ಮೆಣಸೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ
ಸಿಗರೇಟ್, ಮದ್ಯ ತಂಬಾಕು ಉತ್ಪನ್ನಗಳು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ. ಮಾದಕ ವಸ್ತುಗಳ ಸೇವನೆ ಮನುಷ್ಯನ ಬದುಕಿನ ವಿನಾಶಕ್ಕೆ ಮುನ್ನುಡಿ ಎಂದು ಶೃಂಗೇರಿ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಯುರ್ವೇದ ವಿಭಾಗದ ಡಾ.ಸುಹಾಸ್ ಹೇಳಿದರು.
ಮೆಣಸೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯ ಆವರಣದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಆರಂಭದಲ್ಲಿ ಕುತೂಹಲದಿಂದಲೋ ಅಥವಾ ಪ್ರೇರಪಿಸಲ್ಪಟ್ಟೋ ನಿಕೋಟಿನ್ ಯುಕ್ತವಾದ ಬೀಡಿ ಸಿಗರೇಟಿನಂತಹ ಮಾದಕ ವಸ್ತು ಸೇವನೆಗೆ ಅಡಿಯಾಳಾಗಿ ಕ್ರಮೇಣ ಶ್ವಾಸಕೋಶ ಕ್ಯಾನ್ಸರ್ ನತ್ತತಳ್ಳುತ್ತದೆ. ಇದರ ಸೇವನೆಯಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯಬೇನೆ, ಹಲವು ರೀತಿ ಗುಣಪಡಿಸಲಾಗದ ರೋಗಗಳ ಉತ್ಪತ್ತಿ ಸ್ಥಾನವಾಗಿ ದೇಹ ಮಾರ್ಪಾಡಾಗುತ್ತದೆ ಎಂದರು.ಅನಾರೋಗ್ಯದ ದೇಹ ಒಮ್ಮೆ ಇಂತಹ ರೋಗಗಳಿಗೆ ಬಲಿಯಾದರೆ ಮತ್ತೆ ಆರೋಗ್ಯ ಪಡೆಯುವುದು ಕಷ್ಟ. ಸತತ 20-30 ವರ್ಷಗಳಿಂದ ಧೀರ್ಘಾವದಿ ಸೇವನೆ ನಂತರ ಅದನ್ನು ತ್ಯಜಿಸಿದರೂ ಈಗಾಗಲೇ ಶಾರೀರಿಕವಾಗಿ ಆಗಿರುವ ಹಾನಿ ಸರಿಮಾಡಲು ಸಾಧ್ಯವಾಗದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.
ಇನ್ನು ಮದ್ಯ ಸೇವನೆ ಇತ್ತೀಚಿನ ದಿನಗಳಲ್ಲಿ ಶೋಕಿ, ಮೋಜು ಆಗಿದೆ. ಸಣ್ಣ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ, ವಿದ್ಯಾವಂತರೂ ಕೂಡ ಆಲ್ಕೋಹಾಲ್ ಸೇವನೆ ಮಾಡುವುದು ರೂಡಿಯಾಗಿದೆ. ಇದು ಕೂಡ ಮನುಷ್ಯನ ಶರೀರದ ಮೇಲೆ ಪರಿಣಾಮ ಬೀರಿ ಹಾನಿಯುಂಟುಮಾಡುತ್ತದೆ. ಸ್ಮರಣಶಕ್ತಿ ಕುಂಠಿತ, ರೋಗನಿರೋಧಕ ಶಕ್ತಿ ಕಡಿಮೆಮಾಡುವುದು. ಕರುಳು ಬೇನೆ, ವಾಂತಿ ಜೀರ್ಣಕ್ರಿಯೆ ಸಮಸ್ಯೆ ಸೇರಿದಂತೆ ಅನೇಕ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಇದರಿಂದ ಜಾಗೃತರಾಗಬೇಕು. ಜನರಲ್ಲಿ ಜನಜಾಗೃತಿ ಮೂಡಿಸಬೇಕು ಎಂದರುಕೇಂದ್ರಿಯ ಸಂಸ್ಕೃತ ಪರಿಸರದ ಸಹಾಯಕ ನಿರ್ದೇಶಕ ಪ್ರೊ.ರಾಮಚಂದ್ರಾಪುರ ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಗಣೇಶ್ ಈಶ್ವರ್ ಭಟ್, ಪ್ರೊ. ರಾಮಚಂದ್ರ ಜೋಯಿಸ್ ಇದ್ದರು.
9 ಶ್ರೀ ಚಿತ್ರ 1-ಶೃಂಗೇರಿ ಮೆಣಸೆಯಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಸುಹಾಸ್ ಮಾಹಿತಿ ನೀಡಿದರು.