40 ಜನರ ಹೆಸರಲ್ಲಿ ₹60 ಲಕ್ಷ ಸಾಲ ಪಡೆದು ಪರಾರಿಯಾದ ಪೋಟೋಗ್ರಾಫರ್ಸ್‌!

KannadaprabhaNewsNetwork |  
Published : Jun 18, 2025, 11:48 PM IST
ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ 60 ಲಕ್ಷ ಸಾಲ ಪಡೆದು ಪರಾರಿಯಾಗಿರುವ ಫೊಟೋಗ್ರಫರ್ಸ್‌.  | Kannada Prabha

ಸಾರಾಂಶ

ಇಬ್ಬರು ಫೋಟೋಗ್ರಾಫರ್ಸ್‌ಗಳು ವಿವಿಧ ಖಾಸಗಿ ಫೈನಾನ್ಸ್‌ ಹಾಗೂ ಮಹಿಳಾ ಸಂಘಗಳಿಂದ, ಸಾರ್ವಜನಿಕರ ಹೆಸರಿನಲ್ಲಿ ಮಂಜೂರಾದ 60 ಲಕ್ಷಕ್ಕೂ ಅಧಿಕ ಸಾಲ ಪಡೆದು, ಪಂಗನಾಮ ಹಾಕಿ ಪರಾರಿಯಾಗಿರುವ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ಜರುಗಿದೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಇಬ್ಬರು ಫೋಟೋಗ್ರಾಫರ್ಸ್‌ಗಳು ವಿವಿಧ ಖಾಸಗಿ ಫೈನಾನ್ಸ್‌ ಹಾಗೂ ಮಹಿಳಾ ಸಂಘಗಳಿಂದ, ಸಾರ್ವಜನಿಕರ ಹೆಸರಿನಲ್ಲಿ ಮಂಜೂರಾದ 60 ಲಕ್ಷಕ್ಕೂ ಅಧಿಕ ಸಾಲ ಪಡೆದು, ಪಂಗನಾಮ ಹಾಕಿ ಪರಾರಿಯಾಗಿರುವ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ಜರುಗಿದೆ.

ಮಾಲತೇಶ ಕಮ್ಮಾರ, ಮೌನೇಶ ಕಮ್ಮಾರ ಪರಾರಿಯಾದವರು. ಹೊಳಲು ಗ್ರಾಮದಲ್ಲಿ ರೂಪಾ ಸ್ಟುಡಿಯೋ ಎಂಬ ಹೆಸರಿನ ಸ್ಟುಡಿಯೋ ತೆರೆದಿದ್ದರು. ಉತ್ತಮ ಛಾಯಾಚಿತ್ರ ಮತ್ತು ವಿಡಿಯೋ ಮಾಡುವ ಮೂಲಕ ಸುತ್ತಮುತ್ತಲಿನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಆದರೆ, ಕೆಲ ವರ್ಷಗಳಿಂದ ಮಹಿಳೆಯರ ಸ್ವಸಹಾಯ ಗುಂಪು ಸಂಘ ರಚಿಸಿ ಅವರಿಗೆ, ವಿವಿಧ ಕಡೆಗಳ ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಕೊಡಿಸುತ್ತಿದ್ದರು. ಮಹಿಳಾ ಸಂಘದ ಸದಸ್ಯರ ಹೆಸರಿನಲ್ಲಿ ಮಂಜೂರಾದ ಸಾಲ ಅವರಿಗೆ ಬೇಡವಾದಲ್ಲಿ, ಆ ಸಾಲವನ್ನು ತಾವೇ ಪಾವತಿ ಮಾಡುತ್ತೇವೆಂದು ಹೇಳಿ ಸಾಲದ ಹಣ ಪಡೆದುಕೊಂಡಿದ್ದಾರೆ. ಕೆಲ ತಿಂಗಳಗಳ ಕಾಲ ಮಹಿಳೆಯರ ಹೆಸರಿನಲ್ಲಿ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿದ್ದಾರೆ. ಇದನ್ನೇ ನಂಬಿದ ಮಹಿಳೆಯರು ಈಚಿಗೆ ಕೆಲ ತಿಂಗಳಗಳ ಹಿಂದೆ ಗ್ರಾಮದ 40ಕ್ಕೂ ಅಧಿಕ ಜನರ ಹೆಸರಲ್ಲಿ ಲಕ್ಷಾಂತರ ಸಾಲ ಪಡೆಯುವುದು ಅಲ್ಲದೇ, ಮಹಿಳೆಯರ ಬಂಗಾರದ ಆಭರಣಗಳನ್ನು ಪಡೆದು, ಅವುಗಳನ್ನು ಖಾಸಗಿ ಫೈನಾನ್ಸ್‌ಗಳಲ್ಲಿ ಅಡವು ಇಟ್ಟು ಹಣ ಪಡೆದು ಪರಾರಿಯಾಗಿದ್ದಾರೆ.

ಸಾಲ ನೀಡಿರುವ ಮೈಕ್ರೋ ಫೈನಾನ್ಸ್‌ ಮತ್ತು ಸಂಘದವರು ಸಾಲ ನಿಮ್ಮ ಹೆಸರಿನಲ್ಲಿದೆ, ನೀವೇ ಪಾವತಿ ಮಾಡಬೇಕೆಂದು ಹೇಳುತ್ತಿದ್ದಾರೆ. ನಾವು ರೈತರ ಜಮೀನಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಕಟ್ಟಿಕೊಂಡಿದ್ದೇವೆ. ಇಷ್ಟೊಂದು ಹಣ ನಾವು ಹೇಗೆ ಕಟ್ಟಬೇಕು ಎಂಬ ಚಿಂತೆಗೆ ಕೆಲವರು ಒಳಗಾಗಿದ್ದಾರೆ.

ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು, ಇದಕ್ಕೆ ಸೂಕ್ತ ದಾಖಲೆಗಳನ್ನು ತಂದರೆ ಮಾತ್ರ ನಾವು ದೂರು ದಾಖಲು ಮಾಡಿಕೊಳ್ಳುತ್ತೇವೆಂದು ಹೇಳುತ್ತಿದ್ದಾರೆಂದು ಗ್ರಾಮದ ಹಳ್ಳಳ್ಳಿ ಸಿದ್ದಮ್ಮ, ಹವಳಮ್ಮನವರ ಈರಮ್ಮ, ಮಂಗಳಾ ಮುದಿಗೇರಿ, ಶಾರದಾ ಯರಬಾಳ, ರತ್ನಮ್ಮ ಹಡಗಲಿ ಅಕ್ಕಮ್ಮ ಗಡ್ಡಿಗೌಡ, ಚಂದ್ರಮ್ಮ ಮಳ್ಳಪ್ಪನವರ ಹಾಗೂ ಗೌರಮ್ಮ ಹಿರೇಮಠ ಸೇರಿದಂತೆ ಸುಮಾರು 40ಕ್ಕೂ ಅಧಿಕ ಜನರು ಆರೋಪಿಸಿದ್ದಾರೆ.

ಇವರ ಸ್ಟುಡಿಯೋದಲ್ಲಿ ಜನ ದಾಖಲಾತಿಗಳನ್ನು ಜೆರಾಕ್ಸ್‌ ಮಾಡಿಸಲು ಹೋದಾಗ ಕೇಳಿದ್ದಕ್ಕಿಂತ ಹೆಚ್ಚು ಜೆರಾಕ್ಸ್ ಪ್ರತಿಗಳಲ್ಲಿ ಹಾಕುತ್ತಿದ್ದರು. ಪಾಸ್ ಪೋರ್ಟೋ ಸೈಜಿನ ಪೋಟೋ ತೆಗೆಸಲು ಹೋದಾಗ ಹೇಳಿದ್ದಕ್ಕಿಂತ ಹೆಚ್ಚು ಪ್ರಿಂಟ್ ಹಾಕಿ ಅವುಗಳನ್ನು ತಮ್ಮಲ್ಲೆ ಉಳಿಸಿಕೊಳ್ಳುತ್ತಿದ್ದರು. ಇವುಗಳನ್ನು ಅವರು ಸಾಲ ಪಡೆಯಲು ಬಳಸಿಕೊಂಡಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್