ಜಮಖಂಡಿ : ನಗರದಿಂದ ನೂರಾರು ಭಕ್ತರಿಂದ ಮಂತ್ರಾಲಯಕ್ಕೆ ಗುರು ರಾಯರ ದರ್ಶನಕ್ಕೆ ಪಾದಯಾತ್ರೆ

KannadaprabhaNewsNetwork |  
Published : Jan 09, 2025, 12:49 AM ISTUpdated : Jan 09, 2025, 11:50 AM IST
ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಪಾದಯಾತ್ರಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.  | Kannada Prabha

ಸಾರಾಂಶ

ನಗರದಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಸೋಮವಾರದಿಂದ ಪ್ರಾರಂಭವಾಯಿತು. ನೂರಕ್ಕೂ ಹೆಚ್ಚು ಪಾದಯಾತ್ರಿಗಳು ಮಂತ್ರಾಲಯದ ಗುರುರಾಯರ ದರ್ಶನಕ್ಕೆ ತೆರಳಿದರು.

  ಜಮಖಂಡಿ :  ನಗರದಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಸೋಮವಾರದಿಂದ ಪ್ರಾರಂಭವಾಯಿತು. ನೂರಕ್ಕೂ ಹೆಚ್ಚು ಪಾದಯಾತ್ರಿಗಳು ಮಂತ್ರಾಲಯದ ಗುರುರಾಯರ ದರ್ಶನಕ್ಕೆ ತೆರಳಿದರು.

ನಗರದ ಭಕ್ತಾದಿಗಳನ್ನು ಶುಭಕೋರಿ ಬೀಳ್ಕೊಟ್ಟ ಭಕ್ತರು ಅಗತ್ಯ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸೇವೆ ಸಲ್ಲಿಸಿದರು. 49ನೇಯ ಪಾದಯಾತ್ರೆ ಇದಾಗಿದ್ದು, ನಗರದ ಹತ್ತಿರದ ಪೆಟ್ರೋಲ್‌ ಪಂಪ್‌ನಲ್ಲಿ ಸೋನಿ ಮಿತ್ರ ಮಂಡಲಿಯವರು ಅಲ್ಪೋಪಹಾರದ ವ್ಯವಸ್ಥೆ ಮಾಡಿದ್ದರು. ಆಲಗೂರದ ಜೋಷಿಯವರು ಹಾಲು ವಿತರಿಸಿದರು. ಚಿಕ್ಕಪಡಸಲಗಿ ಗ್ರಾಮದ ಸದಾಶಿವ ಚೌಹಾಣ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು. ರಾಘವೇಂದ್ರ ಎಂಟರ್‌ಪ್ರೈಸಿಸ್‌ನವರು ಅಗತ್ಯ ಔಷಧಿಗಳು ಇರುವ ಕಿಟ್‌ ವಿತರಿಸಿದರು. ಜನವಾಡಗ್ರಾಮದಲ್ಲಿ ಮಜ್ಜಿಗೆ, ಚಿಕ್ಕಲಕಿಕ್ರಾಸ್‌ನಲ್ಲಿ ಚಹಾ ಹಾಗೂ ಕಂಬಾಗಿಯ ಚೌಧರಿ ಎಂಬುವರು ರಾತ್ರಿ ಊಟದ ವ್ಯವಸ್ಥೆ ಮಾಡಿದ್ದರು. ಪಾದಯಾತ್ರೆಗೆ ತೆರಳುವ ಭಕ್ತರಿಗೆ ಅನೇಕ ಆಸ್ತಿಕರು ತಮ್ಮ ಸೇವೆಯ ರೂಪದಲ್ಲಿ ಟೊಪ್ಪಿಗೆ, ಟೀಶರ್ಟಗಳನ್ನು ನೀಡಿ ಭಕ್ತಿ ಸಮರ್ಪಣೆ ಮಾಡಿದರು.

ಕಳೆದ 48 ವರ್ಷಗಳಿಂದ ಪಾದಯಾತ್ರೆ ನಡೆದುಕೊಂಡು ಬಂದಿದೆ. ಅನೇಕ ಭಕ್ತರು ಭಾಗವಹಿಸುತ್ತಿದ್ದು ಪ್ರತಿವರ್ಷ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ರಾಘವೇಂದ್ರ ಹೆರಕಲ್‌ ಹಾಗೂ ಎಸ್‌.ಎನ್‌.ಕುಲಕರ್ಣಿ, ಬೆಳಗಿನ 9 ಗಂಟೆಗೆ ಯಾತ್ರೆ ಪ್ರಾರಂಭವಾಯಿತು. ತಾಲೂಕಿನ ಕಂಬಾಗಿ ಗ್ರಾಮಕ್ಕೆ ರಾತ್ರಿ 7 ಗಂಟೆಗೆ ತಲುಪಲಿದ್ದು ಅಲ್ಲಿಯ ಊಟ ಮುಗಿಸಿಕೊಂಡು ಯಾತ್ರಾರ್ಥಿಗಳು ಮುಂದೆ ಸಾಗುತ್ತಾರೆ. ನಗರದ ದಿಂದ 350 ಕಿ.ಮೀ. ದೂರವಿರುವ ಮಂತ್ರಾಲಯ ತಲುಪಲು 7 ದಿನಗಳು ತಗಲುತ್ತದೆ. 

ದೇವರ,ರಾಯರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಒಂದು ದಿನ ಅಲ್ಲಿಯೇ ಉಳಿದು ಮರುದಿನ ತಮ್ಮತಮ್ಮ ಊರುಗಳಿಗೆ ವಾಹನಗಳ ಮೂಲಕ ವಾಪಸ್ಸಾಗುತ್ತಾರೆ. ಅಲ್ಲಿಂದ ಬಂದ ನಂತರ ಅಷ್ಟೋತ್ತರ, ತೀರ್ಥಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯುತ್ತವೆ. ಉತ್ತರಾಯಣ ಪರ್ವಕಾಲ ಸಂಕ್ರಮಣದ ದಿನ ಪಾದಯಾತ್ರಿಗಳು ಮಂತ್ರಾಲಯ ತಲುಪುತ್ತಾರೆ. ಪರ್ವಕಾಲದಲ್ಲಿ ತೀರ್ಥಸ್ನಾನ, ದೇವರ ದರ್ಶನ, ವಿಶೇಷಪೂಜೆ, ತರ್ಪಣ, ಸೇರಿದಂತೆ ಅನೇಕ ಸೇವಾದಿಗಳನ್ನು ಮಾಡಿಕೊಂಡು ಬರುವ ವಾಡಿಕೆ ಇದೆ ಅದರಂತೆ ಭಕ್ತಾದಿಗಳು ಪಾದಯಾತ್ರೆಗೆ ತೆರಳುತ್ತಾರೆ. 150ಕ್ಕೂ ಹೆಚ್ಚು ಪಾದಯಾತ್ರಿಗಳು ಭಾಗವಹಿಸಿದ್ದಾರೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ