ಬಾಲಕಿಯರ ಹಾಸ್ಟೆಲ್‌ನಲ್ಲಿ ಹಂದಿಗಳ ಹಾವಳಿ

KannadaprabhaNewsNetwork |  
Published : Feb 25, 2025, 12:46 AM IST
ಹಾಸ್ಟಲ್ ಆವರಣದಲ್ಲಿ ಹಂದಿಗಳ ಅವಾಸ ಸ್ಥಾನ | Kannada Prabha

ಸಾರಾಂಶ

ವಸತಿ ನಿಲಯದಲ್ಲಿ ಬಳಕೆ ಮಾಡಿದ ನೀರೆಲ್ಲಾ ವಸತಿ ನಿಲಯದ ಪಕ್ಕದಲ್ಲೇ ನಿಲ್ಲುವುದು ಒಂದೆಡೆಯಾದರೆ, ಪಾಯಖಾನೆಯ ಸಂಪರ್ಕ ಸಹ ಸರಿಯಾಗಿ ಕಲ್ಪಿಸದೆ ಇರುವುದರಿಂದ, ಮಲ ಮೂತ್ರ ಶೇಖರಣೆಯಾಗಿ ದುರ್ನಾತ ಬೀರುತ್ತಿದೆ, ಇದರಿಂದ ಹಂದಿಗಳ ಹಾವಳಿ ಜಾಸ್ತಿಯಾಗಿ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರದ ಮಾದನಹಳ್ಳಿ ಕೆರೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಆವರಣ ಹಂದಿಗಳ ಆವಾಸ ಸ್ಥಾನವಾಗಿ ಬದಲಾಗಿದೆ.

ದೊಡ್ಡದಾದ ಒಂದೇ ಕಟ್ಟದಲ್ಲಿ 5ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ, 600 ಜನ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಈ ವಸತಿನಿಲಯದಲ್ಲಿ ಇಬ್ಬರು ವಾರ್ಡನ್ ಗಳು ಇದ್ದಾರೆ. ಆದರೆ ನಿಲಯದ ಆವರಣದಲ್ಲಿ ವಾತಾವರಣ ಗಬ್ಬೆದ್ದು ದುರ್ನಾತ ಬೀರುತ್ತಿದೆ, ಶೌಚಾಲಯದ ನೀರು ಸಂಗ್ರಹ

ಇಲ್ಲಿನ ಪರಿಸ್ಥಿತಿ ನೋಡಿದರೆ, ಚರಂಡಿಯೋ, ಕೊಳಚೆ ಪ್ರದೇಶವೋ ಎಂಬ ಅನುಮಾನ ಮೂಡದೆ ಇರದು. ವಸತಿ ನಿಲಯದ ಶೌಚಾಲಯಗಳಿಂದ ಹೊರ ಹೋಗಬೇಕಾದ ತ್ಯಾಜ್ಯ ನೀರು ಹೊರಹೋಗಲು ವ್ಯವಸ್ಥೆ ಮಾಡದೇ ಇರುವುದರಿಂದ ವಸತಿ ನಿಲಯದ ಗೋಡೆಗೆ ಅಂಟಿಕೊಂಡಂತೆ ನೀರು ನಿಂತು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.

ವಸತಿ ನಿಲಯದಲ್ಲಿ ಬಳಕೆ ಮಾಡಿದ ನೀರೆಲ್ಲಾ ವಸತಿ ನಿಲಯದ ಪಕ್ಕದಲ್ಲೇ ನಿಲ್ಲುವುದು ಒಂದೆಡೆಯಾದರೆ, ಪಾಯಖಾನೆಯ ಸಂಪರ್ಕ ಸಹ ಸರಿಯಾಗಿ ಕಲ್ಪಿಸದೆ ಇರುವುದರಿಂದ, ಮಲ ಮೂತ್ರ ಶೇಖರಣೆಯಾಗಿ ದುರ್ನಾತ ಬೀರುತ್ತಿದೆ, ಇದರಿಂದ ಹಂದಿಗಳ ಹಾವಳಿ ಜಾಸ್ತಿಯಾಗಿ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. 600 ಜನ ವಿದ್ಯಾರ್ಥಿನಿಯರು ಇರುವ ಇಂತಹ ದೊಡ್ಡ ವಸತಿ ನಿಲಯದ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಅಲ್ಲಿನ ಅಧಿಕಾರಿಗಳ ಜವಾಬ್ದಾರಿ, ಆದರೆ ಈ ಬಗ್ಗೆ ಯಾವ ಅಧಿಕಾರಿಯು ತಲೆ ಕೆಡಿಸಿಕೊಂಡಿಲ್ಲ. ಇದು ಪೋಷಕರು ಅಸಮಾಧಾನಕ್ಕೆ ಕಾರಣವಾಗಿದೆ.ಕೊಠಡಿಗಳಲ್ಲಿ ದುರ್ವಾಸನೆ

ಕೊಠಡಿಗಳ ಕಿಟಕಿ ಮೂಲಕ ಸದಾ ದುರ್ನಾತದ ವಾಸನೆ ಬರುತ್ತಿರುವುದರಿಂದ ವಿದ್ಯಾರ್ಥಿನಿಯರಿಗೆ ಓದಿಕೊಳ್ಳಲು, ಊಟ ಮಾಡಲು, ಹಾಗೂ ವಿಶ್ರಾಂತಿ ಪಡೆಯಲೂ ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಸ್ವಚ್ಛತೆ ಬಗ್ಗೆ ಪಾಠ ಮಾಡಿ, ಮಾದರಿಯಾಗಬೇಕಾದ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ, ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ.

ಕೋಟ್‌.................................

ವಸತಿ ನಿಲಯವನ್ನು ಕೆರೆ ಅಂಗಳದಲ್ಲಿ ನಿರ್ಮಾಣ ಮಾಡಲಾಗಿದೆ, ಒಂದು ಭಾಗದಲ್ಲಿ ಕಾಂಪೌಂಡ್ ಇಲ್ಲದೇ ಇರುವುದರಿಂದ ಸಹಜವಾಗಿ ಹಂದಿಗಳು, ಬರುತ್ತವೆ. ಬಳಕೆ ನೀರೆಲ್ಲಾ ಒಂದೇ ಕಡೆ ಶೇಖರಣೆಯಾಗಿ ಈ ರೀತಿಯಾಗಿದೆ, ಶೌಚಾಲಯ ಗುಂಡಿಯೂ ಸಣ್ಣದಾಗಿರುವುದರಿಂದ ತುಂಬಿರಬಹುದು, ಈಗಲೇ ಅದನ್ನು ಸರಿಪಡಿಸಿ ದೊಡ್ಡ ಗುಂಡಿಯನ್ನು ತೆಗೆಸಲಾಗುವುದು.

ವನಜಾಕ್ಷಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ