ಪ್ರತಿ ಗ್ರಾಮಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸರ್ಕಾರದವರು ಹಳ್ಳಿಗಳಿಗೆ ರಸ್ತೆ ನಿರ್ಮಾಣ ಮಾಡಿದ್ದಾರೆ. ಆದರೆ ಈ ರಸ್ತೆ ಪಕ್ಕದಲ್ಲಿ ಗ್ರಾಮಸ್ಥರು ಕಸ ಎಸೆದು ತ್ಯಾಜ್ಯಗಳ ರಾಶಿಯನ್ನೇ ಸೃಷ್ಟಿ ಮಾಡಿದ್ದು, ವಾಹನ ಸಂಚಾರ ದುಸ್ತರವಾಗಿದೆ.
ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದ
ಪ್ರತಿ ಗ್ರಾಮಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸರ್ಕಾರದವರು ಹಳ್ಳಿಗಳಿಗೆ ರಸ್ತೆ ನಿರ್ಮಾಣ ಮಾಡಿದ್ದಾರೆ. ಆದರೆ ಈ ರಸ್ತೆ ಪಕ್ಕದಲ್ಲಿ ಗ್ರಾಮಸ್ಥರು ಕಸ ಎಸೆದು ತ್ಯಾಜ್ಯಗಳ ರಾಶಿಯನ್ನೇ ಸೃಷ್ಟಿ ಮಾಡಿದ್ದು, ವಾಹನ ಸಂಚಾರ ದುಸ್ತರವಾಗಿದೆ.
ಪಟ್ಟಣದ ಹುಬ್ಬಳ್ಳಿ-ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮೀಣ ಪ್ರದೇಶ ವಾಹನಗಳ ಓಡಾಡುವ ರಸ್ತೆಯ ಪಕ್ಕದಲ್ಲಿ ಗ್ರಾಮಸ್ಥರು ಜಾನುವಾರುಗಳ ಶೇಗಣಿ (ತಿಪ್ಪಿ) ಮತ್ತು ತ್ಯಾಜ್ಯಗಳನ್ನು ಹಾಕಿದ್ದರಿಂದ ಇದು ರಸ್ತೆಯೋ ಅಥವಾ ತಿಪ್ಪಿಯೋ ಎನ್ನುವ ಅನುಮಾನ ಬರುವಂತಾಗಿದೆ. ಮೇಲಾಗಿ ವಾಹನಗಳ ಓಡಾಡುವ ರಸ್ತೆ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳು ಇರುವುದರಿಂದ ವಾಹನ ಚಾಲಕರು ಎದುರಿಗೆ ಮತ್ತೊಂದು ವಾಹನ ಬಂದರೆ ಪಕಕ್ಕೆ ವಾಹನ ತೆಗೆಕೊಳ್ಳಬೇಕೆಂದರೆ ಜಾಗ ಇಲ್ಲದ ಸ್ಥಿತಿ ಈ ರಸ್ತೆಗಳಲ್ಲಿ ಕಂಡು ಬರುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ:
ನರಗುಂದಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ನಿಗಮ, ಲೋಕೋಪಯೋಗಿ ಇಲಾಖೆಯ, ಗ್ರಾಪಂ ಅಧಿಕಾರಿಗಳು ಈ ರಸ್ತೆಗಳ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ ರಸ್ತೆ ಪಕ್ಕ ತ್ಯಾಜ್ಯ ಹಾಕುವ ಜನರಿಗೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡದ್ದರಿಂದ ಇಂದು ಈ ವಾಹನಗಳ ಓಡಾಡುವ ರಸ್ತೆಗಳಲ್ಲಿ ತ್ಯಾಜ್ಯ ಹೆಚ್ಚಾಗಿ ಕಾಣಸಿಗುತ್ತಿದೆ.ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲು ಕಾರ್ಮಿಕರನ್ನು ನೇಮಕ ಮಾಡಲು ಗ್ರಾಪಂ ಅಧಿಕಾರಿಗಳಗೆ ಪತ್ರ ಬರೆಯಲಾಗಿದೆ.
ಶ್ರೀಧರ ಚಿನಗುಂಡಿ, ತಾಪಂ ಇಒರಸ್ತೆಗಳ ಸ್ವಚ್ಛತೆಗೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆ ಪಕ್ಕದಲ್ಲಿ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಲಾಗುವುದು.
ಸಂತೋಷ ಕೋಟಿ, ರಾಷ್ಟ್ರೀಯ ಹೆದ್ದಾರಿಯ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ರಾಷ್ಟ್ರೀಯ ಹೆದ್ದಾರಿ ರಸ್ತೆ ಮತ್ತು ಗ್ರಾಮೀಣ ರಸ್ತೆಗಳನ್ನು ಸ್ವಚ್ಛವಾಗಿಡಲು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಇಳಿಯಲಾಗುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.