ಕ್ರೀಡೆಯಿಂದ ಶಾರೀರಿಕ, ಬೌದ್ಧಿಕ ಬೆಳವಣಿಗೆ ಸಾಧ್ಯ: ರೆ.ಫಾ.ಸಿನೋಜ್

KannadaprabhaNewsNetwork | Published : Sep 7, 2024 1:31 AM

ಸಾರಾಂಶ

ನರಸಿಂಹರಾಜಪುರ, ಕ್ರೀಡೆಯಿಂದ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಯಾಗಲಿದೆ ಎಂದು ಶೆಟ್ಟಿಕೊಪ್ಪದ ಚರ್ಚನ ರೆ.ಫಾ ಸಿನೋಜ್ ತಿಳಿಸಿದರು.ಬುಧವಾರ ತಾಲೂಕಿನ ಶೆಟ್ಟಿಕೊಪ್ಪದ ಬರ್ಕಮನ್‌ ಪ್ರೌಢ ಶಾಲೆಯಲ್ಲಿ ನಡೆದ ನ.ರಾ.ಪುರ ವಲಯ ಮಟ್ಟದ ಪ್ರೌಢ ಶಾಲಾ ವಿಭಾಗದ ಥ್ರೋಬಾಲ್‌ ಕ್ರೀಡಾ ಕೂಟದ ಸಮಾರೋಪದಲ್ಲಿ ಮಾತನಾಡಿ, ಆಟ ಆಡುವುದರಿಂದ ಮಾನಸಿಕ ಒತ್ತಡ ಸಹ ಕಡಿಮೆಯಾಗಲಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೂ ಅನುಕೂಲವಾಗುತ್ತದೆ. ಕ್ರೀಡೆಯಲ್ಲಿ ಸೋಲು, ಗೆಲವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ ಎಂದರು.

ಶೆಟ್ಟಿಕೊಪ್ಪ ಬರ್ಕಮನ್ ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ಪ್ರೌಢ ಶಾಲಾ ಥ್ರೋಬಾಲ್‌ ಕ್ರೀಡಾಕೂಟ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕ್ರೀಡೆಯಿಂದ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಯಾಗಲಿದೆ ಎಂದು ಶೆಟ್ಟಿಕೊಪ್ಪದ ಚರ್ಚನ ರೆ.ಫಾ ಸಿನೋಜ್ ತಿಳಿಸಿದರು.

ಬುಧವಾರ ತಾಲೂಕಿನ ಶೆಟ್ಟಿಕೊಪ್ಪದ ಬರ್ಕಮನ್‌ ಪ್ರೌಢ ಶಾಲೆಯಲ್ಲಿ ನಡೆದ ನ.ರಾ.ಪುರ ವಲಯ ಮಟ್ಟದ ಪ್ರೌಢ ಶಾಲಾ ವಿಭಾಗದ ಥ್ರೋಬಾಲ್‌ ಕ್ರೀಡಾ ಕೂಟದ ಸಮಾರೋಪದಲ್ಲಿ ಮಾತನಾಡಿ, ಆಟ ಆಡುವುದರಿಂದ ಮಾನಸಿಕ ಒತ್ತಡ ಸಹ ಕಡಿಮೆಯಾಗಲಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೂ ಅನುಕೂಲವಾಗುತ್ತದೆ. ಕ್ರೀಡೆಯಲ್ಲಿ ಸೋಲು, ಗೆಲವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಬರ್ಕಮನ್ ಪ್ರೌಢ ಶಾಲಾ ಮುಖ್ಯಸ್ಥ ರೆ.ಫಾ. ಸೆಬಾಸ್ಟಿನ್‌ ಮಾತನಾಡಿ, ಇಂದು ಕ್ರೀಡೆಗೆ ಎಲ್ಲಾ ರೀತಿಯ ಸಹಕಾರ ಸಿಗುತ್ತಿದೆ. ಕ್ರೀಡೆ ಎಂದರೆ ಒಂದು ಕಡೆ ಆಟ ನಡೆಯುತ್ತಿದ್ದರೆ ಇನ್ನೊಂದು ಕಡೆ ಆಟ ನೋಡುವ ವೀಕ್ಷಕರಿಗೆ ಹೆಚ್ಚು ಮುದ ನೀಡುತ್ತದೆ. ಒತ್ತಡ ಜೀವನಕ್ಕೆ ಕ್ರೀಡೆ ಮದ್ದಾಗಬಲ್ಲದು. ಆದ್ದರಿಂದ ಕ್ರೀಡೆಯನ್ನು ಪ್ರೋತ್ಸಾಹಿಸ ಬೇಕು ಎಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆಯನ್ನು ಪ್ರೌಢ ಶಾಲಾ ಪೋಷಕ ಸಮಿತಿ ಅಧ್ಯಕ್ಷ ಸಿರಾಜ್‌ ವಹಿಸಿದ್ದರು.ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯೆ ವಾಣಿ ನರೇಂದ್ರ, ಪೋಷಕ ಸಮಿತಿ ಉಪಾಧ್ಯಕ್ಷೆ ಶಾನ್ಸಿ, ಸದಸ್ಯರಾದ ದೇವೇಂದ್ರ,ಸಾಜು,ಮುಖ್ಯ ಶಿಕ್ಷಕ ಜಾನ್‌, ಸಹ ಶಿಕ್ಷಕರಾದ ಜೋಸ್‌, ಜಗದೀಶ್‌, ಥೋಮಸ್‌, ದೈಹಿಕ ಶಿಕ್ಷಕಿ ಜಾನ್ಸಿ ಇದ್ದರು.

ಬಾಲಕರ ಥ್ರೋಬಾಲ್‌ ವಿಭಾಗದಲ್ಲಿ ನ.ರಾ.ಪುರ ಜೀವನ್‌ ಜ್ಯೋತಿ ಪ್ರೌಢ ಶಾಲೆ ಪ್ರಥಮ ಸ್ಥಾನ, ಶೆಟ್ಟಿಕೊಪ್ಪ ಬರ್ಕಮನ್ ಪ್ರೌಢ ಶಾಲೆ ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಶೆಟ್ಟಿಕೊಪ್ಪ ಬರ್ಕಮನ್ ಪ್ರೌಢ ಶಾಲೆ ಪ್ರಥಮ. ನ.ರಾ.ಪುರ ದೀಪ್ತಿ ಪ್ರೌಢ ಶಾಲೆ ದ್ವಿತೀಯ ಸ್ಥಾನ ಪಡೆಯಿತು. ಕ್ರೀಡಾ ಕೂಟದಲ್ಲಿ 12 ಪ್ರೌಢ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this article