ಹನೂರು: ಮಲೆ ಮಹದೇಶ್ವರ ಬೆಟ್ಟದ ಜನತಾ ಕಾಲೋನಿ ಹಾಗೂ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್, ಕಸದ ರಾಶಿ ಹಾಕಲಾಗುತ್ತಿದ್ದು, ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದವರು ದೇವಸ್ಥಾನದ ಹಿಂಭಾಗದಲ್ಲಿ ಬರುವ ಜನತಾ ಕಾಲೋನಿ ಹಾಗೂ ಡಿ. ಲೈನ್ ಅರಣ್ಯ ಪ್ರದೇಶದ ಅಂಚಿನಲ್ಲಿ ಬರುವ ಸ್ಥಳದಲ್ಲಿ ಪ್ಲಾಸ್ಟಿಕ್ ಹಾಗೂ ಕಸದ ಜೊತೆ ದಾಸೋಹದಲ್ಲಿ ಉಳಿಕೆಯಾಗುವ ಅನ್ನವನ್ನು ತಂದು ಪ್ರತಿದಿನ ಇಲ್ಲಿ ಹಾಕುವುದರಿಂದ ಜಾನುವಾರುಗಳು ಅರಣ್ಯ ಪ್ರದೇಶಕ್ಕೆ ಮೇಲು ಹೋಗುವ ರಸ್ತೆ ಯಲ್ಲಿ ಪ್ಲಾಸ್ಟಿಕ್ ಗಳನ್ನು ತಿಂದು ಜಾನುವಾರುಗಳು ಜೊತೆಗೆ ಕಾಡು ಪ್ರಾಣಿಗಳ ಆರೋಗ್ಯ ಹದಗೆಟ್ಟು ಇತ್ತೀಚೆಗೆ ಹಲವು ಪ್ರಾಣಿಗಳು ಸಾವನ್ನಪ್ಪಿದೆ. ಮಲೆ ಮಹದೇಶ್ವರ ಬೆಟ್ಟದ ಕಾರ್‍ಯದರ್ಶಿ ಇಲ್ಲಿ ಹಾಕುತ್ತಿರುವ ಕಸದ ಜೊತೆಗೆ ಅನ್ನವನ್ನು ಹಾಕಲು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲು ನಾಗರಿಕರು ಒತ್ತಾಯಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಜನತಾ ಕಾಲೋನಿಯಲ್ಲಿ ಪ್ಲಾಸ್ಟಿಕ್ ರಾಶಿ ಬಿದ್ದಿರುವುದು.