ತಿರುಪತಿಗೆ ಪಾದಯಾತ್ರೆ: ವೆಂಕಟೇಶ್ವರ ದೇವಾಲಯದಲ್ಲಿ ಧಾರ್ಮಿಕ ಸೇವೆ

KannadaprabhaNewsNetwork |  
Published : Nov 03, 2026, 02:00 AM IST
28ಕೆಎಂಎನ್ ಡಿ13 | Kannada Prabha

ಸಾರಾಂಶ

ತಮ್ಮ ಮನೆ, ಕುಟುಂಬ ಹಾಗೂ ದೈನಂದಿನ ಕೆಲಸ ಕಾರ್ಯಗಳನ್ನು ಬದಿಗಿಟ್ಟು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪಾದಯಾತ್ರೆ ಆರಂಭಿಸಿದ್ದು, ಶ್ರೀನಿವಾಸನ ಮೇಲಿನ ಅಪಾರ ಭಕ್ತಿ, ನಂಬಿಕೆ ಹಾಗೂ ಶ್ರದ್ಧೆಯೊಂದಿಗೆ ಯಾತ್ರಿಗಳು ಕಾಲ್ನಡಿಗೆಯಲ್ಲಿ ನೂರಾರು ಕಿ.ಮೀ ಸಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ತಿರುಪತಿ ಶ್ರೀವೆಂಕಟೇಶ್ವರನ ದರ್ಶನಕ್ಕಾಗಿ ‍ಹತ್ತು ದಿನಗಳ ಕಾಲ ಪಾದಯಾತ್ರೆ ಕೈಗೊಂಡಿರುವ ಕೆ.ಎಂ.ದೊಡ್ಡಿ ವ್ಯಾಪ್ತಿಯ ವಿವಿಧ ಗ್ರಾಮಗಳ ನೂರಾರು ಭಕ್ತರಿಗೆ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ಆಶ್ರಯ ಕಲ್ಪಿಸಲಾಯಿತು.

ಮದ್ದೂರು ತಾಲೂಕಿನ ಯಡಗನಹಳ್ಳಿ, ಸಬ್ಬನಹಳ್ಳಿ, ಯಲಾದಹಳ್ಳಿ, ಬಿದರಹಳ್ಳಿ, ನೆಲಮಾಕನಹಳ್ಳಿ, ನೆಲ್ಲೂರು, ಬನ್ನಹಳ್ಳಿ, ದೊಡ್ಡರಸಿನಕೆರೆ ಹಾಗೂ ಮುಟ್ಟನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ತಿಮ್ಮಪ್ಪನ ದರ್ಶನಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.

ತಮ್ಮ ತಮ್ಮ ಊರುಗಳಿಂದ ಕಾಲ್ನಡಿಗೆ ಮೂಲಕ ಪಾದಯಾತ್ರೆ ಕೈಗೊಂಡಿದ್ದ ಭಕ್ತರಿಗೆ ಮಾರ್ಗಮಧ್ಯೆ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಸೇವಾ ಸಮಿತಿಯಿಂದ ಯಾತ್ರಿಗಳಿಗೆ ಭೋಜನದ ವ್ಯವಸ್ಥೆ ಕಲ್ಪಿಸಿ ಸಮಿತಿ ಸದಸ್ಯರು ಧಾರ್ಮಿಕ ಸೇವೆ ಮಹತ್ವವನ್ನು ಸಾರಿದರು.

ತಮ್ಮ ಮನೆ, ಕುಟುಂಬ ಹಾಗೂ ದೈನಂದಿನ ಕೆಲಸ ಕಾರ್ಯಗಳನ್ನು ಬದಿಗಿಟ್ಟು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪಾದಯಾತ್ರೆ ಆರಂಭಿಸಿದ್ದು, ಶ್ರೀನಿವಾಸನ ಮೇಲಿನ ಅಪಾರ ಭಕ್ತಿ, ನಂಬಿಕೆ ಹಾಗೂ ಶ್ರದ್ಧೆಯೊಂದಿಗೆ ಯಾತ್ರಿಗಳು ಕಾಲ್ನಡಿಗೆಯಲ್ಲಿ ನೂರಾರು ಕಿ.ಮೀ ಸಾಗುತ್ತಿದ್ದಾರೆ. ಪಾದಯಾತ್ರೆಯಲ್ಲಿ ಪುರುಷರ ಜೊತೆಗೆ ಮಹಿಳೆಯರೂ ಕೂಡ ಹೆಚ್ಚಿನ ಉತ್ಸಾಹದಿಂದ ಹೆಜ್ಜೆ ಹಾಕುತ್ತಿರುವುದು ವಿಶೇಷವಾಗಿದೆ. ಎಲ್ಲರೂ ಭಕ್ತಿಭಾವ ಮತ್ತು ಉತ್ಸಾಹದಿಂದ ಸಾಗುತ್ತಿರುವ ಯಾತ್ರೆ ಗಮನ ಸೆಳೆಯುತ್ತಿದೆ.

ದೀರ್ಘ ದೂರದ ಪ್ರಯಾಣ, ಆಯಾಸ ಹಾಗೂ ಹವಾಮಾನದ ಸವಾಲುಗಳನ್ನು ಲೆಕ್ಕಿಸದೆ ಗೋವಿಂದ ನಾಮಸ್ಮರಣೆ ಮಾಡುತ್ತಾ ಭಕ್ತರು ತಿರುಮಲದ ಬೆಟ್ಟದಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರಸ್ವಾಮಿ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ.

ಪಾದಯಾತ್ರೆಯಲ್ಲಿ ಸಾಗುವ ಭಕ್ತರಿಗೆ ಸಮಯಕ್ಕೆ ಸರಿಯಾಗಿ ಆಹಾರ ಮತ್ತು ವಿಶ್ರಾಂತಿ ದೊರೆಯುವುದು ಅತ್ಯಂತಕ. ಈ ನಿಟ್ಟಿನಲ್ಲಿ ಸೇವಾ ಸಮಿತಿ ಕಾರ್ಯ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ದೇವರ ಸೇವೆಯೊಂದಿಗೆ ಭಕ್ತರ ಸೇವೆಯೂ ಶ್ರೇಷ್ಠ ಎಂಬ ಸಂದೇಶವನ್ನು ಇಂತಹ ಅನ್ನದಾಸೋಹದ ಕಾರ್ಯಗಳು ಸಾರುತ್ತವೆ.

ತಿರುಪತಿ ಪಾದಯಾತ್ರೆ ಕೇವಲ ಕಾಲ್ನಡಿಗೆಯ ಪ್ರಯಾಣವಲ್ಲ, ಅದು ಭಕ್ತರ ಅಚಲ ನಂಬಿಕೆ, ಆತ್ಮವಿಶ್ವಾಸ, ತಾಳ್ಮೆ ಹಾಗೂ ದೇವರ ಮೇಲಿನ ಸಮರ್ಪಣೆಯ ಸಂಕೇತವಾಗಿದೆ. ಹೀಗಾಗಿ ಗ್ರಾಮಗಳ ಭಕ್ತರು ಒಟ್ಟಾಗಿ ಸಾಗುತ್ತಿರುವುದು ಪರಸ್ಪರ ಸಹಕಾರ, ಸಾಮರಸ್ಯ ಮತ್ತು ಧಾರ್ಮಿಕ ಐಕ್ಯತೆಯನ್ನು ಪ್ರತಿಬಿಂಬಿಸುತ್ತದೆ. ಗೋವಿಂದ… ಗೋವಿಂದ… ಎಂಬ ನಾಮಸ್ಮರಣೆಯೊಂದಿಗೆ ಸಾಗುತ್ತಿರುವ ಭಕ್ತರ ತಿರುಪತಿ ಪಾದಯಾತ್ರೆ ಸುಗಮವಾಗಿ ನೆರವೇರಲಿ. ಎಲ್ಲರಿಗೂ ಶ್ರೀನಿವಾಸನ ಅನುಗ್ರಹ ದೊರೆಯಲಿ ಎಂದು ಸಮಿತಿ ವತಿಯಿಂದ ಪ್ರಾರ್ಥಿಸಿ ಶುಭ ಹಾರೈಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ