ಜನರು ಮಾನಸಿಕವಾಗಿ ಹಾಗೂ ಶಾರಿರಿಕವಾಗಿ ಸದೃಢರಾಗಲು ಕ್ರೀಡೆಗಳು ಮುಖ್ಯ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು.
ಕನ್ನಡಪ್ರಭವಾರ್ತೆ ನಾಪೋಕ್ಲು
ಜನರು ಮಾನಸಿಕವಾಗಿ ಹಾಗೂ ಶಾರಿರಿಕವಾಗಿ ಸದೃಢರಾಗಲು ಕ್ರೀಡೆಗಳು ಮುಖ್ಯ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು.
ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮುಂಭಾಗದ ಕುದುಕ್ಕುಳಿ ಕುಶಾಲಪ್ಪನವರ ಗದ್ದೆಯಲ್ಲಿ ಆಯೋಜಿಸಿದ ಅಯ್ಯಂಗೇರಿಯ ಗೌಡ ಯುವ ಒಕ್ಕೂಟದ ವತಿಯಿಂದ ಪ್ರಥಮ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕ್ರೀಡಾ ಉತ್ಸವಗಳು ರಾಜರ ಕಾಲದಿಂದಲೇ ಪ್ರಖ್ಯಾತಿ ಪಡೆದಿತ್ತು. ಕಳೆದ ವರ್ಷ ಯುವ ಒಕ್ಕೂಟದ ವತಿಯಿಂದ ನಡೆಸಿದಂತಹ ಕಾರ್ಯಕ್ರಮ ಯಶಸ್ವಿಯಾಗಿತ್ತು. ಈ ವರ್ಷ ಕ್ರೀಡಾಕೂಟದ ಆಯೋಜನೆಯೊಂದಿಗೆ ಯುವ ಒಕ್ಕೂಟ ಉತ್ತಮ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ಸ್ಪರ್ಧಾ ಫಲಿತಾಂಶ ವಿವರ: ಎಲ್ಕೆಜಿ ಮತ್ತು ಒಂದನೇ ತರಗತಿ ಬಾಲಕರ ವಿಭಾಗದಲ್ಲಿ ಬೊಳ್ಳು ಮಾನಿ ಕಹನ್ ಪ್ರಥಮ ಸ್ಥಾನವನ್ನು, ನವದೀಪ್ ದ್ವಿತೀಯ ಸ್ಥಾನವನ್ನು, ಕಾವೇರಿ ಮನೆ ಅನ್ವಿತ ತೃತೀಯ ಸ್ಥಾನವನ್ನು ಪಡೆದರು. ಬಾಲಕಿಯರ ವಿಭಾಗದಲ್ಲಿ ನಿಶ್ಚಿತ ಪ್ರಥಮ ಸ್ಥಾನವನ್ನು ತನ್ವಿಕ ದ್ವಿತೀಯ ಸ್ಥಾನವನ್ನು ಪಡೆದರು.2-4 ವಯೋಮಿತಿಯ ಬಾಲಕರ ವಿಭಾಗದಲ್ಲಿ ಮುರಳಿ ಕುಯ್ಯಮುಡಿ ಪ್ರಥಮ ಸ್ಥಾನವನ್ನು, ಗಾಯನ್ ಕಾವೇರಿ ಮನೆ ದ್ವಿತೀಯ ಸ್ಥಾನವನ್ನು ಹಾಗೂ ಚಿಂಗಾಂಡ ಗಾನವ್ ದ್ವಿತೀಯ ಸ್ಥಾನವನ್ನು ಪಡೆದರು. ಬಾಲಕಿಯರ ವಿಭಾಗದಲ್ಲಿ ವರ್ಷಿಣಿ ಬೆಳ್ಳಿಪಾಡಿ ಪ್ರಥಮ ಸ್ಥಾನವನ್ನು, ಚೈತನ್ಯ ತಿದ್ದುಪಡಿ ದ್ವಿತೀಯ ಸ್ಥಾನವನ್ನು, ಯಶಸ್ವಿನಿ ಸುಳ್ಯ ಕೊಡಿ ತೃತೀಯ ಸ್ಥಾನವನ್ನು ಗಳಿಸಿದರು.
5-7 ವಯೋಮಿತಿಯ ಬಾಲಕರ ವಿಭಾಗದಲ್ಲಿ ಸ್ವಾತಿ ಪ್ರಥಮ ಸ್ಥಾನವನ್ನು,ಆಶಿತ್ ಶಿರಕಜ ದ್ವಿತೀಯ ಸ್ಥಾನವನ್ನು, ಚಂದನ್ ಕಾವೇರಿ ಮನೆ ತೃತೀಯ ಸ್ಥಾನವನ್ನು ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಭವಾನಿ ಪ್ರಥಮ ಸ್ಥಾನವನ್ನು ನಿರೀಕ್ಷಾ ದ್ವಿತೀಯ ಸ್ಥಾನವನ್ನು ಲಹರಿ ಕುಂಜಿಲನ ತೃತೀಯ ಸ್ಥಾನವನ್ನು ಪಡೆದರು.
ಪ್ರೌಢಶಾಲಾ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಜಿತನ್ ಬೋಪಣ್ಣ ಪ್ರಥಮ ಸ್ಥಾನವನ್ನು, ಕೀರ್ತನ್ ದ್ವಿತೀಯ ಸ್ಥಾನವನ್ನು, ಗೌತಮ್ ಪನ್ನುಕಂಡ ದ್ವಿತೀಯ ಸ್ಥಾನವನ್ನು ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಕೀರ್ತನ ಪ್ರಥಮ ಸ್ಥಾನವನ್ನು ಪ್ರಜ್ಞಾ ಬಿದ್ಧಿಯಂಡ ದ್ವಿತೀಯ ಸ್ಥಾನವನ್ನು ಚೈತನ್ಯ ರಾಜೇಶ್ ದ್ವಿತೀಯ ಸ್ಥಾನವನ ಗಳಿಸಿದರು.
ಪಿಯುಸಿ ಮತ್ತು ಪದವಿ ಭಾಗದಲ್ಲಿ ಬಾಲಕರ ಕ್ರೀಡಾಕೂಟದಲ್ಲಿ ಜನಿತ್ ಬೋಪಣ್ಣ ಪ್ರಥಮ ಸ್ಥಾನವನ್ನು ನಿಶಾಂತ್ ನಂಜಪ್ಪ ದ್ವಿತೀಯ ಸ್ಥಾನವನ್ನು ಜೀವನ್ ತೃತೀಯ ಸ್ಥಾನವನ್ನು ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಯಶೀಕ ಪ್ರಥಮ ಸ್ಥಾನ, ಬಿಂದು ದ್ವಿತೀಯ ಸ್ಥಾನ ಹಾಗೂ ಸೌಜನ್ಯ ಕುಯ್ಯಮುಡಿ ತೃತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಲಹರಿ ಶಂಕರನ ಪ್ರಥಮ ಸ್ಥಾನವನ್ನು ನಿರ್ಮಲ ದ್ವಿತೀಯ ಸ್ಥಾನವನ್ನು ಭವ್ಯ ಮುಕ್ಕಾಟಿ ತೃತೀಯ ಸ್ಥಾನವನ ಗಳಿಸಿದರು.
30 - 40 ವಯೋಮಾನದ ವಿಭಾಗದಲ್ಲಿ ಸ್ವಾತಿ ಬಿದ್ದಿಯಂಡ ಪ್ರಥಮ ಸ್ಥಾನವನ್ನು ಕಾವೇರಿ ಮನೆ ಸುಗು ದ್ವಿತೀಯ ಸ್ಥಾನವನ್ನು ಲೋಕೇಶ್ ಬಾರಿಕೆ ತೃತೀಯ ಸ್ಥಾನವನ್ನು ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಸೌಜನ್ಯ ಪ್ರಥಮ ಸ್ಥಾನವನ್ನು ,ರೂಪ ಸುಳ್ಯ ಕೊಡಿ ದ್ವಿತೀಯ ಸ್ಥಾನವನ್ನು ಮೈನ ಕಾವೇರಿ ಮನೆ ತೃತೀಯ ಸ್ಥಾನವನ ಗಳಿಸಿದರು.
40 -50 ವಯೋಮಾನದ ವಿಭಾಗದಲ್ಲಿ ಭರತ್ ಕಾವೇರಿ ಮನೆ ಪ್ರಥಮ ಸ್ಥಾನವನ್ನು ತೀರ್ಥ ಕುಮಾರ್ ದ್ವಿತೀಯ ಸ್ಥಾನವನ್ನು ಬಿದ್ದಂಡ ಬಾಬಿ ತೃತೀಯ ಸ್ಥಾನವನ್ನು ಗಳಿಸಿದರು.
50 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಧನು ಕುಯ್ಯಮುಡಿ ಪ್ರಥಮ ಸ್ಥಾನವನ್ನು ಹರೀಶ್ ನಿಡಿಯಮಲೆ ದ್ವಿತೀಯ ಸ್ಥಾನವನ್ನು ಉದ್ದಿಯನ ಲವ ತೃತೀಯ ಸ್ಥಾನವನ್ನು ಗಳಿಸಿದರು.
ಪುರುಷರ ವಾಲಿಬಾಲ್ ಸ್ಪರ್ಧೆಯಲ್ಲಿ ಆರ್ಸಿಬಿ ಭಾಗಮಂಡಲ ಪ್ರಥಮ ಸ್ಥಾನವನ್ನು ಎಂಸಿಬಿ ಗೋಳಿಕಟ್ಟೆ ದ್ವಿತೀಯ ಸ್ಥಾನವನ್ನು ಗಳಿಸಿದರು. ಕೆಸರಗದ್ದೆ ವಾಲಿಬಾಲ್ ಕ್ರೀಡಾಕೂಟದಲ್ಲಿ 11 ತಂಡಗಳು ಪಾಲ್ಗೊಂಡಿದ್ದವು. ಕೆಸರುಗದ್ದೆ ಕ್ರಿಕೆಟ್ ಸ್ಪರ್ಧೆಯಲ್ಲಿ ಕ್ರಿಯೇಟಿವ್ ಭಗವತಿ ತಂಡ ಪ್ರಥಮ ಸ್ಥಾನವನ್ನು ಓಂ ಸಿಸಿ ತಂಡ ದ್ವಿತೀಯ ಸ್ಥಾನವನ್ನು ಗಳಿಸಿದರೆ ಬೆಸ್ಟ್ ಬ್ಯಾಟ್ಸ್ಮನ್ ಆಗಿ ಡ್ಯಾನಿ ಬೆಸ್ಟ್ ಬೌಲರ್ ಆಗಿ ಲಿಖಿತ್ ಹೊರಹೊಮ್ಮಿದರು. ಮಹಿಳೆಯರ ಥ್ರೋ ಬಾಲ್ ಪಂದ್ಯದಲ್ಲಿ 10 ತಂಡಗಳು ಪಾಲ್ಗೊಂಡಿದ್ದು ಮಹಾಲಿಂಗೇಶ್ವರ ಮೂಡಬಿದ್ರೆ ಪ್ರಥಮ ಸ್ಥಾನವನ್ನು ಬ್ಲಾಕ್ ಪ್ಲಾಂಟಸ್ ಮರಗೋಡು ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು. ಪುರುಷರ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಶ್ರೀ ರಾಮಾಂಜನೇಯ ಭಕ್ತ ವ್ಯಾಯಾಮ ಸಂಪಾಜೆ ತಂಡ ಪ್ರಥಮ ಸ್ಥಾನವನ್ನು ಆದರ್ಶ ಫ್ರೆಂಡ್ಸ್ ಚಡವು ಸಂಪಾಜೆ ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು.
ಮಹಿಳೆಯರ ಕೆಸರುಗದ್ದೆ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನಾಗಬ್ರಹ್ಮ ಕೋಡಿಯಾಳ ತಂಡ ಪ್ರಥಮ ಸ್ಥಾನ ಗಳಿಸಿದರೆ ಗೌಡ ಮಹಿಳಾ ಒಕ್ಕೂಟ ಎ ತಂಡ ದ್ವಿತೀಯ ಸ್ಥಾನ ಗಳಿಸಿತು. ಹಗ್ಗ ಜಗ್ಗಾಟದ ಪಂದ್ಯಾಟವನ್ನು ಕೊಡಗು ಗೌಡ ಒಕ್ಕೂಟದ ಕ್ರೀಡಾ ಅಧ್ಯಕ್ಷ ಬಾರಿಕೆ ಅರುಣ್ ಮಂದಣ್ಣ ,ವಾಲಿಬಾಲ್ ಪಂದ್ಯಾಟವನ್ನು ಗೌಡ ಯುವ ಒಕ್ಕೂಟದ ಖಜಾಂಚಿ ಕಾವೇರಿ ಮನೆ ಸುಗು ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಐಯಂಗೇರಿ ಗೌಡ ಯುವ ಒಕ್ಕೂಟ ಅಧ್ಯಕ್ಷ ಕಾವೇರಿ ಮನೆ ಭರತ್ ವಹಿಸಿದ್ದರು.
ಬೆಂಗಳೂರಿನ ಲೀಡಿಂಗ್ ಅಂಡ್ ಅಡ್ವಟೈಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಎಡಿಕೇರಿ ಪ್ರಸನ್ನ ಕುಶಾಲಪ್ಪ, ಗದ್ದೆ ದಾನಿ ಕುದುಪಜೆ ಕುಶಾಲಪ್ಪ ,ಅಯ್ಯಂಗೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಯ್ಯಮುಡಿ ರಂಜು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ಗಜಾನನ ಯುವಕ ಸಂಘದ ಅಧ್ಯಕ್ಷ ಗೌರೀಶ್, ದಾನಿಗಳಾದ ಇಂದುಮತಿ , ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಕುಯ್ಯಮುಡಿ ಮನೋಜ್, ಕ್ರೀಡಾ ನಿರೂಪಕರಾದ ದೇವಸ್ಯ ನಿರಂಜನ್ ,ಕಟ್ಟೆಮನೆ ಸೋನಾಜಿತ್ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಅಯ್ಯಂಗೇರಿ ಗೌಡ ಯುವ ಒಕ್ಕೂಟದ ಸದಸ್ಯರಾದ ಬಾರಿಕೆ ದೀಪಕ್, ಬಾರಿಕೆ ಲಿಖಿತ್ ಸೇರಿದಂತೆ ಯುವ ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು..
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.