ಹಳಿಯಾಳದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ದೊರೆಯದ ಜನಬೆಂಬಲ

KannadaprabhaNewsNetwork |  
Published : Nov 18, 2026, 02:15 AM IST
17ಎಚ್.ಎಲ್.ವೈ-1:  ಹಳಿಯಾಳದಲ್ಲಿ ಆರಂಭಗೊಂಡಿರುವ ಎರಡನೇ ಹಂತದ ಸ್ವಚ್ಛತಾ ಅಭಿಯಾನಕ್ಕೆ  ಪಟ್ಟಣವಾಸಿಗಳಿಂದ ಬೆಂಬಲ ದೊರೆಯದೇ ಇರುವುದರಿಂದ ಅಭಿಯಾನವು ಸೊರಗಿದಂತೆ ಕಂಡು ಬಂದಿತು.   | Kannada Prabha

ಸಾರಾಂಶ

ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಹಾಗೂ ಇತರ ಪದಾಧಿಕಾರಿಗಳು ಪ್ರತಿಬಾರಿಯಂತೆ ಅಭಿಯಾನದಲ್ಲಿ ತೊಡಗಿಕೊಂಡಿದ್ದರು. ಆದರೆ ಆಡಳಿತ ಪಕ್ಷ ಕಾಂಗ್ರೆಸ್ಸಿನ ಕೆಲವೇ ಕೆಲವು ಮುಖಂಡರು, ಜನಪ್ರತಿನಿಧಿಗಳು ಶಾಸಕರನ್ನು ಖುಷಿಪಡಿಸಲು ಹಾಜರಾಗಿರುವಂತೆ ಕಂಡುಬಂತು.

ಹಳಿಯಾಳ: ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರ ಕರೆಯ ಮೇರೆಗೆ ಪಟ್ಟಣದಲ್ಲಿ ನ. 16ರಿಂದ ಆರಂಭಗೊಂಡಿರುವ ಸ್ವಚ್ಛತಾ ಅಭಿಯಾನಕ್ಕೆ ಪಟ್ಟಣವಾಸಿಗಳ ಬೆಂಬಲದ ಕೊರತೆ ಎದ್ದು ಕಾಣುತ್ತಿದ್ದು, ಸದುದ್ದೇಶದಿಂದ ಆರಂಭಗೊಂಡಿರುವ ಅಭಿಯಾನ ಸೊರಗಿದಂತೆ ಭಾಸವಾಗುತ್ತಿದೆ.

ಮಂಗಳವಾರ ಬೆಳಗ್ಗೆ ಮೋತಿಕೆರೆಯ ಬಳಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸ್ವತಃ ಶಾಸಕರೇ ಮುಂಚೂಣಿಯಲ್ಲಿ ನಿಂತು ಪ್ರೇರಣೆ ನೀಡಿದರು. ಆದರೂ ಅಭಿಯಾನದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪುರಸಭೆಯ ಸಿಬ್ಬಂದಿ ಹೊರತುಪಡಿಸಿದರೆ, ಪಟ್ಟಣವಾಸಿಗಳ ಹಾಜರಾತಿ ತೀರಾ ಬೆರಳಣಿಕೆಯಷ್ಟೇ ಕಂಡುಬಂತು.

ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಹಾಗೂ ಇತರ ಪದಾಧಿಕಾರಿಗಳು ಪ್ರತಿಬಾರಿಯಂತೆ ಅಭಿಯಾನದಲ್ಲಿ ತೊಡಗಿಕೊಂಡಿದ್ದರು. ಆದರೆ ಆಡಳಿತ ಪಕ್ಷ ಕಾಂಗ್ರೆಸ್ಸಿನ ಕೆಲವೇ ಕೆಲವು ಮುಖಂಡರು, ಜನಪ್ರತಿನಿಧಿಗಳು ಶಾಸಕರನ್ನು ಖುಷಿಪಡಿಸಲು ಹಾಜರಾಗಿರುವಂತೆ ಕಂಡುಬಂತು.

ಕಸ ಎಸೆದ ಗೃಹಿಣಿ: ಸ್ವಚ್ಛತಾ ಕಾರ್ಯ ನಡೆದಿರುವಾಗಲೇ ಗೃಹಿಣಿಯೊಬ್ಬರು ತಮ್ಮ ಮನೆಯ ಕಸವನ್ನು ಚಾವಣಿಯಿಂದಲೇ ಎಸೆದಿದ್ದಾರೆ. ಶಾಸಕರು ಹಾಗೂ ಅಧಿಕಾರಿಗಳೇ ದಂಡೇ ತಮ್ಮ ಮನೆ ಬಾಗಿಲಿಗೆ ಬಂದು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದರೂ, ಅದರಲ್ಲಿ ಭಾಗಿಯಾಗದ ಗೃಹಿಣಿಯು ಕಸ ಎಸೆದಿರುವುದು, ಸಾರ್ವಜನಿಕರೇ ಅಭಿಯಾನದಲ್ಲಿ ಆಸಕ್ತಿಯಿಲ್ಲದಿರುವಂತೆ ಕಂಡುಬರುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮದವರ ಮುಂದೆ ಬೇಸರ ವ್ಯಕ್ತಪಡಿಸಿದರು.ಅಕ್ಟೋಬರ್ ಮೊದಲ ವಾರದಲ್ಲಿ ಮೊದಲ ಹಂತದ ಸ್ವಚ್ಛತಾ ಅಭಿಯಾನ ಯಶಸ್ವಿಯಾದ ಹಿನ್ನೆಲೆ, ಎರಡನೇ ಹಂತದ ಸ್ವಚ್ಛತಾ ಅಭಿಯಾನವನ್ನು ನ. 16ರಿಂದ ಕೈಗೊಳ್ಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾಯುಕ್ತ ಬಲೆಗೆ ಎಸಿ ಕಚೇರಿ ಎಸ್‌ಡಿಎ
ಶಾಂತಿ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು