ಮುರ ಜಂಕ್ಷನ್‌ನಲ್ಲಿ ಅಫಘಾತ ತಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹ: ಮನವಿ ಸಲ್ಲಿಕೆ

KannadaprabhaNewsNetwork |  
Published : Jun 02, 2025, 11:51 PM IST
ಫೋಟೋ: ೨೯ಪಿಟಿಆರ್-ಮನವಿ ಮುರ ಜಂಕ್ಷನ್‌ನಲ್ಲಿ ನಡೆಯುವ ವಾಹನ ಅಪಘಾತವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಬಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ ಜಂಕ್ಷನ್‌ನಲ್ಲಿ ಬಹಳಷ್ಟು ವಾಹನ ಅಪಘಾತಗಳು ನಡೆಯುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಕಬಕ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಾರ್ವಜನಿಕರು ಗುರುವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಬಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ ಜಂಕ್ಷನ್‌ನಲ್ಲಿ ಬಹಳಷ್ಟು ವಾಹನ ಅಪಘಾತಗಳು ನಡೆಯುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಕಬಕ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಾರ್ವಜನಿಕರು ಗುರುವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.ಮುರ ಜಂಕ್ಷನ್‌ನಿಂದ ಕೆದಿಲಕ್ಕೆ ತೆರಳುವ ರಸ್ತೆಗೆ ಈ ಹಿಂದೆ ಇದ್ದ ರಸ್ತೆಯನ್ನು ಬದಲಿಸಿ ಹೊಸದಾಗಿ ರೈಲ್ವೆ ಮೇಲ್ವೇತುವೆ ನಿರ್ಮಾಣಗೊಂಡು ಆ ರಸ್ತೆಯಲ್ಲಿ ವಾಹನ ಸಂಚಾರ ಪ್ರಾರಂಭಗೊಂಡ ದಿನದಿಂದ ಇಂದಿನವರೆಗೂ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಈ ಸ್ಥಳದಲ್ಲಿ ಅಪಘಾತಗಳು ನಡೆಯುತ್ತಲೇ ಇದೆ. ಆವೈಜ್ಞಾನಿಕವಾಗಿ ನಿರ್ಮಾಣವಾದ ರೈಲ್ವೆ ಮೇಲ್ವೇತುವೆಯಿಂದಾಗಿ ಮುರದಿಂದ ಕೆದಿಲ ರಸ್ತೆಗೆ ತಿರುಗುವಲ್ಲಿ ವಾಹನಗಳು ಮುಖ್ಯರಸ್ತೆಗೆ ಸೇರುವಾಗ ಅಥವಾ ಮುಖ್ಯ ರಸ್ತೆಯಿಂದ ತಿರುಗಿ ಹೋಗುವಾಗ ಅತ್ಯಂತ ಹೆಚ್ಚಿನ ಅಪಘಾತಗಳು ಆಗುತ್ತಿವೆ. ಇಷ್ಟು ಮಾತ್ರವಲ್ಲದೆ ರಸ್ತೆಯ ಸಮೀಪದಲ್ಲಿ ದಟ್ಟವಾದ ಮರಗಳು ಇದ್ದು, ಅವು ಈ ಅಡ್ಡ ರಸ್ತೆಯಿಂದ ಬರುವಂತಹ ವಾಹನಗಳು ಮುಖ್ಯ ರಸ್ತೆಗೆ ಕಾಣದ ರೀತಿಯಲ್ಲಿ ಅಡ್ಡವಾಗಿ ಇರುತ್ತದೆ. ಈ ಮರಗಳಿರುವ ಸ್ಥಳಗಳು ರೈಲ್ವೆ ಇಲಾಖೆಗೆ ಸಂಬಂಧಿಸಿದ ಜಾಗವಾಗಿರುವುದರಿಂದ ಸ್ಥಳೀಯರು ನಿರಂತರವಾಗಿ ಮನವಿ ಸಲ್ಲಿಸಿದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ರೈಲ್ವೆ ಇಲಾಖೆಯ ವಿಳಂಬ ನೀತಿ ತೋರಿದೆ.

ಈ ಪ್ರದೇಶದಲ್ಲಿ ಇತ್ತೀಚಿಗೆ ಒಂದು ತಿಂಗಳಿನಲ್ಲಿ ಮೂರು ಗಂಭೀರ ಅಪಘಾತವಾಗಿದ್ದು, ಸರಾಸರಿ ವಾರದಲ್ಲಿ ಒಂದೆರಡು ಅಪಘಾತ ಆಗುತ್ತಲೇ ಇರುತ್ತದೆ. ಇದೊಂದು ಗಂಭೀರವಾದ ಸಮಸ್ಯೆಯಾಗಿದ್ದು, ಸಂಬಂಧಪಟ್ಟ ಇಲಾಖೆಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಿರಂತರವಾಗಿ ಇಲ್ಲಿ ಸಂಭವಿಸುತ್ತಿರುವ ಅಪಘಾತವನ್ನು ಅಪಮೃತ್ಯುವನ್ನು ತಪ್ಪಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.ಕಬಕ ಗ್ರಾ.ಪಂ. ಅಧ್ಯಕ್ಷೆ ಸುಶೀಲಾ, ಸದಸ್ಯರಾದ ವಿನಯ ಕುಮಾರ್ ಕಲ್ಲೇಗ, ಶಾಬಾ ಕೆ., ಶಂಕರಿ ಜಿ. ಭಟ್, ಗ್ರಾಮಸ್ಥರಾದ ರಶೀದ್ ಮುರ, ಕೇಶವ, ಉಮೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ