ತಾಯಿ ಅಂತ್ಯಕ್ರಿಯೆಗೆ ಬರಲು ಪಾತಕಿ ರವಿ ಪೂಜಾರಿಗೆ ಅನುಮತಿ

KannadaprabhaNewsNetwork |  
Published : Nov 14, 2026, 02:30 AM IST
13ರವಿಪೂಜಾರಿ | Kannada Prabha

ಸಾರಾಂಶ

ಉಡುಪಿ ಮೂಲದ ಭೂಗತ ಪಾತಕಿ ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ ಗುರುವಾರ ರಾತ್ರಿ ನಿಧನರಾಗಿದ್ದು, ಅವರು ಅಂತ್ಯಕ್ರಿಯಲ್ಲಿ ಭಾಗವಹಿಸಲು ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ.

ಉಡುಪಿ : ಉಡುಪಿ ಮೂಲದ ಭೂಗತ ಪಾತಕಿ ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ ಗುರುವಾರ ರಾತ್ರಿ ನಿಧನರಾಗಿದ್ದು, ಅವರು ಅಂತ್ಯಕ್ರಿಯಲ್ಲಿ ಭಾಗವಹಿಸಲು ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ.

ಈ ಹಿನ್ನೆಲೆಯಲ್ಲಿ ಮಲ್ಪೆ ಸಮೀಪದ ನೆರ್ಗಿಯ ಹಿರಿಯರ ಮನೆಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಯುವ ತಾಯಿಯ ಅಂತ್ಯಕ್ರಿಯೆಯಲ್ಲಿ ರವಿ ಪೂಜಾರಿ ಭಾಗವಹಿಸಲಿದ್ದಾನೆ.

ಇದೀಗ ನ್ಯಾಯಾಲಯವು ತಾಯಿಯ ಅಂತ್ಯಕ್ರಿಯೆಲ್ಲಿ ಭಾಗವಹಿಸಲು ಅನುಮತಿ ನೀಡಿದ್ದು, ಬೆಂಗಳೂರು ಕಾರಾಗೃಹ ಇಲಾಖೆಯ ಪೊಲೀಸರ ಕಾವಲಿನಲ್ಲಿ ಇಂದು ಉಡುಪಿಗೆ ಬರಲಿದ್ದಾನೆ. ಉಡುಪಿಯಲ್ಲಿಯೂ ಹೆಚ್ಚುವರಿ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.ಪಾತಕಿ ಛೋಟ ರಾಜನ್‌ ಸಹಚರನಾಗಿದ್ದ ರವಿ ಪೂಜಾರಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಕೊಲೆ, ಕೊಲೆಯತ್ನ, ಜೀವಬೆದರಿಕೆ, ಹಪ್ತಾ ವಸೂಲಿ ಇತ್ಯಾದಿ 50 ಕ್ಕೂ ಹೆಚ್ಚು ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿ, 26 ವರ್ಷಗಳ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ.2020 ರಲ್ಲಿ ಕರ್ನಾಟಕ ಪೊಲೀಸರು ಆತನನ್ನು ಆಫ್ರಿಕಾದ ಸೆನೆಗಲ್‌ನಲ್ಲಿ ಬಂಧಿಸಿ ಕರೆತಂದಿದ್ದರು. ಅಲ್ಲಿಂದ ಆತನ ಮೇಲಿರುವ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, 6 ವರ್ಷಗಳಿಂದ ಬೆಂಗಳೂರಿನ ಜೈಲಿನಲ್ಲಿದ್ದಾನೆ. ಆತನನ್ನು ಕರೆತರುವ ಮತ್ತು ಭದ್ರತೆಯ ವೆಚ್ಚವನ್ನು ಆತನಿಂದಲೇ ಭರಿಸುವಂತೆ, ಅಂತ್ಯಕ್ರಿಯೆ ಮುಗಿದ ತಕ್ಷಣ ಮರಳಿ ಜೈಲಿಗೆ ಸೇರಿಸುವಂತೆ ನ್ಯಾಯಾಲಯ ಆದೇಶಿಸಿದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದ ನೆರವಿಂದ ರಾಜ್ಯ ಸೆಂಚುರಿ: ಮೋದಿ ಬಣ್ಣನೆ!
ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ