ನಾಪೋಕ್ಲು : ಇಲ್ಲಿಗೆ ಸಮೀಪದ ಪೇರೂರಿನಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ವಿವಿಧ ಆಟೋಟಗಳೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಊರಿನ ಎಲ್ಲಾ ಮನೆಗಳಲ್ಲೂ ಕೋವಿ ಕತ್ತಿ ಒಡಿ ಕತ್ತಿ ಈಟಿ ಮುಂತಾದ ಸಲಕರಣೆಗಳನ್ನು ಪೂಜಿಸಿ, ಗುರು ಕಾರಣಕ್ಕೆ ಹಬ್ಬದ ವಿಶೇಷ ಖಾದ್ಯಗಳನ್ನು ಸಮರ್ಪಿಸಲಾಯಿತು. ನಂತರ ಊರಿನ ಪುರುಷರು ಮಹಿಳೆಯರು ಮಕ್ಕಳು ಪೇರೂರು ಶಾಲಾ ಮೈದಾನಕ್ಕೆ ತೆರಳಿದರು.
ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಂ.ಬಿ. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕರ್ಮದಲ್ಲಿ ನಿವೃತ ಎ.ಸಿ.ಪಿ ಬಿದಾಟ್ಟಂಡ ಬೆಳ್ಳಿಯಪ್ಪ, ನೆಲಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಳೆಯಿಂಡ , ವಿಜು ಅಪ್ಪಚ, ನೆಲಜಿ ಅಂಬಲ ಮಹಿಳಾ ಸಮಾಜದ ಅಧ್ಯಕ್ಷೆ ಅಪ್ಪುಮಣಿಯಂಡ ಡೇಜಿ ಸೋಮಣ್ಣ ಹಿರಿಯರಾದ ಮೂವರ ಬೋಪುಣಿ ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಸಸ್ಯ ಶಾಸ್ತ್ರದಲ್ಲಿ ಪಿ ಎಚ್ ಡಿ ಪದವಿಗಳಿಸಿ ರಾಜ್ಯಮಟ್ಟದ ಸಾಧನೆ ಮಾಡಿದ ತೊಲಂಡ ಪೂಣಚ್ಚ ಹಾಗೂ 10ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ತೋಲಂಡ ಲೀಸಿ ದೇಚಮ್ಮ ಅವರನ್ನು ಗೌರವಿಸಲಾಯಿತು. 50 ವರ್ಷಗಳ ಸಾರ್ಥಕ ದಾಂಪತ್ಯಕ್ಕಾಗಿ ಜಾನಪದ ತಜ್ಞ ಬೋಟೊಲಂಡ ಪೊನ್ನಣ್ಣ ಹಾಗೂ ಶಾಂತಿ, ನಿವೃತ ಕಾಫಿ ಸೊಸೈಟಿಯ ಮ್ಯಾನೇಜರ್ ಚಂಗೆಟಿರ ಅಚ್ಚಯ್ಯ ಹಾಗೂ ದೇವಕಿ ದಂಪತಿಯನ್ನು ಸನ್ಮಾನಿಸಲಾಯಿತು.