ದೇಹದಾರ್ಢ್ಯ ಶಿಸ್ತು ಕಲಿಸುತ್ತದೆ: ಶಾಸಕ ಇಕ್ಬಾಲ್ ಹುಸೇನ್

KannadaprabhaNewsNetwork |  
Published : Jan 02, 2026, 02:15 AM IST
1ಕೆಆರ್ ಎಂಎನ್ 4.ಜೆಪಿಜಿರಾಮನಗರದ ಆರ್‌ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಆರ್‌ಬಿಎಲ್ ಪಿಟ್ನೆಸ್ ಮತ್ತು ಕರ್ನಾಟಕ ಅಮೇಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಮಿಸ್ಟರ್ ರೇಷ್ಮೆ ನಾಡು - 2025 ಕಾರ್ಯಕ್ರಮದಲ್ಲಿ ಪ್ರಸಾದ್‌ಕುಮಾರ್, ಮಿಸ್ಟರ್ ಇಂಡಿಯಾ ಕಾಮರಾಜ್, ಮಹಮ್ಮದ್ ರಫಿ ಅವರಿಗೆ ದ್ರೋಣಾ ಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಇದೇ ವೇಳೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಏಕಲವ್ಯ ಪ್ರಶಸ್ತಿ ಪಡೆದಿರುವ ಪ್ರಸಾದ್‌ ಕುಮಾರ್, ಮಿಸ್ಟರ್ ಇಂಡಿಯಾ ಕಾಮರಾಜ್, ಮಹಮ್ಮದ್ ರಫಿ ಅವರಿಗೆ ಆರ್‌ಬಿಎಲ್ ಲೋಕೇಶ್ ಅವರು ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ದೇಹದಾರ್ಢ್ಯ ಶಿಸ್ತು ಮತ್ತು ಪರಿಪೂರ್ಣ ದೇಹವನ್ನು ಪ್ರದರ್ಶಿಸುವುದಾಗಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್‌ ಹುಸೇನ್ ಹೇಳಿದರು.

ನಗರದ ಆರ್‌ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಆರ್‌ಬಿಎಲ್ ಫಿಟ್ನೆಸ್ ಮತ್ತು ಕರ್ನಾಟಕ ಅಮೇಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಮಿಸ್ಟರ್ ರೇಷ್ಮೆ ನಾಡು- 2025 ಕಾರ್ಯಕ್ರಮದಲ್ಲಿ ದ್ರೋಣಾ ಚಾರ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಯುವಕರು ಉತ್ತಮ ಆರೋಗ್ಯ ಮತ್ತು ಹಿತಕರವಾದ ದೇಹವನ್ನು ಪ್ರದರ್ಶಿಸಲು ಹೆಚ್ಚು ಆಸಕ್ತಿ ವಹಿಸುತ್ತಾರೆ. ಅಂತವರಿಗೆ ಲೋಕೇಶ್ ನೇತೃತ್ವದ ಆರ್‌ಬಿಎಲ್ ಫಿಟ್ನೆಸ್ ಕೇಂದ್ರ ಅವಕಾಶ ಕೊಟ್ಟಿದೆ. ಅಲ್ಲದೆ ಹೆಸರಾಂತ ಮೂವರು ಹಿರಿಯ ದೇಹದಾರ್ಢ್ಯ ಪಟುಗಳಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಏಕಲವ್ಯ ಪ್ರಶಸ್ತಿ ಪಡೆದಿರುವ ಪ್ರಸಾದ್‌ ಕುಮಾರ್, ಮಿಸ್ಟರ್ ಇಂಡಿಯಾ ಕಾಮರಾಜ್, ಮಹಮ್ಮದ್ ರಫಿ ಅವರಿಗೆ ಆರ್‌ಬಿಎಲ್ ಲೋಕೇಶ್ ಅವರು ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ.ಹಾಸನ ರಘು, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ, ಕೆಪಿಸಿಸಿ ಹಿಂದುಳಿದ ವರ್ಗದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಪವಿತ್ರ ಪ್ರಭಾಕರ್‌ರೆಡ್ಡಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ರಾಜಶೇಖರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಸಮಾಜ ಸೇವಕ ಭೋಜರಾಜ್, ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು, ಜೆಡಿಎಸ್ ರಾಜ್ಯ ವಕ್ತಾರ ಬಿ.ಉಮೇಶ್, ಯೂಥ್ ಕಾಂಗ್ರೆಸ್ ಉಪಾಧ್ಯಕ್ಷ ಜನಾರ್ಧನ್, ಕರವೇ ಸ್ವಾಭಿಮಾನಿ ಬಣದ ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಾಜು, ವಿಶ್ವಕರ್ಮ ಸಮಾಜದ ಸಂಘಟನಾ ಕಾರ್ಯದರ್ಶಿ ಟಿ.ವಿ.ನಾರಾಯಣ್, ಜಯ ಕರ್ನಾಟಕ ಸಂಘಟನೆಯ ಅರುಣ್, ರವಿ, ಕರುನಾಡ ಸೇನೆ ಜಗದೀಶ್, ಚನ್ನಮಾನಹಳ್ಳಿ ರಾಜು ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷ 2026: ಜನರಿಂದ ತುಂಬಿ ತುಳುಕಿದ ಪ್ರವಾಸಿ ತಾಣಗಳು
ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಪ್ರತಿಯೊಬ್ಬರೂ ಪಣತೊಡಬೇಕು: ನ್ಯಾ.ರಘುನಾಥಗೌಡ