ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ೩೬ನೇ ವಾರ್ಷಿಕ ಮಹಾಸಭೆ ಭಾನುವಾರ ಮಂಗಳೂರು ಸೈಂಟ್ ಸೆಬಾಸ್ಟಿಯನ್ ಚರ್ಚ್ ಹಾಲ್ ಬೆಂದೂರ್‌ವೆಲ್‌ನ ಮಾಜಿ ಜಿಲ್ಲಾ ಸಂಚಾಲಕ ದಿವಂಗತ ನವೀನ್ ಕುದ್ರೋಳಿ ವೇದಿಕೆಯಲ್ಲಿ ನಡೆಯಿತು.ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ಬೆಂಗಳೂರು(ಕೆಪಿಎ) ಅಧ್ಯಕ್ಷ ಎಚ್.ಎಸ್.ನಾಗೇಶ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ನವೀನ್ ರೈ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ.ಪಿ.ಎ. ಸ್ಥಾಪಕ ಸದಸ್ಯರಾದ ವಿಠಲ್ ಚೌಟ ಹಾಗೂ ಕೀರ್ತಿ ಮಂಗಳೂರು ಧ್ವಜಾರೋಹಣ ನೆರವೇಸಿದರು. ಛಾಯಾ ವಸ್ತು ಪ್ರದರ್ಶನದ ಮಳಿಗೆಯನ್ನು ಜಿಲ್ಲಾ ಸಂಚಾಲಕ ಗೋಪಾಲ್ ಸುಳ್ಯ ಉದ್ಘಾಟಿಸಿದರು.ಛಾಯಾಗ್ರಹಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತ ಸದಸ್ಯ ಉಡುಪಿಯ ಆಸ್ಟ್ರೋ ಮೋಹನ್, ಸಂಘಟಣೆಯ ಹಿರಿಯ ಸದಸ್ಯರಾದ ಕಾಪು ವಿವೇಕ್ ಬಳ್ಳಾಲ್, ಪುತ್ತೂರು ಶಾಂತರಾಮ್ ಶೈನಿ ಸ್ಟುಡಿಯೋ ಅವರನ್ನು ಸನ್ಮಾನಿಸಲಾಯಿತು. ಕೆ.ಪಿ.ಎ ಛಾಯಾ ಭೂಷಣ ಪ್ರಶಸ್ತಿ ಪುರಸ್ಕ್ರತರಾದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರ್ಷಾಕರ್ ಅವರನ್ನು ಅಭಿನಂದಿಸಲಾಯಿತು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಸದಸ್ಯರಾದ ಮೂಡಬಿದಿರೆಯ ರವಿ ಕೋಟ್ಯಾನ್, ಕುಂದಾಪುರ ಜಾವೇದ್ ಅಕ್ತರ್, ಉಡುಪಿ ನಿಧೀಶ್, ಪ್ರಸಾದ್ ಜತ್ತನ್ನ, ಬ್ರಹ್ಮಾವರ ಪ್ರದೀಪ್ ಉಪ್ಪೂರು, ಮಂಗಳೂರು ಸಾಗರ್ ದೇವಾಡಿಗ ಅವರನ್ನು ಗುರುತಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ವಿದ್ಯಾನಿದಿ ಹಾಗು ವಿದ್ಯಾಸ್ಪೂರ್ತಿ ವಿತರಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸದಸ್ಯರು ಮತ್ತು ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ರಾಘವೇಂದ್ರ ಉಡುಪಿ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ದತ್ತಾತ್ರೇಯ ಕಾರ್ಕಳ ವಂದಿಸಿದರು.