ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಛಾಯಾಗ್ರಾಹಕರಿಗೆ ಸೌಹಾರ್ಧತೆಯ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಛಾಯಾಗ್ರಾಹಕರು ವೃತ್ತಿಪರ ಜೀವನದ ಜಂಜಾಟದಲ್ಲಿ ಸದಾ ನಿರತರಾಗಿರುತ್ತೀರಿ, ಆಷಾಢ ಮಾಸದಲ್ಲಿ ವೃತ್ತಿಗೆ ಅಲ್ಪ ವಿರಾಮ ಸಿಕ್ಕಂತಾಗಿರುತ್ತದೆ, ಈ ಸಮಯವನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಛಾಯಾಗ್ರಹಕರಲ್ಲಿನ ಸೌಹಾರ್ಧತೆ ವೃದ್ಧಿಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕ ವೃತ್ತಿಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದ್ದು, ಅದರಲ್ಲೂ ಮೊಬೈಲ್ ದಾಳಿಯಿಂದ ಛಾಯಾಗ್ರಹಕ ವೃತ್ತಿಗೂ ಧಕ್ಕೆಯುಂಟಾಗಿದೆ, ಛಾಯಾಗ್ರಹಕರು ತಮ್ಮ ವೃತ್ತಿ ಕೌಶಲ್ಯದ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುವ ಮೂಲಕ ತಮ್ಮ ವಹಿವಾಟು ಹೆಚ್ಚಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕಿದೆ ಎಂದು ತಿಳಿಸಿದರು.ಛಾಯಾಗ್ರಹಕರ ಸಂಘದ ಕ್ರಿಡಾಪಟುಗಳಿಗೆ ಸಮವಸ್ತ್ರ ಹಾಗೂ ಕ್ರಿಕೆಟ್ ಕಿಟ್‌ಗಳನ್ನು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮೂಲಕ ವಿತರಿಸುವ ಕೆಲಸವನ್ನು ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಜಿ.ಎ.ಪ್ರದೀಪ್ ಮಾತನಾಡಿ, ಛಾಯಾಗ್ರಹಕರು ತಮ್ಮ ವೃತ್ತಿ ಕೌಶಲ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮದೇ ಛಾಪನ್ನು ಮೈಗೂಡಿಸಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಉತ್ತಮ ಆಟಗಾರರಾಗಿ ಹೊರಹೊಮ್ಮುವಂತೆ ಅಭಿನಂದಿಸಿದರು.
ಸೌಹಾರ್ಧತೆಯ ಛಾಯಾಗ್ರಹಕರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಛಾಯಾಗ್ರಾಹಕ ಶೆಕ್ಷಾವಲಿ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು, ಎರಡನೇ ಸ್ಥಾನವನ್ನು ಅನಿಲ್ ತಂಡ, ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ನಾಗೇಂದ್ರ ಜೈನ್ ಪಡೆದುಕೊಂಡರೆ, ಮೂರನೇ ಸ್ಥಾನವನ್ನು ದಾದೂಪೀರ್ ತಂಡ ತನ್ನದಾಗಿಸಿಕೊಂಡಿತು.
ತಾಲೂಕು ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಪ್ರದೀಪ್, ಸಂಸ್ಥಾಪಕ ಅಧ್ಯಕ್ಷ ದೇವಿಮಂಜುನಾಥ್, ಮಾಜಿ ಅಧ್ಯಕ್ಷ ಅರುಣ್‌ಕುಮಾರ್, ಹಿರಿಯ ಛಾಯಾಗ್ರಾಹಕರಾದ ನಾಗರಾಜ್ ಜೈನ್, ಅಂಜಿನಪ್ಪ, ಸುರೇಶ್, ಛಾಯಾಗ್ರಹಕರ ಸಂಘದ ಖಜಾಂಚಿ ಶ್ರೀನಿವಾಸ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.