ಕನ್ನಡಪ್ರಭ ವಾರ್ತೆ ಕಾಗವಾಡ
ಸೋಮವಾರ ಶಾಸಕ ರಾಜು ಕಾಗೆ ಅವರ ಗೃಹ ಕಚೇರಿಗೆ ಭೇಟಿ ನೀಡಿದ ಸನ್ಮತಿ ಶಿಕ್ಷಣ ಸಮಿತಿ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿ, ಶಾಸಕರನ್ನು ಸನ್ಮಾನಿಸಿ ಅಭಿನಂದಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ವಿನೋದ ಬರಗಾಲೆ ಮಾತನಾಡಿ, ನಮ್ಮ ಸಂಸ್ಥೆಗೆ ಶಾಸಕರ ಸಹಕಾರದಿಂದಾಗಿ 2024-25 ನೇ ಸಾಲಿನ ಬಿಎ ಪದವಿ ಶಿಕ್ಷಣಕ್ಕೆ ಸರ್ಕಾರದ ಅನುಮತಿ ದೊರಕಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ. 1951ರಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದಾಗಿ ಸ್ಥಾಪನೆಗೊಂಡಿರುವ ಸನ್ಮತಿ ಶಿಕ್ಷಣ ಸಮಿತಿ ಈಗಾಗಲೇ ಶೇಡಬಾಳ ಪಟ್ಟಣದಲ್ಲಿ ಪ್ರೌಢ ಶಿಕ್ಷಣ, ಪದವಿ ಪೂರ್ವ, ಪದವಿ ವಾಣಿಜ್ಯ ವಿಭಾದಲ್ಲಿ ಶಿಕ್ಷಣ ನೀಡುತ್ತಿದ್ದು, ಜೊತೆಗೆ ಬೆಳಗಾವಿಯಲ್ಲಿಯೂ ಪೂರ್ವ ಪ್ರಾಥಮಿಕದಿಂದ ಹಿಡಿದು ಪದವಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಶೇಡಬಾಳ ಪಟ್ಟಣದಲ್ಲಿ ಕಲಾ (ಬಿಎ) ವಿಭಾಗದ ಶಿಕ್ಷಣ ಆರಂಭಿಸಲಾಗುವುದು ಎಂದ ಅವರು, ಶಾಸಕರು ನಮ್ಮ ಸಂಸ್ಥೆಗೆ ಸದಾ ಸಹಕಾರ ನೀಡುತ್ತಾ ಬಂದಿದ್ದು, ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಸನ್ಮತಿ ಶಿಕ್ಷಣ ಸಮಿತಿ ಉನ್ನತವಾಗಿ ಬೆಳೆಯುತ್ತಿದೆ ಎಂದರು.ಸನ್ಮತಿ ಸಹಕಾರ ಶಿಕ್ಷಣ ಸಮಿತಿ ಅಧ್ಯಕ್ಷ ವಿನೋಧ ಬರಗಾಲೆ, ಉಪಾಧ್ಯಕ್ಷ ಅಜೀತ ನಾಂದ್ರೆ, ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಬಿ.ಡಿ. ನಜವಾಡೆ ಸೇರಿ ಸನ್ಮತಿ ಸಹಕಾರ ಶಿಕ್ಷಣ ಸಮಿತಿ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.