ಅನಂತನಾಗ್‌ಗೆ ಫಾಲ್ಕೆ ಪ್ರಶಸ್ತಿ: ಹೊನ್ನಾವರಕ್ಕೆ ಗರಿ

KannadaprabhaNewsNetwork |  
Published : Sep 18, 2026, 02:30 AM IST
1979 ರಲ್ಲಿ ಅನಂತ್ ನಾಗ್  ತಮ್ಮ ಬಾಲ್ಯದ ಸ್ನೇಹಿತ ರಾಮಕೃಷ್ಣ ಶಾನಭಾಗ್ ಅವರ ಮನೆಗೆ ಹೋದಾಗ ತೆಗೆಸಿದ ಛಾಯಾಚಿತ್ರ. | Kannada Prabha

ಸಾರಾಂಶ

ಅನಂತನಾಗ್ ಅಧ್ಯಾತ್ಮದ ಕಡೆಗೂ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಧ್ಯಾನ, ಭಜನೆ ಇವೆ ಮೊದಲಾದವುಗಳನ್ನು ಆಸಕ್ತಿಯಿಂದ ಮಾಡುತ್ತಿದ್ದರು ಎಂದು ಅವರ ಒಡನಾಡಿಗಳು ಹೇಳುತ್ತಾರೆ.

ಪ್ರಸಾದ್ ನಗರೆ

ಹೊನ್ನಾವರ: ಚಂದನವನದ ಹಿರಿಯ ನಟ ಅನಂತನಾಗ್‌ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎನಿಸಿರುವ ‘ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದು ತಾಲೂಕಿನ ಜನರಲ್ಲಿ ಸಂತಸ ಮೂಡಿಸಿದೆ.

ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನವರಾದ ಅನಂತನಾಗ್ ತಮ್ಮ ಬಾಲ್ಯವನ್ನು ಮಲ್ಲಾಪುರದಲ್ಲಿ ಕಳೆದರು. ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ 7 ಮತ್ತು 8ನೇ ತರಗತಿಯನ್ನು ಓದಿದ್ದರು. 1961- 62, 1962- 63ರಲ್ಲಿ ಹೊನ್ನಾವರದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಅಭ್ಯಾಸವನ್ನು ನಡೆಸಿದ್ದರು. ಬಳಿಕ ಮುಂಬೈ ಕಡೆಗೆ ಅನಂತನಾಗ್ ಪ್ರಯಾಣವನ್ನು ಬೆಳೆಸಿದ್ದರು.

ಅನಂತನಾಗ್ ಅವರು ಹೊನ್ನಾವರದಲ್ಲಿ ಇದ್ದ ಸಂದರ್ಭದಲ್ಲಿ ಪಟ್ಟಣದ ಜೋಗ್ ಮಠ್ ರಸ್ತೆಯ ಸಮೀಪದ ಲೀಲಾಬಾಯಿ ಕೋಪಿಕರ್ ಅವರ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿಂದ ಶಾಲೆಗೆ ಹೋಗಿ ಬರುತ್ತಿದ್ದರು. ಮೊದಲಿಂದಲೂ ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಅನಂತನಾಗ್ ಅಧ್ಯಾತ್ಮದ ಕಡೆಗೂ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಧ್ಯಾನ, ಭಜನೆ ಇವೆ ಮೊದಲಾದವುಗಳನ್ನು ಆಸಕ್ತಿಯಿಂದ ಮಾಡುತ್ತಿದ್ದರು ಎಂದು ಅವರ ಒಡನಾಡಿಗಳು ಹೇಳುತ್ತಾರೆ.

ಆಪ್ತ ಸ್ನೇಹಿತರು: ಬಾಲ್ಯದಲ್ಲಿ ಅನಂತನಾಗ್‌ ಅವರು ಹೊನ್ನಾವರದಲ್ಲಿ ನಮ್ಮ ಮನೆಯ ಸಮೀಪವೇ ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದರು. ಅವರು ನಮ್ಮ ಕುಟುಂಬದ ಆಪ್ತ ಸ್ನೇಹಿತರು. ಅವರು ಸಿನಿಮಾ ತಾರೆಯರಾದ ಮೇಲೂ ನಮ್ಮ ಮನೆಗೆ ಆಗಾಗ್ಗೆ ಪ್ರೀತಿಯಿಂದ ಭೇಟಿ ನೀಡುತ್ತಿದ್ದರು. ಅವರು ನಮ್ಮ ಮನೆಗೆ ಭೇಟಿ ನೀಡಿದಾಗ ನಮ್ಮ ಕುಟುಂಬದೊಂದಿಗೆ ಫೋಟೋವನ್ನು ತೆಗೆಸಿಕೊಂಡಿದ್ದರು. ಅವರಿಗೆ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಅತ್ಯಂತ ಖುಷಿಯ ವಿಚಾರ. ಇದು ನಮ್ಮ ತಾಲೂಕೇ ಹೆಮ್ಮೆ ಪಡಬೇಕಾದ ಸಂಗತಿ ಎಂದು ಅನಂತನಾಗ್ ಬಾಲ್ಯದ ಸ್ನೇಹಿತ ರಾಮಕೃಷ್ಣ ಶಾನಭಾಗ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಪೋಷಣೆಯೇ ಬಾಲ್ಯದ ಅಡಿಪಾಯ: ಸುಮಂಗಲ
ಸಂಸ್ಕಾರಯುತ ಸಮಾಜ ಕಟ್ಟಲು ಗಣೇಶೋತ್ಸವ ಪ್ರೇರಣೆ: ಕಾಮತ್