ಹಾನಗಲ್ಲ: ಸಣ್ಣ ರೈತರು, ಕೂಲಿಕಾರರು, ಬಡವರು, ಮಧ್ಯಮ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಕುಟುಂಬಗಳು ನಿವೇಶನ ಖರೀದಿಸಲು ಸಾಧ್ಯವಾಗದೇ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡು ಹತ್ತಾರು ವರ್ಷಗಳಿಂದ ಅತಂತ್ರ ಬದುಕು ನಡೆಸುತ್ತಿದ್ದವು. ಇಂಥ ಸಾವಿರಾರು ಕುಟುಂಬಗಳಿಗೆ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ವಿತರಿಸಿ ಇದೀಗ ಸ್ವತಂತ್ರಗೊಳಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಹಸೀಲ್ದಾರ್ ರೇಣುಕಾ ಎಸ್. ಮಾತನಾಡಿ, ಶಾಶ್ವತ ಮನೆ ಮಾಲೀಕತ್ವ ಪಡೆದ ಕುಟುಂಬಗಳಿನ್ನು ಭಯಪಡುವ ಅಗತ್ಯವಿಲ್ಲ. ಮುಂದೆ ಯಾರೂ ದಾಖಲೆ ಬದಲಿಸಲು ಸಾಧ್ಯವಿಲ್ಲ. ಸಂತೋಷದಿಂದ ಬದುಕು ನಡೆಸುವ ಕಾಲ ಕೂಡಿ ಬಂದಿದೆ. ಇಡೀ ರಾಜ್ಯದಲ್ಲಿಯೇ ಅತ್ಯಧಿಕ ಸಂಖ್ಯೆಯ ಫಲಾನುಭವಿ ಕುಟುಂಬಗಳು ನಮ್ಮ ತಾಲೂಕಿನಲ್ಲಿ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ಪಡೆದಿವೆ. ಕಂದಾಯ ದಾಖಲೆಗಳ ಡಿಜಿಟಲೀಕರಣ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಕ್ರಾಂತಿ ಮಾಡಲಾಗಿದೆ. ಮನೆ ಬಾಗಿಲಿಗೆ ಸರ್ಕಾರವೇ ಬಂದು ಜನಸಂಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕಲಕೇರಿ ಗ್ರಾಮದ ೨೬೦, ಕಲಕೇರಿ ತಾಂಡಾ ಗ್ರಾಮದ ೧೩೫, ಮುಳಥಳ್ಳಿಯ ೧೨೦, ತಾವರಗೊಪ್ಪದ ೬೦, ವೀರಾಪುರದ ೪೦, ವಾಸನದ ೨೩, ಚಿಕ್ಕಹುಲ್ಲಾಳದ ೧೩, ಕನ್ನೇಶ್ವರದ ೧೧, ಹೇರೂರಿನ ೯ ಹಾಗೂ ಕೂಸನೂರು ಗ್ರಾಮದ ೫ ಫಲಾನುಭವಿ ಕುಟುಂಬಗಳಿಗೆ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ವಿತರಿಸಲಾಯಿತು.ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಮುಖಂಡರಾದ ಪ್ರಕಾಶ ಬಣಕಾರ, ನಾಗಪ್ಪ ಮೆಳ್ಳಳ್ಳಿ, ಬಿ.ಎಸ್. ಗೋರೆಗೌಡ್ರ, ಉಮೇಶ ಗೌಳಿ, ಹೇಮನಗೌಡ ಅಡಿಗಣ್ಣನವರ, ಮಾಲತೇಶ ಗೋರೆಗೌಡ್ರ, ಮೂಕಪ್ಪ ಕೊಪ್ಪದ, ಜಯಮ್ಮ ಮಳೆಣ್ಣನವರ, ವಸಂತ ವೆಂಕಟಾಪುರ, ನಿಜಗುಣಿ ಮಳೆಣ್ಣನವರ, ಅಜ್ಜಪ್ಪ ಕಲ್ಪಾದಿ, ರಾಮಚಂದ್ರ ತಳವಾರ, ಅಲ್ತಾಹಿರ್ ಕಚವಿ, ಮಂಜು ಆಲದಕಟ್ಟಿ, ಪ್ರಕಾಶ ಮಾಸಣಗಿ, ಲಕ್ಷ್ಮಣ ಹರಿಜನ, ಸಿದ್ದು ಕಲ್ಲಣ್ಣನವರ, ದಯಾನಂದ ಹಂಚಿನಮನಿ, ಪ್ರಕಾಶಗೌಡ ಪಾಟೀಲ, ಶಂಕರಣ್ಣ ಪಾಟೀಲ, ಇಸ್ಮೈಲ್‌ಸಾಬ್ ತಾವರಗೊಪ್ಪ, ಶೇಕಪ್ಪ ಗಾಣಗೇರ, ಗುಡ್ಡನಗೌಡ ಪಾಟೀಲ, ಪ್ರಕಾಶ ಬಾಗಣ್ಣನವರ, ಮಲ್ಲಿಕಾರ್ಜುನ ಕಳ್ಳಿ, ಮಹೇಶ ಬಣಕಾರ, ಬಿ.ಕೆ. ವಾಸನ, ಮಾರ್ತಾಂಡಗೌಡ ಪಾಟೀಲ ಇದ್ದರು.