ಕೊಪ್ಪಳ: ದೈಹಿಕ ಶಿಕ್ಷಣ ಮಗುವಿಗೆ ಉತ್ತಮ ಆರೋಗ್ಯ ಕೊಟ್ಟರೆ, ಸಾಮಾನ್ಯ ಶಿಕ್ಷಣ ಆ ಮಗುವನ್ನು ಉನ್ನತ ಮಟ್ಟಕ್ಕೆ ಒಯ್ಯುತ್ತದೆ ಎಂದು ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ. ಮುಜುಗುಂಡವರ ಹೇಳಿದ್ದಾರೆ.
ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ ಧ್ವಜವಂದನೆ, ಪಥ ಸಂಚಲನ ನೆರವೇರಿಸಿದರು. ಶಾಲೆಯ ಪ್ರಾಚಾರ್ಯ ಫಾದರ್ ಜಬಮಲೈ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಬಾಸ್ಕೆಟ್ ಬಾಲ್, ಕೊಕೋ, ವಾಲಿಬಾಲ್, ರಿಲೆ 400 ಮೀ. 100 ಓಟ ಮುಂತಾದ ಸ್ಪರ್ಧೆಗಳು ಜರುಗಿದವು. ವ್ಯವಸ್ಥಾಪಕ ಫಾದರ್ ಮ್ಯಾಥ್ಯೂ ಪಾಲ್ಗೊಂಡಿದ್ದರು.ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಮತ್ತು ಪದಕಗಳನ್ನು ನೀಡಿ ಗೌರವಿಸಲಾಯಿತು.