ತಾಲೂಕಿನ ಮಾಯಸಂದ್ರ ಹೋಬಳಿ ಎಲ್ಲ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ 1000 ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮಿ ಜಯರಾಮ್ ಅವರಿಂದ ಗೋಲಕ ವಿತರಣೆ ಮಾಡಲಾಯಿತು. ಅಲ್ಲದೇ ಜಡೆಯ ಗ್ರಾಮದ ಪದವೀಧರ ವಿದ್ಯಾರ್ಥಿಗೆ ರೋಟರಿ ಕ್ಲಬ್ ವತಿಯಿಂದ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.
ದೊಡ್ಡಶೆಟ್ಟಿಕೆರೆ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಲ್ಲಿ ಹಣ ಕೂಡಿಡಲು ಕಾರ್ಯಕ್ರಮ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮಿ ಜಯರಾಮ್ ಅವರಿಂದ ಕೊಡುಗೆ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಮಾಯಸಂದ್ರ ಹೋಬಳಿ ಎಲ್ಲ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ 1000 ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮಿ ಜಯರಾಮ್ ಅವರಿಂದ ಗೋಲಕ ವಿತರಣೆ ಮಾಡಲಾಯಿತು. ಅಲ್ಲದೇ ಜಡೆಯ ಗ್ರಾಮದ ಪದವೀಧರ ವಿದ್ಯಾರ್ಥಿಗೆ ರೋಟರಿ ಕ್ಲಬ್ ವತಿಯಿಂದ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.
ಬೆಂಗಳೂರು ನಾರ್ಥ್ ವೆಸ್ಟ್ ರೋಟರಿ ಹಾಗೂ ತುರುವೇಕೆರೆ ರೋಟರಿ ಕ್ಲಬ್ ವತಿಯಿಂದ ತುರುವೇಕೆರೆ ತಾಲೂಕಿನ ಮಾಯಸಂದ್ರ, ದೊಡ್ಡಶೆಟ್ಟಿಕೆರೆ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಣವನ್ನು ಕೂಡಿಡುವ ಸಲುವಾಗಿ ಸಾವಿರ ಗೋಲಕ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎನ್. ಆರ್. ಜಯರಾಮ್, ತಾಲೂಕಿನ ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಲ್ಲಿ ಉಳಿತಾಯ ಮನೋಭಾವ ಮೂಡಿಸಲು ಗೋಲಕ ವಿತರಣೆ ಮಾಡಲಾಗುತ್ತಿದೆ. ಇದರಿಂದಾಗಿ ಮಕ್ಕಳು ಹಣ ಉಳಿತಾಯ ಮಾಡುತ್ತಿರುವುದು ಸಂತಸ ಮೂಡಿಸಿದೆ. ಇದೊಂದು ಸದ್ದಿಲ್ಲದೆ ಮಾಡುತ್ತಿರುವ ಜನ ಸೇವೆ ಎಂದು ಬಣ್ಣಿಸಿದರು.
ಬೆಂಗಳೂರು ರೋಟರಿ ಅಧ್ಯಕ್ಷೆ ಲಕ್ಷ್ಮಿಅಚ್ಯುತ ಮಾತನಾಡಿ, ಮಕ್ಕಳಿಗೆ ಗೋಲಕ ನೀಡಿ ಉಳಿತಾಯ ಮನೋಭಾವ ಬೆಳೆಸುತ್ತಿರುವುದು ಶ್ಲಾಘನೀಯ ಕಾರ್ಯ. ನಮ್ಮ ಸಂಘವೂ ಈ ಮಹತ್ಕಾರ್ಯಕ್ಕೆ ಕೈ ಜೋಡಿಸಲಿದೆ ಎಂದು ತಿಳಿಸಿದರು.
ಜಡೆಯ ಗ್ರಾಮದ ಬಡ ಕುಟುಂಬದ ಪದವೀಧರ ವಿದ್ಯಾರ್ಥಿ ಗಂಗಾಧರನ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಉಚಿತವಾಗಿ ಲ್ಯಾಪ್ ಟಾಪ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತುರುವೇಕೆರೆ ರೋಟರಿ ಅಧ್ಯಕ್ಷ ವಿ.ಆರ್. ಉಮೇಶ್, ಪದಾಧಿಕಾರಿಗಳಾದ ಸುನಿಲ್. ಪ್ರಸನ್ನ, ಮುಖ್ಯ ಶಿಕ್ಷಕರಾದ ಕೃಷ್ಣಮೂರ್ತಿ, ರುಕ್ಮಿಣಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.