ಕನ್ನಡಪ್ರಭ ವಾರ್ತೆ ವಿಜಯಪುರಪರಂಪರೆ, ವಿಶ್ವದ ಐತಿಹಾಸಿಕ ಕ್ಷಣಗಳ ಇತಿಹಾಸ, ತಲೆ ಮಾರುಗಳ ದಾಖಲೀಕರಣವನ್ನು ಕ್ಯಾಮರಾಗಳ ಮುಖಾಂತರ ಸೆರೆ ಹಿಡಿದು ಜಗತ್ತಿಗೆ ತೋರಿಸುವಲ್ಲಿ ಸಾಕ್ಷಿಯಾಗಿಸಿದ್ದಾರೆ. ಅಂಥ ಛಾಯಾಗ್ರಾಹಕರನ್ನು ಸಮಾಜದ ಅವಿಭಾಜ್ಯ ಅಂಗ ಎನ್ನುಬಹುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಂಘಟನೆ ಗಟ್ಟಿಗೊಳಿಸಬೇಕಾಗಿದೆ. ಛಾಯಾಗ್ರಾಹಕರನ್ನು ಗುರುತಿಸದೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಸಂಘವನ್ನು ಬಲಿಷ್ಠಗೊಳಿಸಿ ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ರಚನೆ ಮಾಡುವಂತೆ ಒತ್ತಾಯಿಸುವದು ಅನಿವಾರ್ಯವಾಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲೆಯ ಛಾಯಾಗ್ರಾಹಕರುಗಳಾದ ರವೀಂದ್ರ ಪೂಜಾರಿ, ಮಹೇಶ ಬಾಗಿ, ವಿವೇಕಾನಂದ ಅಕ್ಕಿ. ಚಂದ್ರಕಾಂತ ಸಂಗಮ, ಮಹಮ್ಮದ್ ಇಸಾಕ್, ಪ್ರಭಾಕರ ನೆಲವಡೆ, ಶಶಿಧರ ಆಲಗೂರ ಅವರ ಅನುಪಮ ಸೇವೆಯನ್ನೂ ಗುರುತಿಸಿ ಜಿಲ್ಲಾ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಎಸ್.ಎಸ್.ಎಲ್.ಸಿ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಛಾಯಾಗ್ರಾಹಕರ ಮಕ್ಕಳಾದ ಐಶ್ವರ್ಯ ರಜಪೂತ, ಭವಾನಿ ನೇಜ, ಪ್ರಜ್ವಲ ನ್ಯಾಮಗೊಂಡ, ಪ್ರೀಯಾ ಬಿರಾದಾರ, ಸಚಿನ ಬಡಿಗೇರಗೆ ಗೌರವಧನ, ಪ್ರಮಾಣಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ತಾಲೂಕು ಅಧ್ಯಕ್ಷರುಗಳಾದ ಜಂಗಲಿಬಾಷಾ ಮುಜಾವರ, ಸಂಗಯ್ಯ ಮಠಪತಿ, ಸಿದ್ದು ಕುದುರೆ, ಶಿವರುದ್ರಯ್ಯ ಹಿರೇಮಠ, ಪರಶುರಾಮ ಗುಳ್ಳೂರ, ಪದಾಧಿಕಾರಿಗಳಾದ ಸತೀಶ ಕಲಾಲ, ಪ್ರಶಾಂತ ಪಟ್ಟಣಶೆಟ್ಟಿ, ರಾಜುಸಿಂಗ್ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜೀವ ಕುಂಬಾರ, ಹಿರಿಯತ ಕಲಾವಿದರಾದ ಪಿ.ಎಸ್.ಕಡೆಮನಿ, ಬಿ.ಎಸ್.ಪಾಟೀಲ, ಪಿಂಟು ಕರ್ವಾ, ಉಮೇಶ ಹಿರೆದೇಸಾಯಿ, ಕಿರಣ ಅಕ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಛಾಯಾಗ್ರಾಹಕ ವೃತ್ತಿಯಲ್ಲಿ ಸುಮಾರು ವರ್ಷಗಳಿಂದ ಸಾಗಿ ಬಂದಿದ್ದೇವೆ. ಆದರೂ, ಸರ್ಕಾರ ನಮ್ಮನ್ನು ಗುರುತಿಸುವುದನ್ನು ಮರೆತಿದೆ. ಎಲ್ಲರಿಗೂ ಸಿಗುವ ಸೌಲಭ್ಯ ನಮಗೂ ಸಿಗುವಂತಾಗಲಿ. ಛಾಯಾಗ್ರಾಹಕರಿಗೂ ಮಾಶಾಸನ ದೊರೆಯುಂತೆ ಆದೇಶ ಮಾಡಲಿ.ನಾಗರಾಜ.ಟಿ.ಸಿ, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕ