ವೈಯಕ್ತಿಕ ದ್ವೇಷದ ಹಿನ್ನೆಲೆ ಮನೆ ನೆಲಸಮ

KannadaprabhaNewsNetwork |  
Published : Feb 05, 2026, 01:30 AM IST
ಫೊಟೋ 4ಪಿವಿಡಿ3ತಾಲೂಕಿನ ಟಿ.ಎನ್‌.ಪೇಟೆ ಗ್ರಾಮದಲ್ಲಿ ಗಡಿನಾಡು ರಾಮಾಂಜಿನಪ್ಪ ಅವರಿಗೆ ಸೇರಿದ್ದ ಹಳೇಮನೆ ಏಕಾಏಕಿ ಜೆಸಿಬಿಯಿಂದ ನಲಸಮಗೊಳಿಸಿರುವುದು. | Kannada Prabha

ಸಾರಾಂಶ

ಜೆಸಿಬಿಯ ಮೂಲಕ ತಾಲೂಕಿನ ಟಿ.ಎನ್.ಪೇಟೆ ಗ್ರಾಮದ ನನ್ನ‌ ವಾಸದ ಮನೆ ನೆಲಸಮಗೊಳಿಸಿದ್ದಾರೆಂದು ಗಡಿನಾಡು ರಾಮಾಂಜಿನಪ್ಪ ಅಳಲು ತೋಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಆನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸಂಬಂಧವೇ ಇಲ್ಲದ ವ್ಯಕ್ತಿಗಳು ಜಾಗ ನಮಗೆ ಸೇರಿದೆ ಎಂದು ದೌರ್ಜನ್ಯವೆಸಗಿ ಜೆಸಿಬಿಯ ಮೂಲಕ ತಾಲೂಕಿನ ಟಿ.ಎನ್.ಪೇಟೆ ಗ್ರಾಮದ ನನ್ನ‌ ವಾಸದ ಮನೆ ನೆಲಸಮಗೊಳಿಸಿದ್ದಾರೆಂದು ಗಡಿನಾಡು ರಾಮಾಂಜಿನಪ್ಪ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಬುಧವಾರ ಆತಂಕ ವ್ಯಕ್ತಪಡಿಸಿ ಸುದ್ದಿಗಾರರ ಜತೆ ಮಾತನಾಡಿದ ಅವರು,ಪಾವಗಡ ತಾಲೂಕು ರೊಪ್ಪ ಗ್ರಾಪಂ ವ್ಯಾಪ್ತಿಯ ಟಿ.ಎನ್.ಪೇಟೆ ಗ್ರಾಮದಲ್ಲಿ 100/60 ವಿಸ್ತೀರ್ಣತೆಯ ನಿವೇಶನವಿದ್ದು ಈ ಜಾಗದಲ್ಲಿ ನಮ್ನ ಸೇರಿದ್ದ ಹಳೇ ಮನೆಗಳಿವೆ. ಈ ನಿವೇಶನಕ್ಜೆ ಸಂಬಂಧಪಟ್ಟಂತೆ ಗ್ರಾಪಂ ನಲ್ಲಿ ನನ್ನ ಪತ್ನಿ ಹೆಸರಲ್ಲಿ ಇ ಖಾತೆ ಸಹ ಆಗಿದೆ. ಅಲ್ಲದೇ ಇದರ ಪಕ್ಕದ ಹಳೆಯ ಮಾಳಿಗೆ ಮನೆಯೊಂದು ನಮ್ಮ ಅಣ್ಣ ಟಿ. ಎ. ಲಿಂಗಪ್ಪ ಹಾಗೂ ನನ್ನ ಪತ್ನಿ ಸುನಂದಮ್ಮ ಹೆಸರಿನಲ್ಲಿ ಜಂಟಿ ಖಾತೆ ಇದೆ. ಈ ಸಂಬಂಧ ಅಗತ್ಯದ ದಾಖಲೆಗಳಿವೆ.ಅನಾರೋಗ್ಯ ನಿಮಿತ್ತ ಇಲ್ಲಿನ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ‌ಪಡೆಯುತ್ತಿದ್ದು ಈ ವೇಳೆ ಆಂಧ್ರ ಪ್ರದೇಶದ ಲೇಪಾಕ್ಷಿ ಮಂಡಲಂ ಬಿಸರಮಾನೇಪಲ್ಲಿ ಗ್ರಾಮದ ಅಂಗನವಾಡಿ ಟೀಚರ್ ಯಲ್ಲಮ್ಮ, ಇವರ ಪತಿ ಸೋಮಶೇಖರ್ ಇವರು ನಮ್ಮ ವಿರೋಧಿಗಳ ಜತೆ ಕೈ ಜೋಡಿಸಿ ಈಕೆ ಅಳಿಯ ನವೀನ್ , ಅಲುಕುಂದರಾಜ್ ಹಾಗೂ ಇವರ ಅಣ್ಣ ವೆಂಕಪ್ಪ ಮತ್ತಿತರರು ಏಕಾಏಕಿ ದೌರ್ಜನ್ಯ ದಿಂದ ನಮ್ಮ ಹಳೆಯ ಮಾಳಿಗೆಯ ಮನೆ ಜೆಸಿಬಿ ಮೂಲಕ ಹುರಳಿಸಿ ನೆಲಸಮ ಮಾಡಿದ್ದಾರೆಂದು ಆರೋಪಿಸಿದರು. ಇದು 200 ವರ್ಷದ ಹಿಂದೆ ಈ ಜಾಗ ನಮಗೆ ಸೇರಿದ್ದು ಎಂದು ತಕರಾರು ಮಾಡುತ್ತಿದ್ದು, ಅವರದೇ ಆಗಿದ್ದ ಪಕ್ಷದಲ್ಲಿ ಕಾನೂನು ರೀತಿ ಹೋರಾಟಕ್ಕೆ ಮುಂದಾಗಬೇಕು. ನಾವು ಏನು ಮಾಡಿದರೂ ನಮಗೆ ಬಲ ಹಾಗೂ ಬೆಂಬಲ ಇದೆ ಎಂಬ ಧೋರಣೆಯೊಂದಿಗೆ ಹಣಬಲ, ಜನಬಲ ಇದೆ ಎಂದೂ ನಮ್ಮ ಮೇಲೆ ವಿನಾಕಾರಣ ದೌರ್ಜನ್ಯ ಎಸಗಿದ್ದಾರೆ.

ಇವರಿಂದ ನಮಗೆ ಪ್ರಾಣ ಭಯವಿದೆ. ಇವರು ನಮ್ಮನ್ನು ಯಾವ ಸಮಯದಲ್ಲಿ ಏನಾದರೂ ಮಾಡಬಹುದು. ನಮಗೆ ಜೀವ ರಕ್ಷಣೆ ಕಲ್ಪಿಸಬೇಕು. ಇನ್ನೊಬ್ಬರ ಮೇಲೆ ಇಂತಹ ಕೃತ್ಯ ಎಸಗದಂತೆ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಹೇಳಿದರು. ಈ ಸಂಬಂಧ ಸಂತ್ರಸ್ತ ಗಡಿನಾಡು ರಾಮಾಂಜಿನಪ್ಪ ಅವರ ಪತ್ನಿ ಸುನಂದಮ್ಮ ಅವರು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿಗೆ ಬಂಜಾರ ಸಮಾಜದ ವಿರೋಧ
ಜಿಲ್ಲೆಗೆ ಒಲಿದುಬಂದ 17ಕ್ಕೂ ಅಧಿಕ ಕೊಡುಗೆಗಳು