ಸಮಾರಂಭಗಳಲ್ಲಿ ಮದ್ಯ ಸರಬರಾಜು, ವಿತರಣೆಗೆ ಅನುಮತಿ ಕಡ್ಡಾಯ

KannadaprabhaNewsNetwork |  
Published : Dec 25, 2024, 12:48 AM IST
ಡ್ರಿಂಕ್ಸ್‌ | Kannada Prabha

ಸಾರಾಂಶ

ಉಡುಪಿ ಜಿಲ್ಲೆಯ ಎಲ್ಲ ಇವೆಂಟ್ ಮ್ಯಾನೇಜ್ಮೆಂಟ್, ಮದುವೆ ಸಭಾಂಗಣ, ಇತರೆ ಕಾರ್ಯಕ್ರಮ ಜರುಗುವ ಸಭಾಂಗಣ, ಹೋಂ ಸ್ಟೇ, ರೆಸಾರ್ಟ್‌ಗಳ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆಯು ಶುಕ್ರವಾರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯ ಎಲ್ಲ ಇವೆಂಟ್ ಮ್ಯಾನೇಜ್ಮೆಂಟ್, ಮದುವೆ ಸಭಾಂಗಣ, ಇತರೆ ಕಾರ್ಯಕ್ರಮ ಜರುಗುವ ಸಭಾಂಗಣ, ಹೋಂ ಸ್ಟೇ, ರೆಸಾರ್ಟ್‌ಗಳ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆಯು ಶುಕ್ರವಾರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಡಾ.ಬಾಲಕೃಷ್ಣ ಸಿ.ಎಚ್., ಮುಂಬರುವ ಕ್ರಿಸ್ಮಸ್, ಹೊಸ ವರ್ಷ ಆಚರಣೆ ಮತ್ತು ಇತರೆ ಸಭೆ ಸಮಾರಂಭಗಳಲ್ಲಿ ಊಟದೊಂದಿಗೆ ಮದ್ಯ ಸರಬರಾಜು ಮಾಡಿದ್ದಲ್ಲಿ ಅಬಕಾರಿ ಇಲಾಖೆಯಿಂದ ಕಡ್ಡಾಯವಾಗಿ ಸಿಎಲ್-5 ಸನ್ನದುಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಅಲ್ಲದೇ ಯಾವುದೇ ಸಭೆ ಸಮಾರಂಭಗಳಲ್ಲಿ ಗೋವಾ ಮದ್ಯ / ತೆರಿಗೆ ರಹಿತ ಮದ್ಯ / ನಕಲಿ ಮದ್ಯ ಉಪಯೋಗಿಸದಂತೆ ಸೂಚನೆ ನೀಡಿದರು.ಮನೆಗಳಲ್ಲಿ ನಡೆಯುವ ಮೆಹಂದಿ ಹಾಗೂ ಇತರೆ ಸಮಾರಂಭಗಳಲ್ಲಿ ಊಟದೊಂದಿಗೆ ಮದ್ಯ ಸರಬರಾಜು ಮಾಡಿದ್ದಲ್ಲಿ ಸಹ ಕಡ್ಡಾಯವಾಗಿ ಸಿಎಲ್-5 ಸನ್ನದು ಪಡೆದುಕೊಳ್ಳಬೇಕು, ತೆರಿಗೆ ಪಾವತಿಸಿದ ಮದ್ಯವನ್ನು ಉಪಯೋಗಿಸಬೇಕು ಎಂದರು.ಯಾವುದೇ ಅಬಕಾರಿ ಅಕ್ರಮಗಳು ಜರುಗಿದ್ದು ಕಂಡುಬಂದಲ್ಲಿ ಮೊಕದ್ದಮೆ ದಾಖಲಿಸಿ ನಿಯಮಾನುಸಾರ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು, ಈ ನಿಟ್ಟಿನಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರವನ್ನು ಅತ್ಯಗತ್ಯವಾಗಿದ್ದು, ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಮೊ.ನಂ. 9449597104, ಉಡುಪಿ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು, ಮೊ.ನಂ 9482520693, ಕುಂದಾಪುರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು, ಮೊ.ನಂ 9448921980, ಉಡುಪಿ ವಲಯ-1 ಅಬಕಾರಿ ನಿರೀಕ್ಷಕರು ಮೊ.ನಂ.944883554, ಉಡುಪಿ ವಲಯ-2 ಅಬಕಾರಿ ನಿರೀಕ್ಷಕರು ಮೊ.ನಂ.9731860034, ಕಾರ್ಕಳ ವಲಯ ಅಬಕಾರಿ ನಿರೀಕ್ಷಕರು ಮೊ.ನಂ. 8892839092, ಕುಂದಾಪುರ ವಲಯ ಅಬಕಾರಿ ನಿರೀಕ್ಷಕರು ಮೊ.ನಂ.9731674117, ಜಿಲ್ಲಾತಂಡ ಅಬಕಾರಿ ನಿರೀಕ್ಷಕರು ಮೊ.ನಂ. 9035773785 ಅನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದರು.ಸಭೆಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಬಿಂದುಶ್ರೀ ಪಿ., ಜಿಲ್ಲೆಯ ಅಬಕಾರಿಗಳು, ಜಿಲ್ಲೆಯ ಇವೆಂಟ್ ಮ್ಯಾನೇಜ್ಮೆಂಟ್, ಮದುವೆ ಸಭಾಂಗಣ, ಇತರೆ ಕಾರ್ಯಕ್ರಮ ಜರುಗುವ ಸಭಾಂಗಣ, ಹೊಂ ಸ್ಟೇ, ರೆಸಾರ್ಟ್ಗಳ ಮಾಲೀಕರು, ವ್ಯವಸ್ಥಾಪಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾಮಾಣಿಕ, ನಿಷ್ಠೆಯ ಕಾರ್ಯಕ್ಕೆ ಕಾಂಗ್ರೆಸ್‌ನಲ್ಲಿ ಉತ್ತಮ ಅವಕಾಶ: ಶಾಸಕ ಎಚ್.ಡಿ.ತಮ್ಮಯ್ಯ
ಲೀಡ್.. ಇಂದು ವಿವಿಧೆಡೆ ಎಂ.ಕೆ. ಸೋಮಶೇಖರ್ ಹುಟ್ಟುಹಬ್ಬ ಆಚರಣೆ