ರೋಗ ಗುಣವಾಗಲು ಫಿಜಿಯೋಥೆರಪಿ ಉತ್ತಮ ಪದ್ಧತಿ

KannadaprabhaNewsNetwork |  
Published : Feb 17, 2024, 01:16 AM IST
16ಡಿಡಬ್ಲೂಡಿ12ಧಾರವಾಡದ ಎಸ್.ಡಿ.ಎಂ. ಪಿಜಿಯೋಥೆರಪಿ ಕಾಲೇಜು ಹೆಗ್ಗಡೆ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಭೌತಚಿಕಿತ್ಸಕರ ಘಟಕದ ಪ್ರಥಮ ವಾರ್ಷಿಕ ರಾಜ್ಯ ಸಮ್ಮೇಳನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. | Kannada Prabha

ಸಾರಾಂಶ

ದೇಶವನ್ನು ರೋಗ ಮುಕ್ತ ಮಾಡುವಲ್ಲಿ ನಾವೆಲ್ಲರೂ ಶ್ರಮಿಸಬೇಕು. ಭೌತಚಿಕಿತ್ಸಕರು ರೋಗಿಗಳನ್ನು ಆತ್ಮವಿಶ್ವಾಸದಿಂದ ಗುಣಪಡಿಸಬೇಕು ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.

ಧಾರವಾಡ: ಫಿಜಿಯೋಥೆರಪಿ (ಭೌತಚಿಕಿತ್ಸೆ) ಮತ್ತು ಯೋಗ ರೋಗಿಯನ್ನು ಗುಣಪಡಿಸುವಲ್ಲಿ ಉತ್ತಮ ಪದ್ಧತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿಯ ಎಸ್.ಡಿ.ಎಂ. ಪಿಜಿಯೋಥೆರಪಿ ಕಾಲೇಜು ಹೆಗ್ಗಡೆ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಭೌತಚಿಕಿತ್ಸಕರ ಘಟಕದ ಪ್ರಥಮ ವಾರ್ಷಿಕ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶವನ್ನು ರೋಗ ಮುಕ್ತ ಮಾಡುವಲ್ಲಿ ನಾವೆಲ್ಲರೂ ಶ್ರಮಿಸಬೇಕು. ಭೌತಚಿಕಿತ್ಸಕರು ರೋಗಿಗಳನ್ನು ಆತ್ಮವಿಶ್ವಾಸದಿಂದ ಗುಣಪಡಿಸಬೇಕು. ಭಾರತೀಯ ಆರೋಗ್ಯ ವಿಜ್ಞಾನ ವೃತ್ತಿಪರರು ವಿಶ್ವದಲ್ಲಿ ಅತ್ಯುನ್ನತ ವಿಶ್ವಾಸಾರ್ಹತೆ ಹೊಂದಿದ್ದು, ಹೊಸ ಆವಿಷ್ಕಾರ ಮತ್ತು ಜ್ಞಾನದೊಂದಿಗೆ ಮತ್ತಷ್ಟು ನವೀಕರಿಸಿಕೊಳ್ಳಬೇಕು ಎಂದರು.

ಎಸ್‌ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ನಾನವತಿ ಆಸ್ಪತ್ರೆಯ ಮುಖ್ಯಸ್ಥ ಡಾ. ಅಲಿ ಇರಾನಿ, ಡಾ. ಕೆ. ಮಾದವಿ, ಭಾರತೀಯ ಭೌತಚಿಕಿತ್ಸಕರ ಸಂಘದ ಉಪ ಅಧ್ಯಕ್ಷ ಡಾ. ಸುರೇಶ ಬಾಬು ರೆಡ್ಡಿ, ವಿವಿ ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ಡಾ. ಎಸ್.ಕೆ. ಜೋಶಿ, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ, ಸಂಘಟನಾ ಕಾರ್ಯದರ್ಶಿ ಡಾ. ಮಧುಲಿಖಾ ಹೊರಟ್ಟಿ ಇದ್ದರು.

ಎಸ್‌ಡಿಎಂ ಫಿಸಿಯೋಥೆರಪಿಯ ಪ್ರಾಂಶುಪಾಲ ಡಾ. ಸಂಜಯ ಪರಮಾರ ಪ್ರಸ್ತಾವಿಕ ಭಾಷಣ ಮಾಡಿದರು. ಭೌತಚಿಕಿತ್ಸಾ ತಜ್ಞರಿಗೆ ವೃತ್ತಿಪರ ಪ್ರಶಸ್ತಿಗಳನ್ನು ನೀಡಲಾಯಿತು.

ಸಮ್ಮೇಳನದಲ್ಲಿ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಭೌತಚಿಕಿತ್ಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಶರ್ಮಿಳಾ ದುದಾನಿ ನಿರೂಪಿಸಿದರು. ಪ್ರೊ. ಸುಧೀರ ಬಟ್‌ಬೋಲನ್ ಸ್ವಾಗತಿಸಿದರು. ಸಂಘಟನಾ ಸಮಿತಿ ಅಧ್ಯಕ್ಷರಾದ ಡಾ. ಯು. ಟಿ. ಇಫ್ತಿಖರ ಅಲಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!