಾಡಿದರು. ವಿಕಲಚೇತನ ಮಕ್ಕಳಲ್ಲಿ ಚೇತನಾಶಕ್ತಿ ಸದಾ ಜಾಗೃತವಾಗಿದ್ದು ಆ ಚೇತನಾಶಕ್ತಿಯನ್ನು ಪಾಲಕರು ಮಗುವಿನ ಚಲನವಲನ ಶಕ್ತಿಗಳಿಗೆ ಸ್ಪಲ್ಪ ಆಸಕ್ತಿ ವಹಿಸಿ ಬೆಳೆಸಿದಲ್ಲಿ ಮುಂದಿನ ದಿನಗಳಲ್ಲಿನ ದುಷ್ಪರಿಣಾ ಮ ತಡೆಗಟ್ಟುವಲ್ಲಿ ಸಹಕಾರಿಯಾಗಲಿದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಶೇಖರಪ್ಪ ಮಾತನಾಡಿ ವಿಕಲ ಚೇತನ ಮಕ್ಕಳಲ್ಲಿ ಚೇತನಾ ಶಕ್ತಿ ಅದ್ಭುತವಾಗಿದೆ. ಅದನ್ನ ಪಾಲಕರು ಗ್ರಹಿಸಿ ಆತ್ಮಸ್ಥೈರ್ಯ ತುಂಬಬೇಕು. ಉತ್ತಮ ದೈಹಿಕ ಚಿಕಿತ್ಸೆ ಕೊಡಿಸುತ್ತಾ ಹೋದರೆ ಮಕ್ಕಳು ಸ್ವಲ್ಪವಾದರೂ ಗುಣಮುಖರಾಗುತ್ತಾರೆ. ಇಂತಹ ಕಾರ್ಯಕ್ಕೆ ಸರ್ಕಾರ ವಿಶೇಷ ಕಾಳಜಿವಹಿಸಿ ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತಂದಿದೆ. ಇದರಿಂದ ವಿಕಲಚೇತನ ಮಕ್ಕಳಿಗೆ ಸ್ವಲ್ಪ ಮಟ್ಟಿಗಾರದರೂ ಅನುಕೂಲವಾಗುತ್ತದೆ ಎಂದರು. ಅಂಗವಿಕಲತೆ ಕೇವಲ ಹಾರ್ಮೋನ್ ಗಳ ಕೊರತೆಯಿಂದ ಉಂಟಾಗಬಹುದಾದ ರೋಗವೇ ಹೊರತು ಯಾವುದೇ ರೀತಿ ಶಾಪ, ಅಪರಾಧವಲ್ಲ. ಸರ್ಕಾರ ಶಿಕ್ಷಣ ಇಲಾಖೆಯಲ್ಲಿನ ವಿಕಲಚೇತನ ಮಕ್ಕಳಿಗೆ ಅನುಕೂಲವಾಗಲೆಂದು ಈ ರೀತಿ ಉತ್ತಮ ಯೋಜನೆ ಹಮ್ಮಿಕೊಂಡಿದೆ. ಪೋಷಕರು ಮಕ್ಕಳಿಗೆ ನೀಡಿರುವ ಸಾಧನ ಸಲಕರಣೆಗಳನ್ನು ಕಡ್ಡಾಯವಾಗಿ ಬಳಸಲು ಸೂಚಿಸಬೇಕು ಎಂದರು.ಬೀರೂರು, ಕಡೂರು, ತರೀಕೆರೆ ಸೇರಿದಂತೆ ಒಟ್ಟು 27 ಮಕ್ಕಳಿಗೆ ನಡೆದಾಡಲು ಅನುಕೂಲವಾಗುವಂತೆ ವಿಶೇಷ ಶೂ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಕಾರ್ಯದರ್ಶಿ ಆರ್.ಟಿ.ಅಶೋಕ್, ಪುರಸಭೆ ಆಶ್ರಯ ಕಮಿಟಿ ಸದಸ್ಯ ಬಿ.ಟಿ.ಚಂದ್ರಶೇಖರ್, ಕ್ಷೇತ್ರ ವಿಶೇಷಸಂಪನ್ಮೂಲ ಶಿಕ್ಷಕಿ ದೇವಕಿ, ಕೆ.ಪರಸಪ್ಪ, ಡಿ.ಎಂ. ರೇಣುಕಪ್ಪ, ಮಲ್ಲಿಕಾರ್ಜುನ್, ಸವಿತಾ, ಪುಟ್ಟಾಚಾರ್ ಸೇರಿದಂತೆ ಮತ್ತಿತರರು ಇದ್ದರು.
1 ಬೀರೂರು 1ಬೀರೂರಿನ ಬಿಇಒ ಕಚೇರಿಯಲ್ಲಿ ಸೋಮವಾರ ವೈದ್ಯಕೀಯ ಮೌಲ್ಯಾಂಕನ ಶಿಬಿರದ ಅಂಗವಾಗಿ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ಅಲಿಂಕೋ ಸಂಸ್ಥೆ ವಿಕಲಚೇತನ ಮಕ್ಕಳಿಗೆ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ.ಬಸಪ್ಪ ಉಚಿತ ಸಾಧನ ಸಲಕರಣೆ ವಿತರಿಸಿದರು. ಬಿಆರ್.ಸಿ ಶೇಖರಪ್ಪ, ಅಶೋಕ್, ದೇವಕಿ ಮತ್ತಿತರಿದ್ದರು.