ಬಿಜೆಪಿ ಸಮಾವೇಶದಲ್ಲಿ ಮಾಜಿ ಸ್ಪೀಕರ್, ಮಾಜಿ ಸಚಿವರ ಪಿಕ್‌ಪಾಕೆಟ್‌!

KannadaprabhaNewsNetwork |  
Published : Mar 28, 2024, 12:50 AM IST
ಮಡಿಕೇರಿ ಹಾಗು ಕುಶಾಲನಗರದಲ್ಲಿ ನಡೆದ ಬಿಜೆಪಿ ಸಮಾವೇಶ | Kannada Prabha

ಸಾರಾಂಶ

ಮಡಿಕೇರಿ ಹಾಗು ಕುಶಾಲನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಹಾಗು ವಿಧಾನಸಭೆ ಮಾಜಿ ಅಧ್ಯಕ್ಷ ಕೆ ಜಿ ಬೋಪಯ್ಯ ಅವರ ಜೇಬಿನಿಂದ ಕಳ್ಳರು ರು. 42 ಸಾವಿರ ಹಾಗು ಕಾರ್ಯಕರ್ತರ ನಗದು ಸೇರಿದಂತೆ ಒಟ್ಟು ೫ ಲಕ್ಷಕ್ಕೂ ಹೆಚ್ಚು ಹಣವನ್ನು ಪಿಕ್ ಪಾಕೆಟ್ ಮಾಡಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿಯಲ್ಲಿ ಬುಧವಾರ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಂಡ ಕಾರ್ಯಕರ್ತರ ಸಮಾವೇಶದಲ್ಲಿ ಜೇಬುಕಳ್ಳರು ಕೈಚಳಕ ತೋರಿಸಿದ್ದಾರೆ.ಮಡಿಕೇರಿ ಹಾಗು ಕುಶಾಲನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಹಾಗು ವಿಧಾನಸಭೆ ಮಾಜಿ ಅಧ್ಯಕ್ಷ ಕೆ ಜಿ ಬೋಪಯ್ಯ ಅವರ ಜೇಬಿನಿಂದ ಕಳ್ಳರು ರು. 42 ಸಾವಿರ ಹಾಗು ಕಾರ್ಯಕರ್ತರ ನಗದು ಸೇರಿದಂತೆ ಒಟ್ಟು ೫ ಲಕ್ಷಕ್ಕೂ ಹೆಚ್ಚು ಹಣವನ್ನು ಪಿಕ್ ಪಾಕೆಟ್ ಮಾಡಿರುವ ಘಟನೆ ನಡೆದಿದೆ. ಅಪ್ಪಚ್ಚುರಂಜನ್ ಅವರ ಪರ್ಸ್‌ನಲ್ಲಿದ್ದ ರು. ೨೫ ಸಾವಿರ ಹಾಗು ಬೋಪಯ್ಯ ಅವರ ಜೇಬಿನಲ್ಲಿದ್ದ ೧೭ ಸಾವಿರ ಹಾಗು ಕಾರ್ಯಕರ್ತರ ಜೇಬಿನಿಂದ ಪರ್ಸ್ ಹಾಗು ಹಣ ಕದ್ದಿರುವ ಕಳ್ಳರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ಗಳನ್ನೂ ದೋಚಿದ್ದಾರೆ. ಕಾರ್ಯಕರ್ತರ ಸೋಗಿನಲ್ಲಿ ಸಮಾವೇಶಕ್ಕೆ ಆಗಮಿಸಿದ್ದ ಕಳ್ಳರು ಸೆಲ್ಫಿ ತೆಗೆಯುವ ನೆಪದಲ್ಲಿ ಪರ್ಸ್ ಎಗರಿಸಿದ್ದಾರೆ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಂತೆ ವಾತಾವರಣ ಸೃಷ್ಟಿಸಿ ಹಣ ಹಾಗು ಪರ್ಸ್‌ಗಳನ್ನು ದೋಚಿದ್ದು ಮಡಿಕೇರಿ ಹಾಗು ಕುಶಾಲನಗರ ಠಾಣಾ ಪೊಲೀಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪೊಲೀಸ್ ಇಲಾಖೆ ಖದೀಮರ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದೆ. ಈ ಬೆಳವಣಿಗೆಯಿಂದ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಆತಂಕ ಶುರುವಾಗಿದೆ. ------------------ಕಾರ್ಯಕ್ರಮದಲ್ಲಿ ನಾಲ್ಕೈದು ಹೊಸಮುಖಗಳನ್ನು ಗಮನಿಸಿದೆ. ಇವರ್ಯಾರೂ ಸ್ಥಳೀಯ ಕಾರ್ಯಕರ್ತರಲ್ಲ. ಹೊರಜಿಲ್ಲೆಯಿಂದ ಬಂದ ಕಳ್ಳರ ತಂಡದ ಕೃತ್ಯವಾಗಿದೆ. ಸಮಾವೇಶದಲ್ಲಿ ನೂಕುನುಗ್ಗಲು ಸೃಷ್ಟಿಸಿ ಈ ಕೃತ್ಯ ಎಸಗಲಾಗಿದೆ. ಪೊಲೀಸ್ ಇಲಾಖೆ ತಕ್ಷಣ ಅಂತರ್‌ಜಿಲ್ಲಾ ಚೋರರರನ್ನು ಹಿಡಿಯಲಿ. -ಅಪ್ಪಚ್ಚು ರಂಜನ್, ಮಾಜಿ ಸಚಿವ.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ