ಎಚ್.ಎನ್.ನಾಗರಾಜು, ಕನ್ನಡಪ್ರಭ ವಾರ್ತೆ ಕೊರಟಗೆರೆ ಬಯಲುಸೀಮೆ ಕೊರಟಗೆರೆ ಕ್ಷೇತ್ರದ ಬಹುವರ್ಷದ ಬೇಡಿಕೆಯಾಗಿದ್ದ ಶಾಶ್ವತ ನೀರಾವರಿ ಕನಸಿನ ಕಾಮಗಾರಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ ಅಡಿಗಲ್ಲು ಹಾಕಲಿದ್ದಾರೆ. ಗೊರವನಹಳ್ಳಿ ಶ್ರೀಕ್ಷೇತ್ರದಲ್ಲಿ ೧೯ರ ಶನಿವಾರ ನಡೆಯುವ ಐತಿಹಾಸಿಕ ಕಾರ್ಯಕ್ರಮವು ಇತಿಹಾಸ ಸೃಷ್ಟಿಸಲಿದೆ. ಶಾಶ್ವತ ನೀರಾವರಿ ಕನಸಿನ ಕಾರ್ಯಕ್ರಮಕ್ಕೆ ೧೦ಸಾವಿರಕ್ಕೂ ಅಧಿಕ ರೈತರು ಸೇರುವ ನಿರೀಕ್ಷೆಯಿದೆ.
ನೀರಾವರಿಯ ರೈತರ ಅಂಕಿಅಂಶ.
ಕೊರಟಗೆರೆ ಕೃಷಿ ಇಲಾಖೆಯ ಸಾಗುವಳಿ ವಿಸ್ತೀರ್ಣ ೩೭,೧೯೮ ಹೆಕ್ಟೇರ್ ಇದ್ದು ೩೩೧೦೦ಜನ ರೈತರು ಮಳೆಯಾಶ್ರಿತ ೩೨,೫೫೩ ಹೆಕ್ಟೇರ್, ನೀರಾವರಿ ವಿಸ್ತೀರ್ಣ ೪೬೪೫ಚ ಪ್ರದೇಶದಲ್ಲಿ ಕೃಷಿಬೆಳೆ ಬೆಳೆಯುತ್ತಾರೆ. ತೋಟಗಾರಿಕೆ ಇಲಾಖೆಯ ೮೭೧೪ ಹೆಕ್ಟೇರ್ ಪ್ರದೇಶದಲ್ಲಿ ೫೧೬೦ಜನ ರೈತರು ಮತ್ತು ರೇಷ್ಮೆ ಇಲಾಖೆಯ ೭೩೯ ಹೆಕ್ಟೇರ್ ಭೂಮಿಯಲ್ಲಿ ೯೩೧ಜನ ರೇಷ್ಮೆ ಬೆಳೆಗಾರರು ಹಿಪ್ಪುನೆರಳು ಬೆಳೆಯುತ್ತಾರೆ.೪೫೪ಕೋಟಿಯ ೩೨೦೯ಕಾಮಗಾರಿ.ಸಣ್ಣ ನೀರಾವರಿಯ ೬೨ಕೆರೆಗಳಿಗೆ ೨೮೮ಕೋಟಿಯ ಕಾಮಗಾರಿಗೆ ಚಾಲನೆ, ಪಿಡ್ಲ್ಯೂಡಿಯ ೩೪.೯೯ಕೋಟಿ ವೆಚ್ಚದ ೧೨ಕಾಮಗಾರಿ, ಜಿಪಂಯ ೨೪.೧೨ಕೋಟಿಯ ೬೧ಕಾಮಗಾರಿ, ಗ್ರಾಮೀಣ ಕುಡಿಯುವ ನೀರು ೩೪.೫೬ಕೋಟಿಯ ೫೩ಕಾಮಗಾರಿ, ಬೆಸ್ಕಾಂ ಇಲಾಖೆಯ ೧೯.೧೫ಕೋಟಿಯ ೨ಕಾಮಗಾರಿ, ಪಶು ಇಲಾಖೆಯ ೫೦ಲಕ್ಷದ ೧ಕಾಮಗಾರಿ, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ೨೪.೫೦ಲಕ್ಷ ವೆಚ್ಚದ ೨ಕಾಮಗಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಚಾಲನೆ ನೀಡಲಿದ್ದಾರೆ.
ರೈತರಿಗೆ ಶಾಶ್ವತ ನೀರಾವರಿ ನೀಡುವ ಯೋಜನೆಗೆ ಚಾಲನೆ ನೀಡುವ ಐತಿಹಾಸಿಕ ಹೆಮ್ಮೆಯ ಕ್ಷಣ ಬಂದಿದ್ದು. ಕ್ಷೇತ್ರದ ೧೦೪ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದೆ. ನನಗೆ ಮತ ನೀಡಿ ಅಶೀರ್ವಾದ ಮಾಡಿದ ಜನರಿಗೆ ನೀಡಿದ ಭರವಸೆಯನ್ನ ಈಡೇರಿಸುವ ಕ್ಷಣ ಬಂದಿದೆ. ಬಯಲುಸೀಮೆ ಪ್ರದೇಶವು ಇನ್ನೂ ಮುಂದೆ ನೀರಾವರಿಯ ಕ್ಷೇತ್ರವಾಗಿ ಬದಲಾಗಲಿದೆ. -ಡಾ.ಜಿ.ಪರಮೇಶ್ವರ. ಗೃಹಸಚಿವ. ಕರ್ನಾಟಕ