ಹಾಸನ: ರಾಜ್ಯ ಬಿಜೆಪಿ ಕಾರ್ಯದರ್ಶಿ ತಿಮ್ಮೇಶ್ ಗೌಡರ ನೇತೃತ್ವದಲ್ಲಿ ಸುಮಾರು 500 ಕ್ಕೂ ಹೆಚ್ಚು ಕಾರುಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ವಿರುದ್ಧ ಧರ್ಮ ಯಾತ್ರೆ ಎಂಬ ಶೀರ್ಷಿಕೆ ಅಡಿ ಕಾರುಗಳಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಬೈಪಾಸ್ ಹೊರವಲಯದಲ್ಲಿ ಧರ್ಮ ಯಾತ್ರೆಯನ್ನು ಬಿಜೆಪಿ ಮುಖಂಡರಾದ ಸಿ .ಆರ್. ಚಿದಾನಂದ್ ಸ್ವಾಗತಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ್, ಮುಖಂಡರುಗಳಾದ ನಂಜುಂಡಮೈಮ್, ಜಗದೀಶ್ ಕೆರೆಬೀದಿ, ಧರಣೇಶ್, ನಾಗೇಶ್, ರೂಪೇಶ್, ರಂಗೇಗೌಡ, ವಿಶ್ವನಾಥ್, ಸತೀಶ್, ಗುಂಡಶೆಟಿಹಳ್ಳಿ ಮಂಜುನಾಥ್, ಮಂಜೆಶ್, ಗಂಗಾ, ಬಾಬು, ರಂಗನಾಥ್, ಲಿಖಿತ್, ಹೌಸಿಂಗ್ ಬೋರ್ಡ್ ಪ್ರಕಾಶ್, ರಾಮಣ್ಣ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು.