ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಅನಧಿಕೃತ ಅನಧಿಕೃತ ಜಾಹೀರಾತು ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಜಂಟಿ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್‌ಒಪಿ) ಸಿದ್ಧಪಡಿಸಿ ಆದೇಶಿಸಲಾಗಿದೆ. ಈ ಆದೇಶ ಪತ್ರವನ್ನು ನಗರದಲ್ಲಿರುವ ಪ್ರತಿಯೊಬ್ಬ ಫ್ಲೆಕ್ಸ್, ಬ್ಯಾನರ್ ಮುದ್ರಣಕರಿಗೆ ನೀಡಿ ಕಟ್ಟುನಿಟ್ಟಾಗಿ ಆದೇಶ ಪಾಲಿಸುವಂತೆ ಸೂಚಿಸಬೇಕು ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಎಷ್ಟು ಫ್ಲೆಕ್ಸ್, ಬ್ಯಾನರ್ ಮುದ್ರಕರಿಗೆ ಆದೇಶ ಪ್ರತಿ ನೀಡಿ ಸೂಚಿಸಲಾಗಿದೆ ಎಂಬ ವರದಿಯನ್ನೂ ಪಾಲಿಕೆ ಜಾಹೀರಾತು ವಿಭಾಗಕ್ಕೆ ಸಲ್ಲಿಸಬೇಕು. ಈ ಕಾರ್ಯವನ್ನು ಜಂಟಿ ಆಯುಕ್ತರು, ವಲಯ ಮುಖ್ಯ ಆಯುಕ್ತರು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು (ಜಾಹೀರಾತು ನಿರ್ವಹಿಸಬೇಕೆಂದು ತಿಳಿಸಲಾಗಿದೆ.ಫ್ಲೆಕ್ಸ್-ಬ್ಯಾನರ್ ಮುದ್ರಕರಿಗೆ ನೀಡಲಾದ ಸೂಚನೆ
ಫ್ಲೆಕ್ಸ್ ಮುದ್ರಿಸಲು ಬಂದವರು ಪಾಲಿಕೆಯಿಂದ ಅನುಮತಿ ಪಡೆದುಕೊಂಡಿರುವ ಪ್ರತಿಯನ್ನು ಮುದ್ರಕರಿಗೆ ತೋರಿಸಬೇಕು. ಅದು ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳು ನೀಡಿರುವುದು ಎಂಬುದನ್ನು ಮುದ್ರಕರು ಖಚಿತಪಡಿಸಿಕೊಳ್ಳಬೇಕು. ಗ್ರಾಹಕರು ಮುದ್ರಿಸಲು ಬಯಸುವ ಫ್ಲೆಕ್ಸ್‌ಗಳು, ಬ್ಯಾನರ್‌ಗಳು, ಪೋಸ್ಟರ್‌ಗಳು, ಹೋರ್ಡಿಂಗ್‌ಗಳ ಕುರಿತಂತೆ ಪಡೆದ ಅನುಮತಿ ಪತ್ರಗಳ ನಕಲನ್ನು ಮಾಡಿಟ್ಟುಕೊಳ್ಳಬೇಕು. ಗ್ರಾಹಕರು ಅನುಮತಿ ಪತ್ರ ನೀಡುವಲ್ಲಿ ವಿಫಲವಾದಲ್ಲಿ ಯಾವುದೇ ಜಾಹೀರಾತನ್ನು ಮುದ್ರಿಸಿಕೊಡಬಾರದು. ಅನುಮತಿ ಪಡೆದು ಮುದ್ರಿಸುವ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಕಡ್ಡಾಯವಾಗಿ ಪರಿಸರ ಸ್ನೇಹಿಯಾಗಿರಬೇಕು. ಜತೆಗೆ, ಮುದ್ರಣಕರ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು ಎಂದು ಸೂಚಿಸಲಾಗಿದೆ.