ಕನ್ನಡಪ್ರಭಬ ವಾರ್ತೆ ಮದ್ದೂರು
ಪಟ್ಟಣದ ಶಿವಕನ್ವೇನ್ಷನ್ ಹಾಲ್‌ನಲ್ಲಿ ನಡೆದ ಬ್ಯಾಂಕ್‌ನ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಬಡ್ಡಿ ಮನ್ನಾ ಯೋಜನೆ ಜಾರಿಗೆ ತಂದ ನಂತರ ಸಾಲಗಾರ ಸದಸ್ಯರು ಬರಗಾಲದ ನಡುವೆಯು ಸಾಲದ ಆಸಲು 1,93,00.004 ಲಕ್ಷ ರು. ಪಾವತಿಸಿದ ಹಿನ್ನೆಲೆಯಲ್ಲಿ ಶೇ.74.27 ರಷ್ಠು ಗುರಿ ಸಾಧಿಸಿದೆ ಎಂದರು.
ಈ ಸಾಧನೆಗೆ ಷೇರುದಾರ ಸಹಕಾರ ಸ್ಮರಣೀಯವಾಗಿದೆ. ಇದರಿಂದ ಜಿಲ್ಲೆಯಲ್ಲೆ ಅತಿ ಹೆಚ್ಚು 2 ಕೊಟಿ 31 ಲಕ್ಷದ 56 ಸಾವಿರ ರು. ಹಣ ರಾಜ್ಯ ಸರ್ಕಾರದಿಂದ ಪಡೆದಿದೆ. ಬಡ್ಡಿಮನ್ನಾ ಯೊಜನೆಯಲ್ಲಿ ಶಾಸಕ ಕೆ.ಎಂ.ಉದಯ್ ಅವರ ಸಹಕಾರವನ್ನು ಸ್ಮರಿಸಿದರು.ಶಾಸಕರು ತುಂಬಾ ಹಳೆಯ ಸಾಲಗಳ ತೀರುವಳಿಗಾಗಿ 7 ಲಕ್ಷದ 58 ಸಾವಿರ ರು.ಗಳನ್ನು ವೈಯಕ್ತಿಕವಾಗಿ ರೈತರ ಪರವಾಗಿ ಭರಿಸಿದ್ದು, ಇದರಿಂದ 17 ಲಕ್ಷದ 34 ಸಾವಿರ ರು. ಬಡ್ಡಿ ಸಹಾಯ ಧನ ಬ್ಯಾಂಕ್‌ಗೆ ಬರಲು ಕಾರಣವಾಗಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಕೃಷ್ಣಪ್ಪ, ಮಾಜಿ ಅಧ್ಯಕ್ಷರಾದ ಸಿದ್ದಮರಿ, ನ.ಲಿ.ಕೃಷ್ಣ ,ಮುತ್ತರಾಜು, ಕೆಂಪೇಗೌಡ, ಮಾಜಿ ಉಪಾಧ್ಯಕ್ಷರಾದ ಸಿದ್ದರಾಮು, ಈರೇಗೌಡ, ಸವಿತಾ, ನಿರ್ದೇಶಕರಾದ ಕೃಷ್ಣೇಗೌಡ, ಮಧು, ರಾಜು ತರೀಕೆರೆ, ಮಹದೇವಯ್ಯ, ಸಣ್ಣಮರಿ ಹಾಜರಿದ್ದರು.