ಕನ್ನಡಪ್ರಭ ವಾರ್ತೆ ಶಿರಾ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬುಕ್ಕಾಪಟ್ಟಣದ ಭಾಗದಲ್ಲಿ ೬೦ಕ್ಕೂ ಹೆಚ್ಚು ವಿವಿಧ ರೀತಿಯ ವಿಶೇಷ ಚೇತನ ಮಕ್ಕಳಿದ್ದಾರೆ ಸೇವೆಯ ಅಗತ್ಯ ಇರುವಂತಹ ಮಕ್ಕಳಿಗೆ ಮೊಬಿಲಿಟಿ ಇಂಡಿಯಾ ಸಂಸ್ಥೆಯ ವತಿಯಿಂದ ಉಚಿತವಾಗಿ ಸಹಾಯಕ ಸಾಧನ ಸಲಕರಣೆಗಳು ಹಾಗೂ ಫಿಜಿಯೋಥೆರಪಿಯನ್ನು ನೀಡುತ್ತಿದ್ದಾರೆ ಇದನ್ನು ಸದುಪಯೋಗಪಡಿಸಿಕೊಳ್ಳಿ ಹಾಗೂ ನಿಮ್ಮ ಮಕ್ಕಳ ಬೆಳವಣಿಗೆಗೆ ನೀವು ಸಹಕರಿಸಿ ಎಂದು ತಿಳಿಸಿದರು. ಹಾಗೂ ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘನೆ ಮಾಡಿದರು. ನಂತರ ಸರಕಾರಿ ಪ್ರೌಢಶಾಲೆ ಆವರಣಕ್ಕೆ ಭೇಟಿ ನೀಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿರಾ ತಾಲೂಕಿನ ಶಾಲಾ ಶಿಕ್ಷಣ ಇಲಾಖೆಯ ಸಮನ್ವಯ ಶಿಕ್ಷಣ ಅಧಿಕಾರಿಗಳು ಶ್ರೀ ರಂಗಪ್ಪ, ಮೊಬಿಲಿಟಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕರು ಆನಂದ್ ಎಸ್.ಎನ್, ಚಿತ್ತಯ್ಯ ಒಖW,ಸಿರಾ ತಾಲೂಕಿನ ಕೇಂದ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ದಶರಥ, ಬುಕ್ಕಾಪಟ್ಟಣ ಪ್ರೌಢಶಾಲೆ ಮುಖ್ಯ ಶಿಕ್ಷಕ ಜೈನುಲಾಬ್ದೀನ್ ಖಾಝಿ,ಸಹ ಶಿಕ್ಷಕರಾದ ಬಸವರಾಜು , ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕ ಸಿದ್ದರಾಮಣ್ಣ, ಎಸ್ ಡಿ ಎಂ ಸಿ ಅಧ್ಯಕ್ಷರಾದ ದಯಾನಂದ, ಸದಸ್ಯರಾದ ಜಗನ್ನಾಥ್ , ಗ್ರಾ ಪಂ ಸದಸ್ಯ ದಿವಾಕರ, ಬುಕ್ಕಾಪಟ್ಟಣ ವಿ ಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಜಾನಕಲ್ ಗೋವಿಂದರಾಜು, ಮುಖಂಡರಾದ ಚಿತ್ತಯ್ಯ, ಶಾಂತಕುಮಾರ್, ಗ್ರಾಮ ಪುನರ್ವಸತಿ ಕಾರ್ಯಕರ್ತರು ,ಮೊಬಿಲಿಟಿ ಇಂಡಿಯಾ ಸಂಸ್ಥೆಯ ಸಿಬ್ಬಂದಿಗಳು, ವಿವಿಧ ಗ್ರಾಮಗಳ ವಿಕಲಚೇತನ ಮಕ್ಕಳು, ಪೋಷಕರು, ಹಾಗೂ ಗ್ರಾಮಸ್ಥರು ಹಾಜರಿದ್ದರು.